Advertisement

ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಕರವೇ ಸ್ವಾಭಿಮಾನಿ ಬಣ ಒತ್ತಾಯ

05:55 PM Jul 11, 2022 | Team Udayavani |

ಭಾಲ್ಕಿ: ಪಟ್ಟಣದಲ್ಲಿ ಮಹಿಳಾ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಹಳೆ ಪಟ್ಟಣ ಮತ್ತು ಗಂಜ್‌ ಏರಿಯಾದಲ್ಲಿ ಒಂದೂ ಶೌಚಾಲಯಗಳಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಲಿದೆ. ಅದರಲ್ಲಿಯೂ ಮಹಿಳೆಯರಿಗೆ ಶೌಚಾಲಯದ ಕೊರತೆಯಿಂದ ನರಕ ಯಾತನೆ ಅನುಭವಿಸುವಂತಾಗಿದೆ. ತಕ್ಷಣವೇ ಗಂಜ್‌ ಏರಿಯಾದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅದರಲ್ಲಿಯೂ ಮಹಿಳೆಯರಿಗೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಕರವೇ ಪ್ರಮುಖರಾದ ಶ್ರೀನಿವಾಸ ಮೇತ್ರಿ, ನಿಜಗುಣಾನಂದ ಸ್ವಾಮಿ, ಧೂಳಪ್ಪ ಮಡಿವಾಳ, ವಿಯಕುಮಾರ ಮೇತ್ರಿ, ದತ್ತಾತ್ರಿ ಕಾಕನಾಳೆ, ಓಂಕಾರ ಮಜಕುರಿ, ಅನೀಲಕುಮಾರ ಹಾಳೆ, ದೀಪಕ ಶಿಂಧೆ, ಬಾಲಾಜಿ ಖೇಡಕರ, ದೀಪಕ ಹಜಾರೆ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next