ಬೆಂಗಳೂರು: ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿ ನಿರ್ಮಾಣ್ ಶೆಲ್ಟರ್ಸ್‌ನಿಂದ 63ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ತಾಯಿ ಭುವನೇಶ್ವರಿಯ ಚಿತ್ರಕ್ಕೆ ಜ್ಯೋತಿ ಬೆಳಗಿ, ಪುಷ್ಪಾರ್ಚನೆ ಮಾಡಿದ ನಂತರ ಆನೇಕಲ್ ತಾಲೂಕಿನ ವಿಧಾತ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ವಿಎಲ್‌ಎನ್ ಪ್ರಬುದ್ಧಾಲಯದ ಹಿರಿಯ ನಿವಾಸಿ ಬಿ.ಎಸ್.ನಾಗರತ್ನಮ್ಮನವರು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಡಾವಣೆಯ ಹಾಗೂ ಪ್ರಬುದ್ಧಾಲಯದ ಹಿರಿಯ ನಿವಾಸಿಗಳು ಕನ್ನಡ ನಾಡು ನುಡಿಯ ಹಾಡು ಹಾಡಿದರೆ, ಗಣ್ಯರು ಕರ್ನಾಟಕ ಏಕೀಕರಣ, ಕನ್ನಡ ನಾಡು ನುಡಿ ಕಟ್ಟಿ ಬೆಳೆಸಿದ ದಿ. ಸರ್ ಎಂ. ವಿಶ್ವೇಶ್ವರಯ್ಯ, ಬಿಎಂಶ್ರೀ, ಕುವೆಂಪು, ಅನಕೃ ಮುಂತಾದವರನ್ನು ಸ್ಮರಿಸಿದರು.
ನಿರ್ಮಾಣ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಮತ್ತು ನಿಪ್ ಮ್ಯಾಟ್‌ನ ಅಧ್ಯಕ್ಷರೂ ಆದ ಲಕ್ಷ್ಮೀನಾರಾಯಣ್ ಅವರು ಮಾತನಾಡಿ, ಎಲ್ಲಾ ಅನ್ಯ ಭಾಷಿಗರು ಕನ್ನಡ ಮಾತನಾಡಲು, ಕಲಿಯಲು ಉತ್ತೇಜನ ನೀಡಬೇಕೆಂದು ಕರೆ ನೀಡಿದರು.
ನಿಪ್‌ಮ್ಯಾಟ್‌ನ ವಿಶ್ವಸ್ಥರಾದ ಕೃಷ್ಣಾರೆಡ್ಡಿ, ಗಣೇಶನ್, ಮೇಜರ್ ಗುರುಪ್ರಸಾದ್ ಹಾಗೂ ಎಸ್. ರವಿರಾಜ್ ಭಟ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.