Advertisement

Karkala: ಒಳಚರಂಡಿ ಅಲ್ಲ ಹೊರ ಚರಂಡಿಯಾಗಿಬಿಟ್ಟಿದೆ!

03:25 PM Sep 24, 2024 | Team Udayavani |

ಕಾರ್ಕಳ: ಕಾರ್ಕಳ ಪುರಸಭೆಯ ನೂತನ ಆಡಳಿತದ ಮುಂದೆ ಹಲವು ಸವಾಲುಗಳಿವೆ. ಅದರಲ್ಲಿ ಮೊದಲ ಪಂಕ್ತಿಯಲ್ಲಿ  ಕಾಣುವುದು ನಗರದ ಒಳಚರಂಡಿ ಸಮಸ್ಯೆಯ ಶಾಶ್ವತ ನಿವಾರಣೆ.

Advertisement

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇದೆ. ಆದರೆ, ಅದು  ಒಳಚರಂಡಿಯಾಗಿ ಉಳಿದಿಲ್ಲ. ಬದಲಾಗಿ ಹೊರಚರಂಡಿಯಾಗಿ ಹರಿಯುತ್ತಿದೆ. ನಗರದ ಎಲ್ಲೆಂದರಲ್ಲಿ ತ್ಯಾಜ್ಯ ನೀರು ಸೋರಿಕೆಯಿಂದಾಗಿ ಗಬ್ಬೆದ್ದು ಹೋಗಿದೆ. ನಗರ ನೈರ್ಮಲ್ಯ, ಆರೋಗ್ಯ ದೃಷ್ಟಿಯಿಂದ ಈ ಸಮಸ್ಯೆಗೆ  ಪರಿಹಾರ ಕಂಡುಕೊಳ್ಳಲೇಬೇಕಾಗಿದೆ. ಜನರ ನಿರೀಕ್ಷೆಯೂ ಇದೇ ಆಗಿದೆ.

ಮ್ಯಾನ್‌ ಹೋಲ್‌ಗಳು ದುರಸ್ತಿಯಲ್ಲಿ
ಪುರಸಭೆ ವ್ಯಾಪ್ತಿಯಲ್ಲಿ  13 ಕೋ.ರೂ ವೆಚ್ಚದ  ಒಳಚರಂಡಿ ವ್ಯವಸ್ಥೆ  ಜಾರಿಯಲ್ಲಿದೆ. ಪ್ರಮುಖವಾಗಿ ಮೂರು ಮಾರ್ಗದಿಂದ ವೆಂಕಟರಮಣ ದೇವಸ್ಥಾನ, ಮುಂದೆ ಸಾಲ್ಮರ, ಬಂಡಿಮಠದ, ಆನೆಕೆರೆ, ಕಾಬೆಟ್ಟು ಮುಂತಾದ ಪ್ರದೇಶಗಳಲ್ಲಿ  ಹಾದು ಹೋದ ಪೈಪ್‌ ಲೈನ್‌ಗಳ ಮಾರ್ಗದಲ್ಲಿ  ತ್ಯಾಜ್ಯ ನೀರು ಸೋರಿಕೆಯಾಗುತ್ತಿದೆ.

ನಗರದಲ್ಲಿ  ಸುಮಾರು 100ಕ್ಕೂ ಅಧಿಕ ಮ್ಯಾನ್‌ಹೋಲ್‌ಗ‌ಳಿವೆ. ಅವುಗಳು  ದುಸ್ತಿಯಲ್ಲಿವೆ. ಹೀಗಾಗಿ ಒಳಚರಂಡಿಯಲ್ಲಿ  ತ್ಯಾಜ್ಯ ಸರಾಗವಾಗಿ ಹರಿಯದಂತಾಗಿದೆ. ಮಳೆಗಾಲ, ಬೇಸಗೆ ಎರಡೂ ಅವಧಿಯಲ್ಲಿ  ಇಲ್ಲಿನ ಪ್ರಮುಖ ರಸ್ತೆ  ಸಹಿತ ವಿವಿಧೆಡೆ ತ್ಯಾಜ್ಯ ನೀರು ಸೋರಿಕೆಯಾಗುತ್ತಿರುತ್ತದೆ. ಅಲ್ಲಲ್ಲಿ  ಮಲೀನ ನೀರು ಸಂಗ್ರಹವಾಗುತ್ತಿರುತ್ತದೆ. ಇದರಿಂದ ನಗರದ ನಿವಾಸಿಗಳು, ವ್ಯಾಪಾರಿಗಳು, ಪಾದಚಾರಿಗಳು, ನಾಗರಿಕರು, ಶಾಲಾ ಮಕ್ಕಳು ಹೀಗೆ ಎಲ್ಲರೂ ತೊಂದರೆ ಅನುಭವಿಸುತ್ತಿರುತ್ತಾರೆ.

ಏನೇನು ಸಮಸ್ಯೆ?

  • ಅಲ್ಲಲ್ಲಿ ಮ್ಯಾನ್‌ಹೋಲ್‌ಗಳು ಬ್ಲಾಕ್‌ ಆಗಿ ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದೆ.
  • ಮಳೆಗಾಲದಲ್ಲಿ ಕೊಳಚೆ ನೀರು ಮಳೆ ನೀರಿನ ಜತೆ ಸೇರಿ ರಸ್ತೆ, ಆಸುಪಾಸಿನ ಸ್ಥಳಗಳಲ್ಲಿ ಸಂಗ್ರಹವಾಗುತ್ತದೆ.
  • ಸೋರಿಕೆಯಾದ ಮಲೀನ ನೀರು ನಗರ ನಿವಾಸಿಗಳ ಬಾವಿಗೆ ಸೇರಿ ಬಾವಿಯಲ್ಲಿನ ನೀರು ಕಲುಷಿತಗೊಳ್ಳುತ್ತದೆ.
  • ನೀರಿನ ಸಮಸ್ಯೆಯಿಂದಾಗಿ ಕಾಯಿಲೆಗಳೂ ಕಾಣಿಸಿಕೊಳ್ಳುತ್ತಿವೆ.
Advertisement

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next