Advertisement
ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ತಾಲೂಕು ಆಡಳಿತವು ಚುನಾವಣಾ ಪೂರ್ವಭಾವಿಯಾಗಿ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ಚುನಾವಣೆಗೆ ಸಜ್ಜಾಗಿದೆ.
ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಕೈಪುಂಜಾಲು, ಪೊಲಿಪುಗುಡ್ಡೆ, ಕೊಂಬಗುಡ್ಡೆ ಹಾಗೂ ಅಹಮದಿ ಮೊಹಲ್ಲಾ ಅತೀ ಸೂಕ್ಷ ಮತಗಟ್ಟೆಗಳಾಗಿದ್ದು, 8ಸೂಕ್ಷ ಹಾಗೂ 11 ಸಾಮಾನ್ಯ ಮತಗಟ್ಟೆಗಳಿವೆ. ಚುನಾವಣಾ ಕರ್ತವ್ಯಕ್ಕೆ 77 ಪೊಲೀಸರನ್ನು ನಿಯೋಜಿಸಲಾಗಿದೆ.
Related Articles
Advertisement
67 ಮಂದಿ ಕಣದಲ್ಲಿ
ಕಾಪು ಪುರಸಭೆಯ 23 ವಾರ್ಡ್‌ಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 23 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್ 7, ಎಸ್‌ಡಿಪಿಐ 9, ವೆಲ್ಪೇರ್ ಪಾರ್ಟಿ ಇಂಡಿಯಾ 2 ಮತ್ತು ಪಕ್ಷೇತರ 3 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.
ಪುರಸಭೆಯ ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟೈಟ್ ಫೈಟ್ ನಿರೀಕ್ಷಿಸಲಾಗುತ್ತಿದ್ದು ಜೆಡಿಎಸ್, ಎಸ್‌ಡಿಪಿಐ, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕೂಡಾ ಪುರಸಭೆಯಲ್ಲಿ ಖಾತೆ ತೆರಯುವ ನಿರೀಕ್ಷೆಯಲ್ಲಿವೆ. ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಲು ಪಕ್ಷೇತರರೂ ಕೂಡಾ ಶ್ರಮ ವಹಿಸುತ್ತಿದ್ದಾರೆ.
ಕೈಪುಂಜಾಲು, ಕೋತಲಕಟ್ಟೆ, ಕರಾವಳಿ, ಪೊಲಿಪುಗುಡ್ಡೆ, ದಂಡತೀರ್ಥ, ಪೊಲಿಪು, ಕಲ್ಯಾ, ಕಾಪು ಪೇಟೆ, ಕೊಪ್ಪಲಂಗಡಿ, ತೊಟ್ಟಂ, ಜನಾರ್ದನ ದೇವಸ್ಥಾನ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿ ನಡೆಯಲಿದ್ದು, ಲೈಟ್ ಹೌಸ್, ಜನರಲ್ ಶಾಲೆ, ಗುಜ್ಜಿ, ದುಗ್ಗನ್ ತೋಟ, ಕುಡ್ತಿಮಾರ್‌ನಲ್ಲಿ ತ್ರಿಕೋನ ಸ್ಪರ್ಧೆ, ಗರಡಿ, ಅಹಮದಿ ಮೊಹಲ್ಲಾ, ಭಾರತ್ ನಗರ, ಮಂಗಳಪೇಟೆ, ಬೀಡು ಬದಿಯಲ್ಲಿ ಚತುಷ್ಕೋನ ಹಾಗೂ ಬಡಗರಗುತ್ತು, ಕೊಂಬಗುಡ್ಡೆ ವಾರ್ಡ್‌ನಲ್ಲಿ ತಲಾ ಐವರು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.