Advertisement
9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಜಿಲ್ಲೆಯ ಭೂತಕಾಲದ ಬಗ್ಗೆ ಗೌರವ ಅಭಿಮಾನಗಳಿವೆ. ವರ್ತಮಾನದ ಬಗ್ಗೆ ಹೆಮ್ಮೆ ಇದೆ. ಭವಿಷ್ಯದ ಬಗ್ಗೆ ಆಶಾಭಾವನೆ ಇದೆ. ಭೌಗೋಳಿಕವಾಗಿ, ಚಾರಿತ್ರಿಕವಾಗಿ, ಉನ್ನತ ಸಾಧನೆ ಮಾಡಿರುವ ಜಿಲ್ಲೆ ನಮ್ಮದು. ಇಂತಹ ಜಿಲ್ಲೆಯಲ್ಲಿ ಕನ್ನಡವನ್ನು ಬಿತ್ತುವ, ವಿಸ್ತರಿಸುವ ಕಾರ್ಯಗಳು ಆಗಬೇಕು ಎಂದು ತಿಳಿಸಿದರು.
Related Articles
Advertisement
ಹಳೆಯ ತಲೆಮಾರಿನ ಪ್ರಮುಖ ಗಾಯಕರಾಗಿದ್ದ, ಗುಡಿಬಂಡೆ ರಾಮಾಚಾರ್ ಅವರು ಜನಪ್ರಿಯ ಹಾಡುಗಾರರಾಗಿದ್ದರು. ಬಾಗೇಪಲ್ಲಿ ಬಳಿಯ ಗೂಳೂರು ಮಠದ ಅಧ್ಯಕ್ಷರಾಗಿದ್ದ ಡಾ.ಜ.ಚ.ನಿ.ಅವರು ವಚನಕಾರರೂ, ಪ್ರವಚನಕಾರರಾಗಿ ಸಾಮಾಜಿಕ ಸೇವಾ ಕ್ರಾಂತಿ ಮಾಡಿದ್ದಾರೆ ಎಂದು ವಿವರಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯು ಜಾನಪದ ಕ್ಷೇತ್ರದಲ್ಲೂ ಚಾಪುಮೂಡಿಸಿದೆ. ಕೋಲಾಟ, ತಮಟೆ ವಾದನ, ಹುಲಿ ವೇಷ, ಕರಗ, ದೊಂಬರಾಟ, ಗಂಗೆದ್ದುಲಾಟ,(ಕೋಲೆ ಬಸವ), ಬುಡುಬುಡುಕೆ, ತೊಗಲು ಬೊಂಬೆಯಾಟ, ಹರಿಕಥೆ, ಬುರ್ರ ಕತೆ ಮುಂತಾದವು ಇಲ್ಲಿ ಪ್ರಚಲಿತವಾಗಿರುವುದನ್ನು ನಾವಿಲ್ಲಿ ಕಾಣಬಹುದು. ಇತ್ತೀಚಿಗೆ ತಮಟೆ ವಾದನಕ್ಕೆ ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿರುವುದು ಜಿಲ್ಲೆಯ ಗರಿಮೆಯಾಗಿದೆ ಎಂದರು.
ಕೈವಾರ ತಾತಯ್ಯ ಎಂದೇ ಹೆಸರಾದ ಶ್ರಿನಾರಾಯಣ ಗುರುಗಳು ‘ಕಾಲಜ್ಞಾನ’ವನ್ನು ರಚಿಸಿರುತ್ತಾರೆ. ಜೈನ ಸಾಹಿತಿ ಕುಮದೇಂದು, “ಸಿರಿಭೂವಲಯ’ ಎಂಬ ಕೃತಿಯನ್ನು ರಚಿಸಿದ ಈತ ನಂದಿ ಬಳಿಯ ಯಲುವನಹಳ್ಳಿ ಗ್ರಾಮದವರು. ಚಿಕ್ಕಬಳ್ಳಾಪುರದ ಕೃಷ್ಣ ಎಂಬ ಕವಿಯು “ಭಾಗವತದ ದಶಮ ಸ್ಕಂಧವನ್ನು ಆಧರಿಸಿ ಕೃಷ್ಣ ಕರ್ಣಾಮƒತ ಎಂಬ ಕೃತಿಯನ್ನು ಬರೆದಿದ್ದಾರೆ. ಬಾಡಾಲ ಸುಬ್ರಹ್ಮಣ್ಯಾ ಎಂಬುವರು ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಯದಲ್ಲಿದ್ದವರು. ಇವರು ‘ತಾರಾ ಶಶಾಂಕ’ ಎಂಬ ನಾಟಕವನ್ನು ಬರೆದಿದ್ದಾರೆ. ಇವರ ಜನ್ಮಸ್ಥಳವೂ ಚಿಕ್ಕಬಳ್ಳಾಪುರವೇ. ಗೌರಿಬಿದನೂರು ಬಳಿಯ ಇಡುಗೂರು ಗ್ರಾಮದ ರುದ್ರಕವಿ ಎಂಬುವರು ಕನ್ನಡದಲ್ಲಿ ‘ಶಿವನಾಟಕ’, ‘ಮಾರ್ಕಂಡೇಯ ವಿಜಯ’ ಎಂಬುದನ್ನು ಬರೆದಿರುತ್ತಾರೆ ಎಂದು ಸಮ್ಮೇಳನಾಧ್ಯಕ್ಷರು ಹೇಳಿದರು.
“ಕೋಲಾರದ ಗಾಂಧಿ’ ಎಂದೇ ಜನಜನಿತರಾಗಿದ್ದ ವೈಜ್ಞಾನಿಕ ಮನೋಭಾವದ ಶಿಕ್ಷಣ ತಜ್ಞ ಡಾ.ಎಚ್ .ನರಸಿಂಹಯ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದವರು. ಈಗ ಜಿಲ್ಲೆಯಲ್ಲಿ ಅನೇಕ ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ಉನ್ನತ ಶಿಕ್ಷಣ ನೀಡುವ ಕಾಲೇಜುಗಳು ತಲೆ ಎತ್ತಿ ನಿಂತಿವೆ. ಈಗ ಚಿಕ್ಕಬಳ್ಳಾಪುರದಲ್ಲಿಯೇ ದೊಡ್ಡ ವೈದ್ಯಕೀಯ ಕಾಲೇಜು ಆಗುತ್ತಿರುವುದು ಸಂತಸದ ವಿಷಯ ಎಂದರು.