Advertisement
ಕಾರ್ಕಳ ಬಸ್‌ನಿಲ್ದಾಣ ವಿಶಾಲ ಜಾಗ ಹೊಂದಿದೆ. ಖಾಸಗಿಯವರು ದಾನ ಪತ್ರದ ಮೂಲಕ ಕೊಟ್ಟ ಜಾಗ ಇದು. ಸೂಕ್ತ ಕಾನೂನು ಪರಿಪಾಲನೆ ಇಲ್ಲದೆ ಇಡೀ ಪರಿಸರ ಅವ್ಯವಸ್ಥಿತವಾಗಿದೆ.
ಕಾರ್ಕಳ ಬಸ್ ನಿಲ್ದಾಣ ಬಹುಕಾಲದಿಂದ ವಿವಾದದ ಕೇಂದ್ರಬಿಂದುವಾಗಿದೆ. ಇದನ್ನು ಬಂಡಿಮಠಕ್ಕೆ ಸ್ಥಳಾಂತರ ಮಾಡಬೇಕು ಎಂಬ ಪ್ರಸ್ತಾವ ಜೀವಂತವಾಗಿಯೇ ಇದೆ. ಸುಮಾರು ಎರಡು ಎಕರೆ ಜಾಗದಲ್ಲಿ ಅಂಡಿಮಠ ಬಸ್ ನಿಲ್ದಾಣ ಅಭಿವೃದ್ಧಿಗೊಳಿಸಿದ್ದರೂ ಸ್ಥಳಾಂತರವಾಗದೆ ಈ ಹಳೆ ಬಸ್‌ನಿಲ್ದಾಣವೇ ಈಗ ಪ್ರಮುಖ ನಗರ ಬಸ್ ನಿಲ್ದಾಣವಾಗಿ ಬಳಕೆಯಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಜತೆ ಸರಕಾರಿ ಬಸ್‌ಗಳೂ ನಿಲ್ಲುತ್ತವೆ. ಸರಕಾರಿ, ಖಾಸಗಿ ಬಸ್ ಚಾಲಕರ ನಡುವೆ ಆಗಾಗ್ಗೆ ಘರ್ಷಣೆ ನಡೆಯುತ್ತಿದೆ. ಇಲ್ಲಿ ಇತರ ವಾಹನಗಳು ನಿಲುಗಡೆಗೊಳಿಸುತ್ತಿರುವುದರಿಂದ ಬಸ್‌ಗಳು ತಿರುಗುವ ವೇಳೆ ಸಮಸ್ಯೆಗಳಾಗುತ್ತವೆ.
Related Articles
- ಖಾಸಗಿ ಮತ್ತು ಸರಕಾರಿ ಬಸ್‌ಗಳಿಗೆ ನಿಲ್ದಾಣದಲ್ಲಿ ಪ್ರತ್ಯೇಕ ಸ್ಥಳ ಗುರುತಿಸುವುದು
- ಬಸ್ ನಿಲ್ದಾಣದೊಳಗೆ ಲಘು, ದ್ವಿಚಕ್ರ ವಾಹನಗಳಿಗೆ ಪ್ರವೇಶ ನಿಷೇಧಿಸುವುದು
- ಬಸ್ ನಿಲ್ದಾಣದಲ್ಲಿ ಸೂಕ್ತ ನಾಮಪಲಕ ಅಳವಡಿಸುವುದು.
- ಖಾಸಗಿ ಲಘು, ದ್ವಿಚಕ್ರ ವಾಹನದವರಿಗೆ ದಂಡ ವಿಧಿಸುವುದು.
Advertisement