Advertisement

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

12:55 AM Sep 07, 2024 | Team Udayavani |

ಕಾರ್ಕಳ: ಕಾರ್ಕಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಹಿರ್ಗಾನ ವಲಯದ ಜಯಂತಿ ನಗರ ಅಂಗನವಾಡಿ ಕೇಂದ್ರದ ಕಾರ್ಯ ಕರ್ತೆ ಪ್ರಭಾವತಿ ಅವರನ್ನು ಕರ್ತವ್ಯ ಲೋಪ ಆರೋಪದಲ್ಲಿ ಅಂಗನವಾಡಿ ಕಾರ್ಯಕರ್ತೆ ಗೌರವ ಸೇವೆಯಿಂದ ತಾತ್ಕಾಲಿಕವಾಗಿ ಅಮಾ ನತುಗೊಳಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಸೆ.4ರಂದು ಆದೇಶಿಸಿದ್ದಾರೆ.

Advertisement

ಕುಕ್ಕುಂದೂರು ಗ್ರಾ.ಪಂ. ಅನುದಾನದಿಂದ ನಿರ್ಮಿಸ ಲಾಗಿ ರುವ ಕೊಠಡಿಯ ಉದ್ಘಾಟನೆ ಅಂಗ ವಾಗಿ ಆ.28ರಂದು ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ವತಿಯಿಂದ ಏರ್ಪಡಿಸಿರುವ ಗಣ ಹೋಮ ಹಾಗೂ ಹೆಚ್ಚುವರಿ ಕೊಠಡಿ ಉದ್ಘಾಟನೆ ಮಾಹಿತಿಯನ್ನು ಇಲಾಖೆ ಅಥವಾ ಸ್ಥಳೀಯ ಶಾಸಕರ ಗಮನಕ್ಕೆ ತಂದಿರಲಿಲ್ಲ.

ಕಾರ್ಯಕ್ರಮ ನಡೆ ದಿರುವ ಬಗ್ಗೆ ಸ್ಥಳೀಯರಿಂದ ಇಲಾಖೆಗೆ ತಿಳಿದು ಬಂದಿದ್ದು, ಇದು ಶಿಷ್ಟಾಚಾರ ಉಲ್ಲಂಘನೆ ಆಗಿರುತ್ತದೆ. ಇದಕ್ಕೆ ಸಂಬಂಧಿಸಿ ಜಯಂತಿನಗರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಂಬಂಧಪಟ್ಟ ವಲಯ ಮೇಲ್ವಿ ಚಾರಕಿಗೆ ಕಾರಣ ಕೇಳಿ ಇಲಾಖೆಯಿಂದ ನೋಟೀಸು ನೀಡಲಾಗಿತ್ತು.

ಅಂಗನವಾಡಿ ಕಾರ್ಯಕರ್ತೆ ಮತ್ತು ವಲಯ ಮೇಲ್ವಿಚಾರಕಿ ನೋಟಿಸಿಗೆ ಸಮಜಾಯಿಷಿ ನೀಡಿದ್ದರು. ಸದರಿ ಅಂಗನವಾಡಿ ಕಾರ್ಯಕರ್ತೆಯ ಕರ್ತವ್ಯ ಲೋಪದ ಕುರಿತು ಕೈಗೊಳ್ಳಲು ಅಂಗನವಾಡಿ ಕಾರ್ಯ ಕರ್ತೆ, ಸಹಾಯಕಿಯರ ಆಯ್ಕೆ ಸಮಿತಿ ಅಧ್ಯಕ್ಷೆ ಜಿಲ್ಲಾಧಿಕಾರಿ ಯವರು ಉಲ್ಲೇಖ (6)ರನ್ವಯ ಜಯಂತಿ ನಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರಭಾವತಿ ಯವ ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next