Advertisement

ಕೇಜ್ರಿಗೆ ಜೈನ್‌ 2 ಕೋಟಿ ಲಂಚ: ಆಪ್‌ನ ಮಾಜಿ ಸಚಿವ ಮಿಶ್ರಾ ಬಾಂಬ್‌!

12:43 PM May 07, 2017 | |

ಹೊಸದಿಲ್ಲಿ : ಆಮ್‌ ಆದ್ಮಿ ಪಕ್ಷದಲ್ಲಿನ ಆಂತರಿಕ ಕಲಹ ತಾರಕಕ್ಕೇರಿದ್ದು ಇದಕ್ಕೆ ಸಾಕ್ಷಿಯಾಗಿ ಸಂಪುಟದಿಂದ ಕೈಬಿಟ್ಟ ಸಚಿವ ಕಪಿಲ್‌ ಮಿಶ್ರಾ ಅವರು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ  2 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಮಾಡಿದ್ದಾರೆ.

Advertisement

ಭಾನುವಾರ ರಾಜ್‌ ಘಾಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಪಿಲ್‌ ಮಿಶ್ರಾ ಜಲ ಹಗರಣದ ಕುರಿತು ಮಾತನಾಡಿದರು. ಸಚಿವ ಸಂತ್ಯೇಂದ್ರ ಜೈನ್‌ ಅವರು ಮುಖ್ಯಮಂತ್ರಿ ಕೇಜ್ರಿವಾಲ್‌ ಅವರಿಗೆ 2 ಕೋಟಿ ರೂಪಾಯಿ ನೀಡಿದ್ದಾರೆ. ಇದನ್ನು ನಾನು ಕಣ್ಣಾರೇ ನೋಡಿದ್ದೇನೆ. 50 ಕೋಟಿ ರೂಪಾಯಿಗೆ ಭೂ ಹಗರಣದ ಡೀಲ್‌ ನಡೆದಿತ್ತು ಎಂದಿದ್ದಾರೆ.

400 ಕೋಟಿ ರೂಪಾಯಿಯ ವಾಟರ್‌ ಟ್ಯಾಂಕರ್‌ ಹಗರಣದಲ್ಲಿ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಜಲ ಸಂಪನ್ಮೂಲ ಖಾತೆಯ ಸಚಿವ ಕಪಿಲ್‌ ಮಿಶ್ರಾರನ್ನು ಸಂಪುಟದಿಂದ ಕೈ ಬಿಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next