ಕಲ್ಯಾಣ್: ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಇದರ ವತಿಯಿಂದ ಗಾಂಧಿ ಜಯಂತಿ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಅ.2 ರಂದು ಬೆಳಗ್ಗೆ ಕಲ್ಯಾಣ್ ಪೂರ್ವದ ಲೋಕ ಫೆಡರೇಶನ್ ಹಾಲ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಪ್ರಕಾಶ್ ಕುಂಠಿನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಅಂಬರ್‌ನಾಥ್ ನಗರ ಪಾಲಿಕೆ ಕನ್ನಡ ಶಾಲೆಯ ಶಿಕ್ಷಕಿ ರಾಬಿಯಾ ಎ. ರಾಜೂರ್, ಕಲ್ಯಾಣ್ ನಿವೃತ್ತ ಶಿಕ್ಷಕಿ ಸರೋಜಿನಿ ಎಸ್. ಹಿರೇಮಠ ಅವರನ್ನು ಸಮ್ಮಾನಿಸಲಾಯಿತು.
ಪರಿಸರದ ಮಾತ್ರವಲ್ಲ ಸಂಸ್ಥೆಯ ಸದಸ್ಯ ಶಿಕ್ಷಕರುಗಳಾದ ಜಯಂತಿ ಮನೋಹರ ದಾಂಡೆಕರ, ಉಷಾ ರಾಜೀವ ಹುನಗುಂದ, ಶ್ರೀದೇವಿ ಸ್ವಾಮಿ, ಪದ್ಮಜಾ ಪಾಚಾಪುರ್ಕರ್, ಶಂಕರ ರಾಥೋಡ್, ಕಮಲಾ ಪೂಜಾರಿ, ಶ್ಯಾಮಲಾ ಶೆಟ್ಟಿ, ಜಯಶ್ರೀ ಬುರ್ಲಿ, ಭಾರತಿ ಶೆಟ್ಟಿ, ಮಹಾಲಿಂಗ ಹೊಸಕೋಟಿ, ಶಂಕರ ಶಿರಹಟ್ಟಿ, ಕುಶಲ ಬಿ. ಶೆಟ್ಟಿ, ಆರ್. ಎಚ್. ಕುಲಕರ್ಣಿ ಮತ್ತು ವನಜಾಕ್ಷೀ ಜಿಗಳೂರು ಸೇರಿದಂತೆ 15 ಮಂದಿ ಶಿಕ್ಷಕ-ಶಿಕ್ಷಕಿಯರನ್ನು ಗೌರವಿಸಲಾಯಿತು.
ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಸದಸ್ಯರುಗಳಿಗಾಗಿ ರಂಗೋಲಿ, ಭಾವಗೀತೆ, ಭಾಷಣ ಸ್ಪರ್ಧೆ ನಡೆಯಿತು. ಸುಮಾರು 31 ಸ್ಪರ್ಧಿಗಳು ಭಾಗವಹಿಸಿದ್ದರು. ತೀರ್ಪು ಗರರಾಗಿ ರಶ್ಮೀ ಆರ್. ಕಾಖಂಡಕಿ, ಶಂಕರ ಶಿರಹಟ್ಟಿ, ದಿವಾಕರ ಸಾಲ್ಯಾನ್ ಸಹಕರಿಸಿದರು. ಭಾಷಣ ಸ್ಪರ್ಧೆಯಲ್ಲಿ ಉಷಾ ಆರ್. ಹುನಗುಂದ ಪ್ರಥಮ, ಚಂದ್ರಶೇಖರ ದ್ವಿತೀಯ, ವಸಂತ ಚಂದ್ರಶೇಖರ ತೃತೀಯ ಬಹುಮಾನ ಗಳಿಸಿದರು.
