Advertisement

ಕಾರ್ಕಳ: ಮನೆ ನಿವೇಶನ ರಹಿತರ ಧರಣಿ ಮುಷ್ಕರ

04:00 PM Mar 19, 2017 | Team Udayavani |

ಕುಂದಾಪುರ:  ನಗರ ಪ್ರದೇಶ ಸೇರಿ, ಸರಕಾರಿ ಮತ್ತು ಅರಣ್ಯ ಭೂಮಿ ಸಾಗುವಳಿಯಲ್ಲಿರುವ ಬಡವರ ಸರ್ವೆ ಮಾಡಿ, ಪಹಣಿಯ ಸಾಗುವಳಿ ಕಾಲಂನಲ್ಲಿ ಹೆಸರು ಸೇರ್ಪಡೆ ಮಾಡಬೇಕು. ರಾಜ್ಯದ ಗ್ರಾಮ ಹಾಗೂ ನಗರಗಳ ಎಲ್ಲ ಬಡವರಿಗೆ ಕನಿಷ್ಠ 10 ಸೆಂಟ್ಸ್‌ ಹಿತ್ತಲು ಸಹಿತ ಮನೆಯನ್ನು ಉಚಿತವಾಗಿ ಒದಗಿಸಬೇಕು. ಇದಕ್ಕೆ ಬಡವರ ವಸತಿ ಯೋಜನೆಯನ್ನು ಸೂಕ್ತವಾಗಿ ಮಾರ್ಪಡಿಸಬೇಕು. ಈ ಎಲ್ಲಾ ನಿವೇಶನ ರಹಿತರ ಗಣತಿ ನಡೆಸಿ ಫಲಾನುಭವಿ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಸರಕಾರವನ್ನು ಆಗ್ರಹಿಸಿದರು.

Advertisement

ಕಾರ್ಕಳ ತಾಲೂಕಿನಾದ್ಯಂತ ಬಡ ನಿವೇಶನ ರಹಿತರಿಂದ ಮನೆ ನಿವೇಶನಕ್ಕಾಗಿ ಕೋರಿ ಸಲ್ಲಿಸಿದ ಅರ್ಜಿದಾರರು ಕಾರ್ಕಳ ಪುರಸಭೆ ಕಚೇರಿ ಎದುರು ಆಯೋಜಿ ಸಿದ ಬೃಹ‌ತ್‌ ಪ್ರತಿಭಟನ ಧರಣಿಯ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದರು.ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಯು. ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ, ವೆಂಕಟೇಶ ಕೋಣಿ, ಕವಿರಾಜ್‌ ಎಸ್‌. ಶೇಖರ ಕುಲಾಲ್‌, ಸುನಿತಾ ಶೆಟ್ಟಿ, ದಾಮೋದರ ಆಚಾರ್‌, ಜಮೀಲ, ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next