ಕಾಪು: ಪ್ರತ್ಯೇಕ ಸ್ಥಳಗಳಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿ ನರಳಾಡುತ್ತಿದ್ದ ವ್ಯಕ್ತಿ ಮತ್ತು ಕೋತಿಯನ್ನು ಒಂದೇ ದಿನ ರಕ್ಷಿಸುವ ಮೂಲಕ ಕಾಪುವಿನ ಯುವಕರು ಮಾನವೀಯತೆ ಮೆರೆದಿದ್ದಾರೆ.
ಕಾಪು ಪೇಟೆಯಲ್ಲಿ ತಿರುಗಾಡುತ್ತಿದ್ದ ಪಣಿಯೂರು ಮೂಲದ ಮಾನಸಿಕ ಅಸ್ವಸ್ಥನೋರ್ವ ಕೈಯಲ್ಲಿ ಗಾಯವುಂಟಾಗಿ ವೇದನೆ ಪಡುತ್ತಿದ್ದ. ಇದನ್ನು ಗಮನಸಿದ ಕಾಪುವಿನ ಪ್ರಶಾಂತ್ ಪೂಜಾರಿ ಮತ್ತು ಶಿವಾನಂದ ಪೂಜಾರಿ ಜೊತೆಗೂಡಿ ಆರೈಕೆ ಮಾಡಿದ್ದು ಬಳಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮತ್ತೊಂದು ಘಟನೆಯಲ್ಲಿ ಎಲ್ಲೂರು ಗ್ರಾಮದ ಕುಂಜೂರು ದುರ್ಗಾ ನಗರದ ಮನೆಯೊಂದರ ಬಳಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಕೋತಿಯನ್ನು ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ, ಆರೈಕೆ ಮಾಡಿ ಅರಣ್ಯ ಇಲಾಖೆಯ ಸುಪರ್ದಿಗೆ ನೀಡಿದ್ದಾರೆ.
ಇದನ್ನೂ ಓದಿ:ಹೊಸಹಳ್ಳಿಯಲ್ಲಿ ಹೊಯ್ಸಳರ ಕಾಲದ ವೀರಗಲ್ಲು ಪತ್ತೆ
ಈ ಕಾರ್ಯಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಅಭಿಲಾಷ್, ಸ್ಥಳೀಯರಾದ ರಕ್ಷಿತ್, ಮತ್ತು ಸುಜನ್ ಯುವಕರೊಂದಿಗೆ ಸಹಕರಿಸಿದ್ದರು.
ಪ್ರಶಾಂತ್ ಪೂಜಾರಿ ಮತ್ತು ಶಿವಾನಂದ ಪೂಜಾರಿ ಯಾನೆ ಮುನ್ನ ಅವರ
ಮನುಷ್ಯ ಮತ್ತು ಪ್ರಾಣಿ ಪ್ರೇಮದ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.