ತುಮಕೂರು: ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಕೆಲವರಿಗೆ ಸೇರಿದ ಸ್ವತ್ತಲ್ಲ, ಅದು ಬಹುಜನರ ಸ್ವತ್ತು. ಸಾಹಿ ತ್ಯಸಂಘಟನೆಯ ಪರವಾಗಿ, ಜಾತ್ಯತೀತವಾಗಿ ಕಟ್ಟಿ ರುವಸಾಹಿತ್ಯ ಪರಿಷತ್ತು. ಮುಂದೆಯೂ ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಬಾರಿ ಕೇಂ ದ್ರ ಕನ್ನಡಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ರು ವುದಾಗಿಅಭ್ಯರ್ಥಿ ಸಿ.ಕೆ.ರಾಮೇಗೌಡ ತಿಳಿಸಿದರು.
ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ್ನು ಕನ್ನಡಿಗರ ಧ್ವನಿಯಾಗಿಕಟ್ಟಬೇಕೇಬ ಉದ್ದೇಶ ದಿಂದ ನಾನು ಕೇಂದ್ರ ಕನ್ನಡಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, 40ವರ್ಷಗಳಿಂದ ನಿರಂ ತರ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದೇನೆ.
ಬೆಂಗ ಳೂರು ನಗರಜಿಲ್ಲಾಧ್ಯಕ್ಷನಾಗಿ ರಚನಾತ್ಮಕ ಕೆಲಸ ಗಳನ್ನು ಮಾಡಿ ದ್ದು,ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ಸಾಹಿತಿಗಳು, ಲೇಖಕರು, ಯುವ ಬರಹ ಗಾರರು, ಕನ್ನಡಪರ ಹೋರಾ ಟಗಾರರು, ನಾಡಿನ ರೈತರು, ಬಡ ವರು, ಕೂಲಿ ಕಾರ್ಮಿ ಕರಸಮ ಸ್ಯೆ ಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ಪಂದಿಸಿ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಬೇಕು ಎಂಬ ಮಹಾದಾಸೆ ನನ್ನದು ಎಂದರು.ಪ್ರತಿ ಜಿಲ್ಲೆ ಮತ್ತು ಪ್ರತಿ ತಾಲೂಕಿನಲ್ಲೂ ಕನ್ನಡ ಸಾಹಿತ್ಯಭವನ ನಿರ್ಮಾಣ ಮಾಡಲು ಯೋಜನೆ ಇದೆ.
ತುಮಕೂರು ಜಿಲ್ಲೆ ಸಾಹಿತ್ಯ, ಸಾಂಸ್ಕೃತಿಕ ಪರಂ ಪರೆಗೆ ಹೆಸರುವಾಸಿ, ಜಿಲ್ಲೆಯಲ್ಲೂ ಸಾಹಿತ್ಯಾತ್ಮಕವಾಗಿ ಮತ್ತಷ್ಟು ಕೆಲಸಇಲ್ಲಿ ಆಗಬೇಕಾಗಿವೆ. ಸಾಹಿ ತ್ಯಾ ಸಕ್ತರ ಸಲಹೆ ಪಡೆ ದುಸಾಹಿತ್ಯ ಕೆಲಸ ಗಳಲ್ಲಿ ತೊಡಗಿ ಕೊಂಡು ಉತ್ತಮವಾಗಿಕಾರ್ಯ ನಿರ್ವಹಿಸಲಾಗುವುದು ಎಂದರು.ಕನ್ನಡಪರ ಹೋರಾಟಗಾರ ಟಿ.ಇ.ರಘುರಾಮ್‌ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಉತ್ತಮವ್ಯಕ್ತಿ ಆಯ್ಕೆಯಾಗಬೇಕೆಂದು ಎಲ್ಲಾ ಕನ್ನಡ ಪರ ಸಂಘಟನೆಗಳ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಸಿ.ಕೆ.ರಾಮೇಗೌಡರು ಕೇಂದ್ರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಉತ್ತಮ ವ್ಯಕ್ತಿಯಾಗಿದ್ದು, ಎಲ್ಲಾ ಕನ್ನಡಪರ ಸಂಘಟ ನೆಗಳ ಸದಸ್ಯರುಇವರ ಬೆಂಬಲಕ್ಕೆ ನಿಂತಿರುವುದಾಗಿ ತಿಳಿಸಿದರು.
ರಾಜಕೀಯೇತರ ಸಂಸ್ಥೆ: ಕನ್ನಡ ಪ್ರಾಧ್ಯಾಪಕ ನಾಗರಾಜು ಮಾತನಾಡಿ, ಸಾಹಿತ್ಯ ಪರಿಷತ್ತು ರಾಜಕೀಯೇತರ ಸಂಸ್ಥೆಯಾಗಿದ್ದು, ಕನ್ನಡ ನಾಡು, ನುಡಿ, ಜಲಸಂಸ್ಕೃತಿ ಯನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ಯುವಂತಹ ಕೆಲಸ ಮಾಡಿಕೊಂಡು ಬಂದಿದೆ. ಜನಸಾಮಾನ್ಯರ ಅದರಲ್ಲೂ ಸಮಾಜದ ಕಟ್ಟಕಡೆಯವ್ಯಕ್ತಿಗೆ ಸಾಹಿತ್ಯ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು. ನಾಗಭೂಷಣ ಬಗ್ಗನಡು, ಲಕ್ಷ್ಮೀರಂಗ ಯ್ಯ, ನಾಗರಾಜು, ದಯಾನಂದ ಕಟ್ಟೆ,ವಿಜಯ ಕುಮಾರ್, ಮಹಾಲಿಂಗಯ್ಯ,ರವಿಕುಮಾರ್ ನೀಹ ಇದ್ದರು.