Advertisement

Karachi; ಪಾಕಿಸ್ಥಾನ-ಚೀನ ಜಂಟಿ ಸಮರಾಭ್ಯಾಸ ಶುರು

11:12 PM Nov 13, 2023 | Team Udayavani |

ಕರಾಚಿ: ಪಾಕಿಸ್ಥಾನದ ಪ್ರಧಾನ ಬಂದರು ಇರುವ ಕರಾಚಿಯಲ್ಲಿ ಚೀನದ ಅತ್ಯಾಧುನಿಕ ಸಬ್‌ಮರೀನ್‌ಗಳು, ಯುದ್ಧ ನೌಕೆಗಳು ಬೀಡು ಬಿಟ್ಟಿರುವ ಅಂಶ ಪತ್ತೆಯಾಗಿದೆ. ಚೀನ ಮತ್ತು ಪಾಕಿಸ್ಥಾನದ ನೌಕಾಪಡೆಗಳು ಅರಬ್ಬೀ ಸಮುದ್ರದ ಉತ್ತರ ಭಾಗದಲ್ಲಿ ಸಮರಾಭ್ಯಾಸ ಶುರು ಮಾಡಿರು ವಂತೆಯೇ ಈ ಬೆಳವಣಿಗೆ ನಡೆದಿದೆ.

Advertisement

ಆಫ್ರಿಕಾ ಖಂಡದ ಡಿಜಿಬೌತಿ ಎಂಬಲ್ಲಿ ಅತ್ಯಾ ಧುನಿಕವಾಗಿರುವ ಬಂದರು, ಯುದ್ಧ ನೌಕೆಗಳ ನಿಲುಗಡೆಗೆ ಬೇಕಾಗಿರುವ ವ್ಯವಸ್ಥೆ, ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುದ್ಧ ನೌಕೆಗಳನ್ನು ನಿಯೋಜನೆ ಮಾಡು ತ್ತಿರುವಂತೆಯೇ ಪಾಕಿಸ್ಥಾನದ ಜತೆಗೆ ಚೀನ ಸಮರಾಭ್ಯಾಸ ಆರಂಭಿಸಿದೆ.

ಭಾರತದ ವಿರುದ್ಧ ಒಂದಲ್ಲ ಒಂದು ರೀತಿಯಲ್ಲಿ ಚಿತಾವಣೆ ನಡೆಸುತ್ತಿರುವ ಎರಡು ದೇಶಗಳ ಸಮರಾಭ್ಯಾಸದಲ್ಲಿ ತೊಡಗಿವೆ. ಸದ್ಯ ಕೊಲೊಂಬೋ ಬಂದರಿನಲ್ಲಿ ಲಂಗರು ಹಾಕಿರುವ ಶಿ ಯಾನ್‌6 ಎಂಬ ಹಡಗು ತಮಿಳುನಾಡು ಮತ್ತು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹಗಳ ನಡುವೆ ಸಂಚರಿಸಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next