Advertisement
ಶ್ರೀಪಾದರನ್ನು ಸಂಪ್ರದಾಯಬದ್ಧವಾಗಿ ಛತ್ರ ಚಾಮರಾದಿಗಳಿಂದ ಸ್ವಾಗತಿಸಲಾಯಿತು. ಶ್ರೀಪಾದರು ತಮ್ಮ ಚತುರ್ಥ ಪಯಾìಯದ ಪ್ರಧಾನ ಯೋಜನೆಯಾದ ಕೋಟಿ ಗೀತಾ ಲೇಖನ ಯಜದ ಬಗ್ಗೆ ಮಾತನಾಡಿ ಭಗವದ್ಗೀತೆ ಬರೆಯುವ ಮೂಲಕ ತಮ್ಮ ಬೌದ್ಧಿಕ ಸ್ತರವನ್ನು ವಿಸ್ತಾರ ಮಾಡಿಕೊಳ್ಳಲು ಉತ್ತಮ ಅವಕಾಶ ಎಂದರು. ಭಕ್ತರಿಗೆ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಿ ವಿಶ್ವಗೀತಾ ಪರ್ಯಾಯೋತ್ಸವಕ್ಕೆ ಆಹ್ವಾನಿಸಿದರು.
ಉಡುಪಿ ಕುಂಜಿಬೆಟ್ಟು ಕಟ್ಟೆ ಆಚಾರ್ಯ ಮಾರ್ಗದಲ್ಲಿರುವ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅತ್ಯಪೂರ್ವ ಸ್ಮರಣೀಯ ಚಿತ್ರಗಳ ಜೀವನ ಚಿತ್ರ ಪ್ರದರ್ಶನ ನಡೆಯಲಿದ್ದು, ಶ್ರೀ ಸುಗುಣೇಂದ್ರತೀರ್ಥರು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ, ಮಾಜಿ ಶಾಸಕ ಕೆ. ರಘುಪತಿ ಭಟ್ ಭಾಗವಹಿಸಲಿದ್ದಾರೆ. ಜ. 16ರಿಂದ 18ರ ವರೆಗೆ ಬೆಳಗ್ಗೆ 10ರಿಂದ ಸಂಜೆ 7ರ ವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಲಿಯಾಕತ್ ಅಲಿ ತಿಳಿಸಿದ್ದಾರೆ.