ಕಾರ್ಕಳ : ಜಿಲ್ಲೆಯ ಡೀಮ್ಡ್ ಸಮಸ್ಯೆ ಬಗೆಹರಿಸುವಂತೆ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅರಣ್ಯ ಸಚಿವ ಅರವಿಂದ ಲಿಂಬಾವಳಿಯವರನ್ನು ಇಂದು(ಗುರುವಾರ, ಜೂನ್ 17) ಭೇಟಿಯಾಗಿ ಚರ್ಚಿಸಿದ್ದಾರೆ.
ಇದನ್ನೂ ಓದಿ : ಉಕ್ಕಿ ಹರಿಯುತ್ತಿರುವ ಘಟಪ್ರಭೆ : ಮೂರು ಸೇತುವೆಗಳು ಜಲಾವೃತ :ಪ್ರವಾಹ ಭೀತಿಯಲ್ಲಿ ಗ್ರಾಮಸ್ಥರು
ಡೀಮ್ಡ್ ಅರಣ್ಯ ಪ್ರದೇಶದ ಸಮಸ್ಯೆಯಿಂದ ಸಾರ್ವಜನಿಕ ಉದ್ದೇಶದ ಸರಕಾರದ ಹಲವು ಯೋಜನೆಗಳಿಗೆ, ಅಕ್ರಮ ಸಕ್ರಮ ಜಮೀನು ಮಂಜೂರಾತಿಗೆ, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಜಮೀನಿನಲ್ಲಿ ಮನೆ ಮಾಡಿಕೊಂಡವರಿಗೆ 94ಸಿ ಮತ್ತು 94ಸಿಸಿ ಅಡಿ ಹಕ್ಕುಪತ್ರ ನೀಡುವಲ್ಲಿ ಸಮಸ್ಯೆಯಾಗುತ್ತಿದೆ ಎನ್ನುವ ಬಗ್ಗೆ ಸಚಿವರಿಗೆ ತಿಳಿಸಿದ್ದಾರೆ.
ದ.ಕ ಮತ್ತು ಉಡುಪಿ ಜಿಲ್ಲೆಯ ಕುಮ್ಕಿ ಹಕ್ಕನ್ನು ಉಳಿಸಿಕೊಳ್ಳಲು ವಾಸ್ತವದ ಕುಮ್ಕಿ ಹಕ್ಕಿನ ಪ್ರದೇಶಗಳನ್ನು ಕಂದಾಯ ಇಲಾಖೆ ಮುಖಾಂತರ ಗುರುತಿಸಲು ಮತ್ತು ಸೂಕ್ತ ಕಾನೂನು ತಿದ್ದುಪಡಿ ತರಲು ಸರಕಾರಕ್ಕೆ ಈ ಹಿಂದೆ ಒತಾಯಿಸಿರುತ್ತೇನೆ. ಶೀಘ್ರವೇ ಕಾನೂನಿನ ನಿಯಾಮವಳಿಗಳನ್ನು ಸರಿಪಡಿಸಿಕೊಂಡು ತಕ್ಷಣ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಶಪಥ ಪತ್ರ ಸಲ್ಲಿಸುವಂತೆ ಅವರು ಸಚಿವರನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕಾಪು: ತೌಖ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