ಭಾಷಣ ಸ್ಪರ್ಧೆಯಲ್ಲಿ ಒಟ್ಟು 11 ಮತ್ತು ಭಾವಗೀತೆಯಲ್ಲಿ 14, ರಂಗೋಲಿ ಸ್ಪರ್ಧೆಯಲ್ಲಿ 7 ಸ್ಪರ್ಧಿಗಳಿದ್ದರು. ಭಾವಗೀತೆಯಲ್ಲಿ ಸುಜಾತಾ ಸದಾಶಿವ ಶೆಟ್ಟಿ ಪ್ರಥಮ, ಸುಜಾತಾ ಸುಕುಮಾರ್ ದ್ವಿತೀಯ, ಜಯಂತಿ ದಾಂಡೇಕರ ತೃತೀಯ, ರಂಗೋಲಿ ಸ್ಪರ್ಧೆಯಲ್ಲಿ ಉಮಾ ಹುನ್ಸಿಮರ ಪ್ರಥಮ, ದರ್ಶನಾ ಅಮೀನ್ ದ್ವಿತೀಯ, ಸರೋಜಾ ಅಮಾತಿ ತೃತೀಯ ಬಹುಮಾನ ಗಳಿಸಿದರು. 15 ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರಕ್ಕೆ ಸಹಕರಿಸಿದ ದಾನಿಗಳಾದ ಎಂ. ಎಸ್. ನಾರಾ, ಸಚಿನ್ ಸಾಲ್ಯಾನ್, ವಿ. ಡಿ. ಹಿರೇಮಠ, ಶಿವಶಂಕರ್ ಕೊಂಡ ಗುಳಿ, ಶಿವಾನಂದ ಸಂಕಪಾಲಿ, ಬಸವಲಿಂಗಪ್ಪ ಸೊಡ್ಡಗಿ, ಅಕ್ಷಯ ಪಾಟೀಲ್, ಚೆನ್ನಬಸವಪ್ಪ ಸಿಂಧೂರ, ಜಿ. ಕೆ. ಮಡಿವಾಳ, ಸಿದ್ಧರಾಮಯ್ಯ ಕೊಳೂರು, ಇಂದಿರಾ ಶೆಟ್ಟಿಗಾರ್, ಮಮತಾ ಹುಸೇನಪ್ಪ ಅವರನ್ನು ಗೌರವಿಸಲಾಯಿತು.
ಅತಿಥಿಗಳಾಗಿ ಥಾಣೆ ಶ್ರೀ ಆದಿಶಕ್ತಿ ಕನ್ನಡ ಶಾಲೆಯ ಮಾಜಿ ಅಧ್ಯಕ್ಷ ಶಂಕರ ಶೆಟ್ಟಿ ಶಿಮಂತೂರು, ಗೌರವ ಅತಿಥಿಯಾಗಿ ಭಿವಂಡಿ ಹೊಟೇಲ್ ಆ್ಯಂಡ್ ಪರ್ಮಿಟ್ ರೂಮ್ ಓನರ್ ಅಸೋಸಿಯೇಶನ್ ಅಧ್ಯಕ್ಷ ದೊಂಡೆರಂಗಡಿ ಭಾಸ್ಕರ ಟಿ. ಶೆಟ್ಟಿ, ಕಲ್ಯಾಣ್ ಪರಿಸರದ ಶಿಕ್ಷಕ, ಸಮಾಜ ಸೇವಕ ಕರ್ನಾಟಕ ಮಿತ್ರಮಂಡಳಿ ಕಲ್ಯಾಣ್ ಅಧ್ಯಕ್ಷ ಮರೋಲಿ ದಿವಾಕರ ಸಾಲ್ಯಾನ್, ಸಂಸ್ಥೆಯ ಗೌರವಾಧ್ಯಕ್ಷ ಮಂಜುನಾಥ ರೈ, ಉಪಾಧ್ಯಕ್ಷ ಎಂ. ಬಿ. ಬಿರಾದರ್, ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ನಾೖಕ್, ಜೊತೆ ಕೋಶಾಧಿಕಾರಿ ಮಹಾಲಿಂಗ ಹೊಸಕೋಟಿ, ಜತೆ ಕಾರ್ಯದರ್ಶಿ ಪ್ರಕಾಶ್ ಕುಂಠಿನಿ, ಗೌರವಾಧ್ಯಕ್ಷ ಮಂಜುನಾಥ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಬಸವರಾಜ ಜತ್ತಿ ನಿರ್ವಹಿಸಿದರು. ಕೊಟ್ರೇಶ್ ಮಠ, ಪುಟ್ಟಪ್ಪ ಹಾನಗಲ್, ಎಂ. ಬಿ. ಬಿರಾದರ್, ಸರೋಜಾ ಅಮಾತಿ, ಭಾರತಿ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಪ್ರಕಾಶ್ ಕುಂಠಿನಿ ವಂದಿಸಿದರು.
ಚಿತ್ರ-ವರದಿ : ಪ್ರಕಾಶ್ ಕುಂಠಿನಿ