Advertisement
ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮತ್ತು ಕಾನೂನು ಜಾರಿಯಾಗದೆ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಪರಿಣಾಮ ನಡೆದಾಡಲೂ ಸಾಧ್ಯವಿಲ್ಲದ ಸ್ಥಿತಿ ಪೇಟೆಯಲ್ಲಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಭಯದ ನಡುವೆ ಅತ್ತಿತ್ತ ಸಾಗಬೇಕಾದ ಪರಿಸ್ಥಿತಿಯಿಂದ ಜನ ತೊಂದರೆ ಅನುಭವಿ ಸುತ್ತಿದ್ದಾರೆ. ಅಪಘಾತಗಳೂ ಹೆಚ್ಚುತ್ತಿದೆ.ನಗರದಲ್ಲಿ ಪಾರ್ಕಿಂಗ್‌ಗೆ ಜಾಗವಿಲ್ಲದ ಕಾರಣ ಬೈಕ್ ಕಾರುಗಳನ್ನು ಬಸ್ ನಿಲ್ದಾಣ ಪಕ್ಕದಲ್ಲಿ, ಅಂಗಡಿ ಮುಂಗಟ್ಟುಗಳ ಮುಂದೆ, ರಸ್ತೆ ಬದಿ ಖಾಲಿ ಜಾಗದಲ್ಲಿ, ಪುಟ್‌ಪಾತ್‌ನಲ್ಲಿ ಇಟ್ಟು ಹೋಗುವುದು ಕಂಡುಬರುತ್ತಿದೆ. ಕೆಲವು ಅಂಗಡಿಯವರು ಗ್ರಾಹಕರಿಗಷ್ಟೇ ಪಾರ್ಕಿಂಗ್ ಎಂದು ಬೋರ್ಡ್ ಹಾಕಿದ್ದಾರೆ.
ಬಸ್ ನಿಲ್ದಾಣದಿಂದ ಶ್ರೀ ವೆಂಕಟರಮಣ ದೇವಸ್ಥಾದ ಪೇಟೆಯುದ್ದಕ್ಕೆ, ಮೂರು ಮಾರ್ಗ, ಪ್ರಕಾಶ್ ಹೊಟೇಲ್ ಮುಂಭಾಗ, ಅನಂತಶಯನ ಸರ್ಕಲ್, ಸ್ಟೇಟ್‌ಬ್ಯಾಂಕ್ ಎದುರು, ಮಾರ್ಕೆಟ್ ರಸ್ತೆ ಹೀಗೆ ವಿವಿಧೆಡೆ ಪಾರ್ಕಿಂಗ್ ಸಮಸ್ಯೆ ಗಂಭಿರ ಸ್ವರೂಪದಲ್ಲಿದೆ.
Related Articles
ಕಾರ್ಕಳದಲ್ಲಿ ಪೂರ್ಣ ಪ್ರಮಾಣದ ಸಂಚಾರಿ ಪೊಲೀಸ್ ಠಾಣೆಯೂ ಇಲ್ಲ. ಇದರಿಂದ ನಿಯಂತ್ರಣಕ್ಕೆ ಯಾರೂ ಇಲ್ಲ, ನಗರದಲ್ಲಿ ಶುಲ್ಕ ಸಹಿತ ಪಾರ್ಕಿಂಗ್ ಅವಶ್ಯಕತೆ ಕುರಿತು ಈ ಹಿಂದಿನ ಪುರಸಭೆ ಆಡಳಿತದಲ್ಲಿ ಚರ್ಚೆಯಾಗಿ ಮಾತಿಗೆ ಸೀಮಿತಗೊಂಡಿದೆ.
Advertisement
ಏನು ಮಾಡಬಹುದು?
- ಪೇಟೆಯೊಳಗೆ ಸಾಮಗ್ರಿ ಇಳಿಸಲು ಸಮಯ ನಿಗದಿ
- ದ್ವಿಚಕ್ರ ವಾಹನ ನಿಲ್ಲಿಸಲು ನಿಗದಿತ ಸ್ಥಳ ಸೂಚಿಸಬೇಕು.
- ನಾಮಫಲಕ ಅಳವಡಿಸಿ ಕಠಿನ ನಿಯಮ ಪಾಲನೆ
- ವಾರದ ದಿನಗಳನ್ನು ಗೊತ್ತುಪಡಿಸಿ ಸೂಚಿತ ಸ್ಥಳದಲ್ಲಿ ವಾಹನ ನಿಲ್ಲಿಸಲು ಕ್ರಮ