ಪ್ರಾದೇಶಿಕವಾಗಿ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ಅದರಂತೆ ರಾಜ್ಯದಲ್ಲಿ ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಮಂಗಳೂರು ಹಾಗೂ ಇತರ ನಗರಗಳ ನಡುವೆ ಅನೇಕ ಖಾಸಗಿ ಕಂಪನಿ ಗಳೂ ವಿಮಾನ ಹಾರಿಬಿಟ್ಟಿವೆ. ಆದರೆ, ಗಗನ ಸಖಿಯರು ಮಾತ್ರ ವಿಮಾನದಲ್ಲಿ ಕನ್ನಡವನ್ನೇ ಬಳಸುತ್ತಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳಲ್ಲಿ ಮಂಗಳೂರಿಗೆ ತೆರಳಬೇಕಿದ್ದರೆ, ಹಿಂದಿ, ಇಂಗ್ಲಿಷ್ ಅಥವಾ ಮಲಯಾಳಂನಲ್ಲಿ ಮಾತನಾಡುತ್ತಾರೆ. ಹುಬ್ಬಳ್ಳಿಗೆ ತೆರಳಿದರೆ, ಹಿಂದಿ,
ಇಂಗ್ಲಿಷ್ ಜೊತೆ ಮರಾಠಿ ಯಲ್ಲೂ ಮಾತಾಡುತ್ತಾರೆ. ಆದರೆ, ಕನ್ನಡ ಮಾತಾಡುವ ಗಗನಸಖಿ ಮಾತ್ರ ಕಾಣಿಸುತ್ತಲೇ ಇಲ್ಲ.
“ಪ್ರಯಾಣಿಕರು ನಮ್ಮೊಂದಿಗೆ ಯಾವ ಭಾಷೆ ಮಾತಾಡಬಹುದು?’ ಎಂದು ವಿಮಾನ ನೆಲದಿಂದ ಚಿಮ್ಮುವ ಮೊದಲು
ಗಗನಸಖೀಯರು, ಪ್ರಯಾಣಿಕರಿಗೆ ಸೂಚನೆ ನೀಡುವುದು ವಾಡಿಕೆ. ಇಂಗ್ಲಿಷ್, ಹಿಂದಿ, ಮಲಯಾಳಂ, ಮರಾಠಿ, ಪಂಜಾಬಿ ಭಾಷೆಯ
ನ್ನಷ್ಟೇ ಅವರು ಆ ಕ್ಷಣ ಆಯ್ಕೆಯಾಗಿ ಪ್ರಯಾಣಿಕರ ಮುಂದಿಡುತ್ತಾರೆ.
Advertisement
ಕೇಂದ್ರಕ್ಕೆ ಮನವಿ ಪತ್ರ: ಕನ್ನಡ ಕುರಿತ ವಿಮಾನಯಾನ ಸಂಸ್ಥೆಗಳ ಈ ನಿರ್ಲಕ್ಷದ ಬಗ್ಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಕನ್ನಡ ಗ್ರಾಹಕರ ಕೂಟವು ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರವನ್ನೂ ಬರೆದಿದೆ. ದೇಶೀಯವಾಗಿ ಸೇವೆ ನೀಡುವ ವಿಮಾನಗಳಲ್ಲಿ, ಪ್ರಾದೇಶಿಕ ಭಾಷೆ ಬಳಕೆ ಕಡ್ಡಾಯಗೊಳಿಸುವಂತೆ ಒತ್ತಾಯಿಸಿವೆ. ಅಲ್ಲದೆ, ರಾಜ್ಯದ ಸಂಸದರ ಗಮನಕ್ಕೂ ಈವಿಚಾರವನ್ನು ತಂದಿದ್ದಾರೆ.
ಸಿಂಗಾಪುರದ ಕ್ಯಾಪೆ ಪೆಸಿಫಿಕ್, ಬ್ರಿಟೀಷ್ ಏರ್‌ವೆಸ್, ಫ್ರಾನ್ಸ್‌ನ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಗಳೂ ಕನ್ನಡದಲ್ಲಿಯೇ ಮೆನು ನೀಡುತ್ತಿವೆ. ಆದರೆ, ಕರುನಾಡಿನ ಆಗಸದಲ್ಲೇ ಕನ್ನಡ ಕಾಣಿಸುತ್ತಿಲ್ಲ ಆನ್‌ಲೈನ್ ಅಭಿಯಾನ
ವಿಮಾನ ಯಾನ ಸಂಸ್ಥೆಗಳ ಕನ್ನಡ ನಿರ್ಲಕ್ಷ್ಯ ವಿರುದ್ಧ ಕನ್ನಡ ಗ್ರಾಹಕರ ಕೂಟದ ಸದಸ್ಯರು, “ಸರ್ವ್ ಇನ್ ಮೈ ಲಾಂಗ್ವೇಜ್’ ಹೆಸರಿನಲ್ಲಿ ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ. ಇದರೊಂದಿಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಬನವಾಸಿ ಬಳಗವೂ ಈ ಬಗ್ಗೆ ಟ್ವಿಟರ್ ಅಭಿಯಾನ ಆರಂಭಿಸಲು ನಿರ್ಧರಿಸಿದೆ.
Related Articles
ವಿಮಾನಯಾನ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬದಲಾಗಬೇಕು.
ಅರುಣ್ ಜಾವಗಲ್, ಕನ್ನಡ ಗ್ರಾಹಕರ ಕೂಟ
Advertisement
ಶಂಕರ್ ಪಾಗೋಜಿ