Advertisement
ಮಾರ್ಚ್ 17ರಂದು ಸಂಸ್ಥೆಯ ವಾರ್ಷಿ ಕೋತ್ಸವ ಸಂಭ್ರಮ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಾಂತಾ ಕ್ರೂಜ್ ಪೂರ್ವದ ಬಿಲ್ಲವರ ಭವನದ ಸಭಾಂಗಣ ದಲ್ಲಿ ಪ್ರಶಸ್ತಿ ಪುರಸ್ಕಾರ, ಸಾಧಕರಿಗೆ ಸಮ್ಮಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಅದ್ದೂರಿಯಿಂದ ನಡೆಸಲು ನಿರ್ಧರಿಸಲಾಯಿತು. ಅಂದು ಅಪರಾಹ್ನ 2.30ರಿಂದ 11ನೇ ವರ್ಷದ ವಾರ್ಷಿಕೋತ್ಸವದ ಉದ್ಘಾಟನೆಗೊಂಡು ರಾತ್ರಿ 8 ರಿಂದ ಸಮಾರೋಪ ಸಮಾರಂಭದೊಂದಿಗೆ ಸಮಾರಂಭವು ಮುಕ್ತಾಯಗೊಳ್ಳಲಿದೆ ಎಂದು ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಇವರು ತಿಳಿಸಿದರು. ಈ ವರ್ಷದಿಂದ ಕೊಡುಗೈ ದಾನಿ ಆರ್. ಕೆ. ಶೆಟ್ಟಿ ಅವರ ಸಹಕಾರದಿಂದ ಪ್ರತಿಭಾನ್ವಿತ ಕಲಾವಿದರಿಗೆ ಕಲಾಶ್ರೀ ಎನ್ನುವ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿದ್ದೇವೆ. ಈ ಸಂದರ್ಭದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಅಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪರಿಷತ್ತಿನ ಸದಸ್ಯರಿಂದ ತಾಳಮದ್ದಳೆ, ನೃತ್ಯ ವೈಭವ ಮತ್ತು ಏಕಾಂಕ ನಾಟಕ ಪ್ರದರ್ಶನಗೊÙÛಲಿದೆ. ಮಾರ್ಚ್ 17 ನ್ನು ಮುಂಬಯಿಯ ಎÇÉಾ ಕಲಾವಿದರು ಪರಿಷತ್ತಿನ ಕಾರ್ಯಕ್ರಮಕ್ಕೆ ಮೀಸಲಿಡಬೇಕು. ಸಂಸ್ಥೆಯ ವಾರ್ಷಿಕೋತ್ಸವ ಸಂಭ್ರಮದ ಯಶಸ್ಸಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.
Advertisement
ಕನ್ನಡಿಗ ಕಲಾವಿದರ ಪರಿಷತ್ ಮಹಾರಾಷ್ಟ್ರ:ಪೂರ್ವಭಾವಿ ಸಭೆ
10:48 AM Feb 18, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.