Advertisement

ಫೆ.13ರಿಂದ ಕಪ್ಪತಗುಡ್ಡ ಉಳಿವಿಗಾಗಿ ಉಪವಾಸ

11:58 AM Feb 11, 2017 | Team Udayavani |

ಬೆಂಗಳೂರು: ಗದಗ ಜಿಲ್ಲೆಯ ಕಪ್ಪತಗುಡ್ಡ ಪ್ರದೇಶವನ್ನು “ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ’ ಎಂದು ಘೋಷಿಸುವಂತೆ ಆಗ್ರಹಿಸಿ “ಕಪ್ಪತಗುಡ್ಡ ಉಳಿಸಿ ಹೋರಾಟ ಸಮಿತಿ’ ಫೆ.13ರಿಂದ ಮೂರು ದಿನಗಳ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ. 

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಗದಗ ನಗರದ ಗಾಂಧಿ ವೃತ್ತದಲ್ಲಿ ಫೆ.13ರಿಂದ 15ರವರೆಗೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಇದರಲ್ಲಿ ಜನಸಂಗ್ರಾಮ ಪರಿಷತ್‌ನ ಎಸ್‌.ಆರ್‌.ಹಿರೇಮs…, ರಾಘವೇಂದ್ರ ಕುಷ್ಠಗಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳು, ಪ್ರಜ್ಞಾವಂತರು, ವಿದ್ಯಾರ್ಥಿಗಳು, ರೈತರು ಭಾಗವಹಿಸಲಿದ್ದಾರೆ ಎಂದರು.

ಈ ಹೋರಾಟಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ಪರಿಸರವಾದಿ ಎ.ಎನ್‌.ಯಲ್ಲಪ್ಪರೆಡ್ಡಿ ಸೇರಿದಂತೆ ಹಲವು ಹಿರಿಯರು ಬೆಂಬಲ ಸೂಚಿಸಿದ್ದಾರೆ. ಉಪವಾಸ ಸತ್ಯಾಗ್ರಹ ಅಂತ್ಯಗೊಳ್ಳುವ ಫೆ.15ರೊಳಗೆ ಕಪ್ಪತಗುಡ್ಡ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಎಂಬ ಆದೇಶ ಹೊರಡಿಸದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

80 ಸಾವಿರ ಎಕರೆ ವಿಸ್ತೀರ್ಣದ ಕಪ್ಪತಗುಡ್ಡ ಗದಗ ಜಿಲ್ಲೆಯ ಸಂಜೀವಿನಿ ವನವಿದ್ದಂತೆ. ಇಲ್ಲಿ ನೂರಾರು ಬಗೆಯ ಗಿಡಮೂಲಿ ಕೆಗಳು, ಜೀವಸಂಕುಲದ ತಾಣ ವಾಗಿದೆ. ಆದರೆ, ರಾಜ್ಯ ಸರ್ಕಾರ ಬಲೊªàಟಾ ಕಂಪನಿಗೆ ಗಣಿಗಾರಿಕೆ ಅವಕಾಶ ನೀಡುವ ಸಲುವಾಗಿ “ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ’ ಮಾನ್ಯತೆಯಿಂದ ಕೈಬಿಟ್ಟಿದೆ ಎಂದು ಆರೋಪಿಸಿದರು.

ಕಪ್ಪತ ಗುಡ್ಡ ಉಳಿಸದೇ ಹೋದರೆ ಅಲ್ಲಿನ ಅಮೂಲ್ಯ ಗಿಡಮೂಲಿಕೆಗಳು, ಸಸ್ಯ ಸಂಕುಲ, ಪ್ರಾಣಿ, ಪಕ್ಷಿ, ಪಶು ಸಂಕುಲ ಕೆಲವೇ ವರ್ಷಗಳಲ್ಲಿ ಸರ್ವ ನಾಶವಾಗುತ್ತವೆ. ಜಿಲ್ಲೆಯ ಇಡೀ ಜನಸಮುದಾಯ ಎಚ್ಚೆತ್ತುಕೊಂಡು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಇದೇ ವೇಳೆ ಅವರು ಮನವಿ ಮಾಡಿದರು. ಈ ವೇಳೆ ಜನ ಸಂಗ್ರಾಮ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಸಿ.ಎನ್‌.ದೀಪಕ್‌, ಸಾಮಾಜಿಕ ಹೋರಾಟಗಾರ ರವಿಕಾಂತ ಅಂಗಡಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next