ಸಾಮಾನ್ಯವಾಗಿ ಸಿನಿಮಾದಲ್ಲಿ ವಿಎಫ್ಎಕ್ಸ್ ತಂತ್ರಜ್ಞಾನ ಬಳಕೆ ದುಬಾರಿ ಎಂಬ ಕಾರಣಕ್ಕೆ ಅನೇಕರು ಅದನ್ನು ತಮ್ಮ ಸಿನಿಮಾದಲ್ಲಿ ಬಳಸಲು ಹಿಂದೇಟು ಹಾಕುತ್ತಾರೆ. ಆದರೆ ಇಲ್ಲೊಂದು ತಂಡ, ಅದನ್ನೇ ಸವಾಲಾಗಿ ಸ್ವೀಕರಿಸಿ ವಿಎಫ್ಎಕ್ಸ್ ಬಳಸಿಕೊಂಡೇ ಇಡೀ ಸಿನಿಮಾವನ್ನು ನಿರ್ಮಿಸಿದೆ.
ಕೊವೀಡ್ ಲಾಕ್‌ಡೌನ್ ಸಂದರ್ಭದಲ್ಲಿ ಕೇವಲ ಒಂದು ದಿನದಲ್ಲಿ ಚಿತ್ರೀಕರಣ ಮುಗಿಸಿ, ಯಾವುದೇ ಸ್ಟುಡಿಯೋ ಸಹಾಯವಿಲ್ಲದೆ ಕೇವಲ ಒಂದು ಕಂಪ್ಯೂಟರ್ ಬಳಸಿಕೊಂಡು ಸಂಕಲನ ಮಾಡುವುದರ ಜೊತೆಗೆ ಈಗಿನ ತಂತ್ರಜ್ಞಾನದಲ್ಲಿ ಸಿಗುವ ಓಪನ್ ಸೋರ್ ವಿಎಫ್ಎಕ್ಸ್ ತಂತ್ರಜ್ಞಾನ ಬಳಸಿಕೊಂಡು, ಯಾವುದೇ ಬಂಡವಾಳ ಹಾಕದೇ ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ಚಿತ್ರಕ್ಕೆ “2047′ ಎಂದು ಟೈಟಲ್ ಇಡಲಾಗಿದೆ.
ಇದನ್ನೂ ಓದಿ:ಹಿಂಸೆಗೆ ತಿರುಗಿದ ಹಿಜಾಬ್ – ಕೇಸರಿ ವಿವಾದ: ಶಿವಮೊಗ್ಗದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿ
ನರಸಿಂಹ ಮೂರ್ತಿ ಅವರು ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ, ಸಂಕಲನದ ಜವಾಬ್ಧಾರಿ ಹೊತ್ತಿದ್ದಾರೆ. ಇವರಿಗೆ ವಿಎಫ್ ಎಕ್ಸ್ ಮತ್ತು ನಿರ್ದೇಶನದಲ್ಲಿ ಯೋಗೀಶ್ವರ್ ಸಹಾಯ ಮಾಡಿದ್ದಾರೆ.
ಚಿತ್ರವನ್ನು ವಿಷ್ಣುರೂಪಿಣಿ ಫಿಲಂ ನಿರ್ಮಾಣ ಮಾಡಿದ್ದು, ವೆಂಕಟೇಶ್.ಕೆ ಮತ್ತು ಆದಿತ್ಯ ವಿನಾಯಕ್ ಸಂಗೀತವಿದೆ. ಸೂರ್ಯ ಮನೋಹರ್, ರಮ್ಯಕೃಷ್ಣ ಮತ್ತು ಮದನ್ ರಾಜ್ ತಾರಾಗಣದಲ್ಲಿದ್ದಾರೆ.