Advertisement
ಈ ಸಂಬಂಧ ಆದೇಶ ಹೊರಡಿಸಿರುವ ಉನ್ನತ ಶಿಕ್ಷಣ ಇಲಾಖೆಯು, ನ್ಯಾಯಾಲಯದ ಮಧ್ಯಾಂತರ ಆದೇಶದನ್ವಯ ಕನ್ನಡವನ್ನು ಒಂದು ಭಾಷೆ ಯಾಗಿ ಕಲಿಯಲು ವಿದ್ಯಾರ್ಥಿಗಳು ಇಚ್ಛಿಸದಿದ್ದರೆ, ಅಂತಿಮ ಆದೇಶ ಪ್ರಕಟವಾಗುವ ತನಕ ಕನ್ನಡ ಕಡ್ಡಾಯ ಮಾಡಬಾರದು ಎಂದು ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು) ಅಧೀನ ಕಾರ್ಯದರ್ಶಿ ಮಹೇಶ್ ಆರ್. ಆದೇಶ ಹೊರಡಿಸಿದ್ದಾರೆ.
ಸರಕಾರದ ಕ್ರಮಕ್ಕೆ ಕೆಲವು ಖಾಸಗಿ ಪದವಿ ಕಾಲೇಜುಗಳು, ಖಾಸಗಿ ವಿಶ್ವವಿದ್ಯಾಲಯಗಳು ವಿರೋಧ ವ್ಯಕ್ತಪಡಿ
ಸಿದ್ದವು. ಕನ್ನಡ ಕಡ್ಡಾಯ ಕಲಿಕೆ ಯಿಂದಾಗಿ ಪಿಯುಸಿ ಹಂತದಲ್ಲಿ ಕನ್ನಡ ಕಲಿಯದ ಹೊರ ರಾಜ್ಯ ಹಾಗೂ ಹೊರ ದೇಶದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ. ಇದರಿಂದಾಗಿಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯದ ಕಾಲೇಜುಗಳಲ್ಲಿ ದಾಖಲಾ ಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದವು. ಜತೆಗೆ ನ್ಯಾಯಾಲಯದ ಮೊರೆ ಹೋಗಿದ್ದವು.ನ್ಯಾಯಾಲಯವು ಕನ್ನಡವನ್ನು ಬಲವಂತವಾಗಿ ಕಲಿಸಬಾರದು ಎನ್ನುವ ಮಧ್ಯಾಂತರ ತೀರ್ಪಿನ ಬೆನ್ನಲ್ಲೇ ಉನ್ನತ ಶಿಕ್ಷಣ ಇಲಾಖೆಯು ಕನ್ನಡ ಕಡ್ಡಾಯ ಕಲಿಕೆ ವಿಷಯವನ್ನು ಕೈಬಿಟ್ಟಿದೆ.