Advertisement

ತಾಯ್ನಾಡಿಗೆ ಬರಲು ಕಾಯುತ್ತಿರುವ ಕೊಲ್ಲಿಯ 5 ರಾಷ್ಟ್ರಗಳ ಕರಾವಳಿಗರು

08:48 AM May 14, 2020 | Hari Prasad |

ಉಡುಪಿ: ಮಂಗಳವಾರ ರಾತ್ರಿ ದುಬಾೖಯಿಂದ ಕರಾವಳಿ ಕನ್ನಡಿಗರ ಮೊದಲ ತಂಡ ತಾಯ್ನಾಡಿಗೆ ಬಂದಿಳಿದಿದ್ದರೆ ಅಲ್ಲೇ ಅಕ್ಕಪಕ್ಕದಲ್ಲಿರುವ ಕತಾರ್‌, ಬಹ್ರೈನ್‌, ಸೌದಿ ಅರೇಬಿಯ, ಒಮಾನ್‌, ಕುವೈಟ್‌ಗಳಲ್ಲಿರುವ ಕರಾವಳಿ ಕನ್ನಡಿಗರೂ ಕಾತರದಿಂದ ಕಾಯುತ್ತಿದ್ದಾರೆ.

Advertisement

ಕತಾರ್‌ನಿಂದ ಸುಮಾರು 1,300 ಜನರು ಊರಿಗೆ ಬರಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ಕರ್ನಾಟಕ ಕರಾವಳಿಯವರೇ ಹೆಚ್ಚು. ಬೆಂಗಳೂರು, ಮೈಸೂರು, ಮಂಡ್ಯ ಮೊದಲಾದೆಡೆ ಹೋಗುವವರು ಬೆಂಗಳೂರಿನ ಮೂಲಕ ಹೋಗುವವರಾದರೆ, ಅತ್ತ ಕಾಸರಗೋಡು, ಇತ್ತ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಭಟ್ಕಳ, ಬೈಂದೂರಿನವರೆಗೆ ಹೋಗುವವರು ಮಂಗಳೂರನ್ನು ಆಶ್ರಯಿಸಬೇಕಾಗಿದೆ.

ಈಗ ಬೆಂಗಳೂರಿಗೆ ವಿಮಾನ ಯಾನಕ್ಕೆ ತಾತ್ವಿಕ ಸಮ್ಮತಿಯಾಗಿದ್ದರೂ ಮಂಗಳೂರಿಗೆ ಆಗಿಲ್ಲ ಎನ್ನುವ ಕೊರಗು ಕತಾರ್‌ನಲ್ಲಿರುವ ಕರಾವಳಿ ಭಾಗದವರಿಗೆ ಇದೆ ಎನ್ನುತ್ತಾರೆ ಕತಾರ್‌ನಲ್ಲಿರುವ ಭಾರತೀಯ ಸಮುದಾಯ ಹಿತೈಷಿ ಸಮಿತಿಯ ಮುಂದಾಳು ಸುಬ್ರಹ್ಮಣ್ಯ ಹೆಬ್ಟಾಗಿಲು.

ಅಮೆರಿಕ, ಇಂಗ್ಲೆಂಡ್‌, ಜರ್ಮನಿ ಇತ್ಯಾದಿ ರಾಷ್ಟ್ರಗಳಲ್ಲಿರುವ ಕನ್ನಡಿಗರಿಗೂ ಕೊಲ್ಲಿ ರಾಷ್ಟ್ರಗಳಲ್ಲಿರುವವರಿಗೂ ಅಜಗಜಾಂತರವಿದೆ. ಆ ದೇಶಗಳಲ್ಲಿರುವವರು ಐಟಿ, ಬಿಟಿ ವೈಟ್‌ಕಾಲರ್‌ ವ್ಯಕ್ತಿಗಳಾದರೆ, ಕೊಲ್ಲಿ ರಾಷ್ಟ್ರದಲ್ಲಿರುವ ಹೆಚ್ಚಿನವರು ಕಾರ್ಮಿಕ ವರ್ಗದವರು.

ಲಾಕ್‌ಡೌನ್‌ ಕಾರಣ ಶಾಪಿಂಗ್‌ ಮಾಲ್‌ಗ‌ಳು, ಸೆಲೂನ್‌ಗಳು, ಪಬ್‌ಗಳು, ರೆಸ್ಟೋರೆಂಟ್‌ಗಳು ಬಂದ್‌ ಆಗಿವೆ. ಅಂತಹ ಕಡೆಗಳಲ್ಲಿ ಉದ್ಯೋಗ ನಿರತ ಕರಾವಳಿಯ ಮಂದಿ ಅತಂತ್ರರಾಗಿದ್ದು, ಊರಿನತ್ತ ಮುಖಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಮಂಗಳೂರು ಕಾಪಿಕಾಡಿನ ಪ್ರದೀಪ್‌.

Advertisement

ಕರ್ನಾಟಕ ಕರಾವಳಿಯವರ ಆರ್ಥಿಕ ಚಟುವಟಿಕೆ ನಿಂತಿರುವುದೇ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುವವರ ಮೇಲೆ. ಒಂದು ವೇಳೆ ಇವರ ಆದಾಯದ ಮೇಲೆ ಏಟು ಬಿದ್ದರೆ ಕರಾವಳಿಯ ಆರ್ಥಿಕತೆ ಚಿತ್ರಣವೇ ಬದಲಾಗುವ ಅಪಾಯವಿದೆ.

ನಾವು ಶೇ. 100 ಜನರು ತಾಯ್ನಾಡಿಗೆ ಬರುವುದಿಲ್ಲ. ಆದ್ಯತೆ ಮೇಲೆ ಬರುತ್ತಿದ್ದೇವೆ ಎಂದು ಕೊಲ್ಲಿ ರಾಷ್ಟ್ರದ ಕರಾವಳಿ ಕನ್ನಡಿಗರು ಕೇಂದ್ರ ಸರಕಾರವನ್ನು ಕೋರಿಕೊಂಡಿದ್ದಾರೆ. ಐದೂ ದೇಶಗಳಿಂದ ಬರಲು ವಿಮಾನ ಯಾನ ಕಲ್ಪಿಸಿದರೆ ನಾಲ್ಕೈದು ಸಾವಿರ ಜನರು ಹುಟ್ಟೂರಿಗೆ ಬರುವ ಸಾಧ್ಯತೆ ಇದೆ. ದುಬಾೖಯಿಂದ ಬರುವವರಿಗೆ ಇನ್ನೂ ಹೆಚ್ಚುವರಿ ವಿಮಾನ ಯಾನದ ಅಗತ್ಯವಿದೆ.

ಮಂಗಳೂರಿಗೆ ಆಗಮಿಸಲು ನಿರ್ಧರಿಸಿದ್ದೆವು. ಆದರೆ ತುರ್ತು ಆವಶ್ಯಕತೆಯವರಿಗೆ ಆದ್ಯತೆ ಎಂದ ಕಾರಣ ನಮಗೆ ಅವಕಾಶ ಲಭಿಸಿಲ್ಲ.
– ಪ್ರದೀಪ್‌, ದುಬಾೖ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next