Advertisement
ಕಾರವಾರದಲ್ಲಿ ಜನರು ಸಡಗರ ದಿಂದ ಬಣ್ಣ ಆಡಿದರು .ಮಕ್ಕಳು ,ಮಹಿಳೆಯರು, ಯುವಕರು ,ಯುವತಿಯರು ಹೋಳಿಯನ್ನು ಸಂಭ್ರಮಿಸಿದರು . ಬಣ್ಣ ಹಚ್ಚಿಕೊಂಡು ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ಸೋಮವಾರ ರಾತ್ರಿ ನಗರದ ಕೋಡಿಭಾಗ, ರಂಗಮಂದಿರ, ಮಾರುತಿ ಮಂದಿರ ಬಳಿ ಕಾಮದಹನ ಮಾಡಲಾಯಿತು. ಮಂಗಳವಾರ ಬೆಳಗಿನಿಂದ ಬಣ್ಣ ಚೆಲ್ಲಿ ಹೊಳಿ ಆಡಲಾಯಿತು. ನೀರಿಗೆ ಬಣ್ಣ ಮಿಶ್ರ ಮಾಡಿ ಪರಸ್ಪರ ಎರಚಿ ಸಂಭ್ರಮಿಸಲಾಯಿತು. ಡಿಜೆ ಹಾಕಿ ಬೀದಿ ಬೀದಿಗಳಲ್ಲಿ ನೃತ್ಯ ಮಾಡುವುದು ಕಂಡು ಬಂತು. ಇಡೀ ನಗರ ಬಣ್ಣಗಳಿಂದ ಅಲಂಕರಿಸಿದಂತಿತ್ತು . ವಾರದಿಂದ ವಿವಿಧ ವೇಷಧಾರಿಗಳು, ಸುಗ್ಗಿ ಕುಣಿತ , ವಿವಿಧ ಸಮುದಾಯಗಳು ತಂಡ ಕಟ್ಟಿಕೊಂಡು ತಮ್ಮದೇ ಆದ ಭಿನ್ನ ಶೈಲಿಯಲ್ಲಿ ಹೊಳಿಗೆ ಮೆರಗು ತಂದಿದ್ದವು. ಶಿರಸಿಯಲ್ಲಿ ಬೇಡರ ಕುಣಿತ ವಿಶಿಷ್ಟವಾಗಿತ್ತು. ಅಂಕೋಲಾದ ಬೆಳಂಬಾರ ಸುಗ್ಗಿ ತಂಡ ಗಮನಸೆಳೆಯಿತು.
ಕಾರವಾರದಲ್ಲಿ ಬಣ್ಣ ಆಡಿದ ನಂತರ ಜನರು ಸಮುದ್ರ ಸ್ನಾನಕ್ಕೆ ತೆರಳುವುದು ವಿಶೇಷ. ಮಧ್ಯಾಹ್ನ 12 ರಿಂದ 2 ಗಂಟೆತನಕ ಸಾವಿರಾರು ಜನ ಬೀಚ್ ನಲ್ಲಿ ಸಮಾವೇಶಗೊಂಡು ಸಮುದ್ರ ಸ್ನಾನ ಮಾಡಿದರು. ಇಡೀ ಕಡಲು ಬಣ್ಣ ಉಂಡಂತೆ ರಂಗು ರಂಗಾಗಿತ್ತು. ಜನರ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಇದನ್ನೂ ಓದಿ: ಮಧುಗಿರಿ: ಎರಡು ಲಾರಿಗಳ ನಡುವೆ ಭೀಕರ ಅಪಘಾತ, ಕ್ಲಿನರ್ ಸ್ಥಳದಲ್ಲೇ ಸಾವು