Advertisement
ಈ ಭಾಗದ ಕೂಡುರಸ್ತೆ, ಕಟ್ಟತ್ತಾರು ಭಾಗದಲ್ಲಿ ರಸ್ತೆ ಬದಿಯ ನೆಡುತೋಪಿನಲ್ಲಿರುವ ಎರಡೂ ಬದಿಯ ಮರಗಳು ಸಂಪೂರ್ಣವಾಗಿ ರಸ್ತೆಗೆ ವಾಲಿ ನಿಂತಿದ್ದು,ಈ ರಸ್ತೆಯ ಮೂಲಕ ದಿನ ನಿತ್ಯ ಹಲವಾರು ವಾಹನಗಳು ತೆರಳುತ್ತಿದ್ದು, ಪ್ರಮುಖ ಯಾತ್ರಸ್ಥಳವಾಗಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇದೇ ರಸ್ತೆಯ ಮೂಲಕ ಯಾತ್ರಿಗಳು ತೆರಳುತ್ತಿದ್ದು, ಮರ ರಸ್ತೆಗೆ ಬಿದ್ದರೆ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇದೆ. ಅಲ್ಲದೆ ವಾಹನ ಚಲಾವಣೆ ವೇಳೆಯೂ ಮರ ಬಿದ್ದರೆ ಹಾನಿಯಾಗುವ ಸಾಧ್ಯತೆಯೂ ಇದೆ.
ಇದೇ ರಸ್ತೆಯ ಬೆಳಂದೂರು ಜಂಕ್ಷನ್ ನಲ್ಲಿಯೂ ಅಕೇಶಿಯಾ ಮರಗಳು ರಸ್ತೆಗೆ ವಾಲಿ ನಿಂತಿದ್ದು,ಬೀಳುವ ಅಪಾಯವಿದೆ. ಇಲ್ಲಿನ ಮರಗಳು ಧರಶಾಹಿಯಾದರೆ ವಿದ್ಯುತ್ ಕಂಬಗಳಿಗೂ ಹಾನಿಯಾಗುವ ಸಾಧ್ಯತೆ ಇದೆ. ಈ ಕುರಿತು ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಗಮನಹರಿಸಬೇಕಿದೆ. ಅಪಾಯ ತಪ್ಪಿಸಿ
ಹೆದ್ದಾರಿ ಬದಿಗಳಲ್ಲಿರುವ ಅಪಾಯಕಾರಿ ಸ್ಥಿತಿಯಲ್ಲಿರುವ ಮರ ಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆ ಗಮನಹರಿಸಿ, ಸಂಭಾವ್ಯ ಅಪಾಯವನ್ನು ತಪ್ಪಿಸಬೇಕಿದೆ ಎಂದು ಚಾರ್ವಾಕ ಪ್ರಾ. ಕೃ.ಪ.ಸ.ಸಂಘ ಕಾಣಿಯೂರು ಅಧ್ಯಕ್ಷರು ಧರ್ಮೇಂದ್ರ ಕಟ್ಟತ್ತಾರು ಆಗ್ರಹಿಸಿದ್ದಾರೆ.
Related Articles
ದ್ದಾರಿಯ ಬದಿಯಲ್ಲಿರುವ ಮರಗಳನ್ನು ಕೂಡಲೇ ತೆರವುಮಾಡಲಾಗುವುದು.ಈ ಕುರಿತು ಈಗಾಗಲೇ ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಶನಿವಾರದೊಳಗೆ ಮರಗಳನ್ನು ಪರಿಶೀಲಿಸಿತೆರವುಗೊಳಿಸಲಾಗುವುದು.
– ಪ್ರಮೋದ್ ಕುಮಾರ್
ಸಹಾಯಕ ಎಂಜಿನಿಯರ್
Advertisement