Advertisement

ಶಿವನಪಾದಕ್ಕೆ ಯಾರ್‌ ಬರ್ತ್ತೀರಾ? ಒಂದು ಊರಿನ ಸುತ್ತ …

12:47 PM Jun 23, 2017 | |

“ನನ್ನ ರಿಯಲ್‌ ಲೈಫ್ನಲ್ಲಾದ ಘಟನೆ ಇಟ್ಟುಕೊಂಡು ಈ ಹಿಂದೆ ಕೆಲ ಸಿನಿಮಾಗಳು ಬಂದವು. ಈಗ ರೀಲ್‌ನಲ್ಲಿ ನಾನೇ ಕಾಣಿಸಿಕೊಳ್ಳುತ್ತಿದ್ದೇನೆ…’

Advertisement

– ಇದು ನಿವೃತ್ತ ಪೊಲೀಸ್‌ ಅಧಿಕಾರಿ ಎಚ್‌.ಟಿ.ಸಾಂಗ್ಲಿಯಾನ ಅವರ ಮಾತು. ಅವರು ಹೇಳಿದ್ದು “ಶಿವನಪಾದ’ ಚಿತ್ರ ಕುರಿತು. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನಡೆಯಿತು. ಸಾಂಗ್ಲಿಯಾನ ಅವರಿಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಸಾಂಗ್ಲಿಯಾನ ಹೇಳಿದ್ದಿಷ್ಟು. “ನಾನು ಈ ಹಿಂದೆ ಪೊಲೀಸ್‌ ಅಧಿಕಾರಿಯಾಗಿದ್ದಾಗ, ಹಲವು ಘಟನೆಗಳು ನಡೆದಿವೆ. ದರೋಡೆಕೋರರು, ಕಳ್ಳರು, ಭ್ರಷ್ಟರು ಹೀಗೆ ಎಲ್ಲರನ್ನೂ ಬಗ್ಗುಬಡಿದಿದ್ದೆ. ಅದೇ ವಿಷಯ ಇಟ್ಟುಕೊಂಡು ಹಲವು ಚಿತ್ರ ಬಂದವು. ಗೆಲುವು ಕಂಡವು. ಈಗ ನನಗೇ ಒಂದು ಪಾತ್ರ ಸೃಷ್ಟಿ ಮಾಡಿ ಸಿನಿಮಾ ಮಾಡುತ್ತಿದ್ದಾರೆ.

ಮೊದಲು ನಿರ್ದೇಶಕರು ಫೋನ್‌ ಮಾಡಿದಾಗ, ಕಥೆ ಮತ್ತು ಪಾತ್ರ ಚೆನ್ನಾಗಿದ್ದರೆ, ಇಷ್ಟವಾದರೆ ಮಾತ್ರ ಮಾಡ್ತೀನಿ. ಇಲ್ಲವಾದರೆ ಇಲ್ಲ ಅಂದಿದ್ದೆ. ಬಂದು ಕಥೆ ಹೇಳಿದರು, ಪಾತ್ರ ವಿವರಿಸಿದರು. ಇಷ್ಟವಾಯ್ತು ಒಪ್ಪಿಕೊಂಡೆ. ಮುಂದಿನದು ನೀವು ನೋಡಬೇಕಷ್ಟೇ.’ ಎಂದು ಹೇಳುವ ಮೂಲಕ ಸುಮ್ಮನಾದರು ಸಾಂಗ್ಲಿಯಾನ.

