Advertisement

ಕನ್ನಡ ಅರಿಯದ ಮಲೆಯಾಳಿ ಅಧ್ಯಾಪಕನಿಗೆ ರಜೆ!

06:00 AM Aug 30, 2018 | |

ಕುಂಬಳೆ: ಮಂಗಲ್ಪಾಡಿ ಸರಕಾರಿ ಹೈಯ್ಯರ್‌ ಸೆಕೆಂಡರಿ ವಿದ್ಯಾಲಯದ ಕನ್ನಡ ಗಣಿತ ತರಗತಿಗೆ ನೇಮಕಗೊಂಡ ಕನ್ನಡ ಅರಿಯದ ಅಚ್ಛಾ ಮಲೆಯಾಳಿ ಅಧ್ಯಾಪಕ ಕೊನೆಗೂ ರಜೆ ಹಾಕಲೇಬೇಕಾಯಿತು.

Advertisement

ಓಣಂ ರಜೆ ಕಳೆದು ಬುಧವಾರ ಶಾಲೆಗೆ ಆಗಮಿಸಿದ ಈ ಅಧ್ಯಾಪಕನಿಗೆ ದಿಗ್ಬಂಧನ ಹಾಕಲು ಸಿದ್ಧರಾಗಿದ್ದ ವಿದ್ಯಾರ್ಥಿಗಳ ರಕ್ಷಕರು ಮತ್ತು ಕನ್ನಡ ಸಂಘಟನೆಗಳ ನಿಲುವಿಗೆ ಹೆದರಿ ಅಧ್ಯಾಪಕ ಮುಂದಿನ ಡಿ. 27ರ ತನಕ ರಜೆ ಹಾಕಿ ಸಂಭಾವ್ಯ ಪ್ರತಿಭಟನೆಯಿಂದ ಪಾರಾಗಿದ್ದಾನೆ. 120 ದಿನಗಳ ಕಾಲ ರಜೆ ಹಾಕಿ ತೆರಳಿ ಕನ್ನಡ ಕಲಿತು ಮರಳುವ ಈತನ ನಿಲುವಿಗೆ ದಿಗ½ಂಧನ ಕಾರ್ಯಕ್ರಮವನ್ನು ರಕ್ಷಕರು ರದ್ದು ಪಡಿಸಿ ಬಳಿಕ ವಿದ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಪಿ.ಟಿ.ಎ. ಅಧ್ಯಕ್ಷ  ಮಂಗಲ್ಪಾಡಿ ಗ್ರಾ.ಪಂ. ಸದಸ್ಯ ಬಾಲಕೃಷ್ಣ ಅಂಬಾರ್‌ ಅಧ್ಯಕ್ಷತೆ ವಹಿಸಿದ ಪ್ರತಿಭಟನಾ ಕಾರ್ಯಕ್ರಮವನ್ನು ಕಾಸರಗೋಡು ಜಿ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್‌ ವರ್ಕಾಡಿ ಉದ್ಘಾಟಿಸಿದರು. 

ಕಾಸರಗೊಡು ಜಿ.ಪಂ. ಲೋಕೋಪಯೋಗಿ ಸ್ಥಾಯೀ ಸಮಿತಿ ಅಧ್ಯಕ್ಷೆ ಫ‌ರೀದಾ ಝಕೀರ್‌ಮ ಕನ್ನಡ ಮಾಧ್ಯಮ ಅಧ್ಯಾಪಕ ಸಂಘಟನೆಯ ಉಪಜಿಲ್ಲಾಧ್ಯಕ್ಷ ರವೀಂದ್ರನಾಥ್‌ ಕೆ.ಆರ್‌., ನಿವೃತ್ತ ಉಪನ್ಯಾಸಕಿ ಡಾ| ಯು.ಮಹೇಶ್ವರಿ, ಪಿ.ಟ.ಎ. ಉಪಾಧ್ಯಕ್ಷ ಮಹಮ್ಮದ್‌, ಎಂಪಿ.ಟ.ಎ. ಅಧ್ಯಕ್ಷೆ ಯಶೋದಾ ಪಿ. ಶೆಟ್ಟಿ, ಹಳೆ ವಿದ್ಯಾರ್ಥಿಸಂಘದ  ಡಾ| ಅಭಿಲಾಶ್‌ ಮಯ್ಯ ಮುಂತಾದವರು ಮಾತನಾಡಿದರು. ಕನ್ನಡ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ದರು. ದಿನೇಶ್‌ ಚೆರುಗೋಳಿ ವಂದಿಸಿದರು.ಪ್ರತಿಭಟನೆಗೆ ಕನ್ನಡ ಅಧ್ಯಾಪಕರು ಮತ್ತು ಪೋಷ ಕರು ಭಾಗ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next