ಬಣಕಲ್ ಬಾಳೂರು ಹಿರೇಬೈಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ವತಿಯಿಂದ ಬಣಕಲ್‌ನಲ್ಲಿ ಬುಧವಾರ ನಡೆದ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹುತೇಕ ಅನ್ಯಭಾಷಿಕರು ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡಿಗರೇ ಆಗಿ ಹೋಗಿದ್ದಾರೆ. ಕನ್ನಡ ಭಾಷೆಯನ್ನು ನಿತ್ಯ ಬದುಕಿನಲ್ಲಿ ಬಳಸಬೇಕಿದೆ ಎಂದರು.
Advertisement
ಇದನ್ನೂ ಓದಿ:- ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ: ವರ್ಗೀಸ್ಕಸಾಪ ತಾಲ್ಲೂಕು ಪೂರ್ವಾಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಕನ್ನಡ ಭಾಷೆಯ ಸಮೃದ್ದ ಇತಿಹಾಸವನ್ನು ಎಲ್ಲರೂ ಅರಿಯಬೇಕಿದೆ. ಕನ್ನಡ ನಾಡು ನುಡಿಯ ಹಿರಿಮೆಯನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದರು.
ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಮಾತನಾಡಿ, ಕನ್ನಡ ತಂತ್ರಜ್ಞಾನ ಸ್ನೇಹಿ ಭಾಷೆಯಾಗಿ ಬೆಳಯಬೇಕು. ಬದಲಾದ ಕಾಲಮಾನದಲ್ಲಿ ಕನ್ನಡ ತಂತ್ರಜ್ಞಾನದ ಭಾಗವಾದಾಗ ಕನ್ನಡ ಭಾಷೆಯ ಉಳಿವು ಸಾಧ್ಯ ಎಂದರು.
ಕನ್ನಡ ಪರ ಹೋರಾಟಗಾರರಾದ ಹೊರಟ್ಟಿ ರಘು ಮಾತನಾಡಿ, ಕರ್ನಾಟಕದಲ್ಲಿರುವ ಅಂಗಡಿ ಮುಂಗಟ್ಟುಗಳು ಸೇರಿದಂತೆ ಎಲ್ಲಾ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು. ಕನ್ನಡ ಭಾಷೆ ಕರ್ನಾಟಕದಲ್ಲಿ ಅಗ್ರಸ್ಥಾನದಲ್ಲಿರಬೇಕು ಎಂದು ತಿಳಿಸಿದರು.
ಬಣಕಲ್ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಭಿಲಾಷ್, ಕನ್ನಡ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಬಕ್ಕಿ ಮಂಜುನಾಥ್, ಕಸಾಪ ಬಣಕಲ್ ಹೋಬಳಿ ಪೂರ್ವಾಧ್ಯಕ್ಷ ವಸಂತ್ ಹಾರ್‌ಗೋಡು, ಸಂಘದ ಕಾನೂನು ಸಲಹೆಗಾರರು ಹಾಗೂ ವಕೀಲರಾದ ಪರೀಕ್ಷಿತ್ ಜಾವಳಿ ಮಾತನಾಡಿದರು.
ಬಣಕಲ್ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಭಿಲಾಷ್ ಅವರನ್ನು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮೌನಾಚರಣೆ ಮಾಡುವ ಮೂಲಕ ನಟ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ಭಕ್ತೇಶ್, ಸಾಹಿತಿಗಳಾದ ಹೆಸಗಲ್ ವೆಂಕಟೇಶ್, ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಬಣಕಲ್ ಬಾಳೂರು ಹಿರೇಬೈಲ್ ಭಾಗದ ಪಧಾಧಿಕಾರಿಗಳು ಇದ್ದರು.