Advertisement

ವರಾಹ ರೂಪಂ ವಿವಾದ; ರಿಷಬ್ ಶೆಟ್ಟಿಯನ್ನು ಬಂಧಿಸಬೇಡಿ-ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?

02:31 PM Feb 10, 2023 | Team Udayavani |

ನವದೆಹಲಿ:ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ಕಾಂತಾರ ಸಿನಿಮಾದ ‘ವರಾಹ ರೂಪಂ’ ಹಾಡನ್ನು ಪ್ರದರ್ಶಿಸಬಾರದು ಎಂದು ಕೇರಳ ಹೈಕೋರ್ಟ್ ವಿಧಿಸಿದ್ದ ನಿರ್ಬಂಧದ ಷರತ್ತನ್ನು ಸುಪ್ರೀಂಕೋರ್ಟ್ ಶುಕ್ರವಾರ(ಫೆ.10) ಸಡಲಿಕೆ ಮಾಡುವ ಮೂಲಕ ಕಾಂತಾರ ಸಿನಿಮಾ ತಂಡಕ್ಕೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

Advertisement

ಇದನ್ನೂ ಓದಿ:ಪ್ರೇಮಿಗಳ ದಿನದ ಬದಲು ಮಾತೃ-ಪಿತೃ ಪೂಜನೀಯ ದಿನ ಆಚರಿಸಿ: ಹಿಂದೂ ಜನಜಾಗೃತಿ ಸಮಿತಿ

ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?

ಕಾಂತಾರಾ ಕನ್ನಡ ಸಿನಿಮಾದ ನಿರ್ಮಾಪಕರು ಸಿನಿಮಾದಲ್ಲಿನ “ವರಾಹ ರೂಪಂ” ಹಾಡನ್ನು ತೆಗೆಯಬೇಕಾಗಿಲ್ಲ” ಎಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಕಾಂತಾರಾ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಟ ರಿಷಬ್ ಶೆಟ್ಟಿ ಅವರನ್ನು ಪೊಲೀಸರು ವಿಚಾರಣೆ ನಡೆಸಬಹುದು. ಆದರೆ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದಲ್ಲಿ ಅವರನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಅರ್ಜಿಯ ವಿಚಾರಣೆ ನಡೆಸಲು ಇಂದು ಲಿಸ್ಟ್ ಆಗದಿದ್ದರೂ ಕೂಡಾ, ಸಿಜೆಐ ಅವರ ಮುಂದೆ ತುರ್ತು ವಿಚಾರಣೆ ನಡೆಸಲು ಮನವಿ ಮಾಡಿಕೊಂಡ ನಂತರ ವಿಚಾರಣೆ ನಡೆಸಲು ಒಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಅವರು (ಕಾಂತಾರಾ ನಿರ್ಮಾಪಕ) ಹಾಡನ್ನು ಕೃತಿಚೌರ್ಯ ಮಾಡಿದ್ದಾರೆಂದು ಕೇರಳ ಹೈಕೋರ್ಟ್ ಬಲವಾಗಿ ಭಾವಿಸಿದೆ. ಆದರೆ ಅಂತಹ ಷರತ್ತುಗಳನ್ನು ವಿಧಿಸಬಹುದು ಎಂದರ್ಥವಲ್ಲ ಎಂದು ಸಿಜೆಐ ಡಿವೈ ಚಂದ್ರಚೂಡ್ ಆದೇಶದಲ್ಲಿ ತಿಳಿಸಿದ್ದಾರೆ.

ಕೃತಿಚೌರ್ಯ ವಿವಾದದ ಕುರಿತು ಆದೇಶ ನೀಡಿರುವ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶದ ಷರತ್ತ 12(1)ನ್ನು ಮಾರ್ಪಡಿಸಲಾಗಿದ್ದು, ಅರ್ಜಿದಾರರು ಫೆಬ್ರುವರಿ 12 ಮತ್ತು 13ರಂದು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಒಂದು ವೇಳೆ ಅರ್ಜಿದಾರರ(ವಿಜಯ್ ಕಿರಗಂದೂರು -ರಿಷಬ್ ಶೆಟ್ಟಿ)ನ್ನು ಬಂಧಿಸಿದ ಸಂದರ್ಭದಲ್ಲಿ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು. ಅಲ್ಲದೇ ಹಾಡನ್ನು ತೆಗೆದುಹಾಕಬೇಕೆಂಬ ಕೇರಳ ಹೈಕೋರ್ಟ್ ಆದೇಶ ಜಾರಿಗೆ ತಡೆ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next