ನಿರ್ದೇಶಕ ಮಾ. ಚಂದ್ರುಗೆ ಇದು ಕನ್ನಡದಲ್ಲಿ ಎರಡನೇ ಚಿತ್ರ. ಇದರ ಮಧ್ಯೆ ತಮಿಳಿನಲ್ಲೊಂದು ಚಿತ್ರ ಮಾಡಿದ್ದು, ಆ ಚಿತ್ರ ಈಗ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿದೆಯಂತೆ. “ಶಿವನಪಾದ’ ಒಂದು ಊರಿನ ಹೆಸರು. ಇದು ಜರ್ನಿಯಲ್ಲಿ ನಡೆಯೋ ಕಥೆ. 14 ಪಾತ್ರಗಳ ಸುತ್ತ ಸಾಗುವ ಕಥೆಯಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್‌ ಹಾಗೂ ಹಾರರ್‌ ತುಂಬಿಕೊಂಡಿದೆ. ಒಂದು ಹೈವೆಯಿಂದ ಎಂಟು ಕಿ.ಮೀ ದೂರ ಇರುವ “ಶಿವನಪಾದ’ ಊರಿಗೆ ಹೋಗುವ ಮಧ್ಯೆ ನಡೆಯುವ ಕಥೆ ಇದು. ಒಂಭತ್ತು ತಿಂಗಳ ಹಿಂದೆ ನಡೆದ ನೈಜ ಘಟನೆ ಇಟ್ಟುಕೊಂಡು ಚಿತ್ರ ಮಾಡುತ್ತಿರುವುದಾಗಿ ಹೇಳಿಕೊಂಡರು ಮಾ.ಚಂದ್ರು.
ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಇಲ್ಲಿ ಎರಡು ಹಾಡುಗಳನ್ನು ಕೊಡುವುದರ ಜತೆಗೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರಂತೆ. ಇಂತಹ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಹೈಲೆಟ್‌ ಆಗಿದ್ದು, ಕಥೆ ಹೊಸದಾಗಿದೆ, ಹೊಸತನ ಎನಿಸುವ ಸಂಗೀತ ಕೊಡುವ ಪ್ರಯತ್ನ ಮಾಡುವುದಾಗಿ ಹೇಳಿಕೊಂಡರು ವೀರ್‌ಸಮರ್ಥ್.

ಇಲ್ಲಿ ಹೀರೋಗಳಾಗಿ ಕೃಷ್ಣ, ಆನಂದ್‌ ಇದ್ದರೆ, ನಾಯಕಿಯರಾಗಿ ಚಿರಶ್ರೀ, ಮಮತಾ ರಾವತ್‌ ಇದ್ದಾರೆ. ಅವರಿಗೆ ಇಲ್ಲಿ ಹೊಸತನ ಇರುವ ಪಾತ್ರ ಸಿಕ್ಕಿದೆಯಂತೆ. ಕೃಷ್ಣಗೆ ಕಥೆ ವಿಭಿನ್ನವಾಗಿದ್ದರೆ, ಮಮತಾ ರಾವತ್‌ಗೆ ಇಲ್ಲಿ
ಗ್ಲಾಮರ್‌ ಪಾತ್ರವಂತೆ. ಆನಂದ್‌ಗೆ ಇಲ್ಲಿ ಮೊದಲ ಅನುಭವ ಆದ್ದರಿಂದ ಎಲ್ಲವೂ ಚಾಲೆಂಜಿಂಗ್‌ ಎನಿಸಿದೆಯಂತೆ. ಇನ್ನು, ಚಿರಶ್ರೀಗೆ ಇಲ್ಲಿ ಕ್ಯೂಟ್‌ ಲವ್ವರ್‌ ಪಾತ್ರ ಸಿಕ್ಕಿದೆಯಂತೆ. ಕ್ಯಾಮೆರಾಮ್ಯಾನ್‌ ನಂದಕುಮಾರ್‌ ಇಲ್ಲಿ ಕ್ಯಾಮೆರಾ ಮುಂದೆಯೂ ಕಾಣಿಸಿಕೊಳ್ಳುತ್ತಿದ್ದಾರಂತೆ.

Advertisement

ನಿರ್ಮಾಪಕ ಮಂಜುನಾಥ್‌ಗೆ ಇದು ಹೊಸ ಅನುಭವ. ಪೊಲೀಸ್‌ ಇನ್ಸ್‌ಪೆಕ್ಟರ್‌ ಮಗನಾಗಿ, ಸಾಂಗ್ಲಿಯಾನ ಅವರ ಸಿನಿಮಾ ಮಾಡುತ್ತಿರುವುದು ಖುಷಿಕೊಟ್ಟಿದೆ ಅಂದರು ಅವರು. ಇನ್ನೊಬ್ಬ ನಿರ್ಮಾಪಕ ಪ್ರಕಾಶ್‌ಗೂ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆ ಕುತೂಹಲ ಕೆರಳಿಸುತ್ತಾ ಹೋಗುತ್ತೆ ಎಂಬ ಕಾರಣಕ್ಕೆ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾಗಿ ಹೇಳಿಕೊಂಡರು. “ಶಿವನಪಾದ’ ಒಂದು ಸಿನಿಮಾದೊಳಗಿನ ಸಿನಿಮಾ ಕಥೆಯಾಗಿದ್ದರೂ, ಜರ್ನಿ ಹೊಸ ಅನುಭವ ಕೊಡಲಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next