Advertisement

ಮುಂಬೈ ಮಹಾನಗರ ಪಾಲಿಕೆಗೆ ಮುಖಭಂಗ; ಕಂಗನಾ ಕಟ್ಟಡ ಧ್ವಂಸ ಕಾರ್ಯಕ್ಕೆ ಹೈಕೋರ್ಟ್ ತಡೆ

02:35 PM Sep 09, 2020 | Nagendra Trasi |

ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಗೆ ಸೇರಿದ್ದ ಮುಂಬೈ ಕಚೇರಿ ಕಟ್ಟಡವನ್ನು ಧ್ವಂಸಗೊಳಿಸದಂತೆ ಬಾಂಬೆ ಹೈಕೋರ್ಟ್ ಬುಧವಾರ(ಸೆ.09, 2020) ತಡೆಯಾಜ್ಞೆ ನೀಡಿದ್ದು, ಈ ಮೂಲಕ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯಾಚರಣೆ ವಿರುದ್ಧ ತಡೆ ನೀಡಿದಂತಾಗಿದೆ.

Advertisement

ನಟಿ ಕಂಗನಾ ರನೌತ್ ಹಿಮಾಚಲ ಪ್ರದೇಶದಿಂದ ಮುಂಬೈಗೆ ಆಗಮಿಸುವ ಮುನ್ನವೇ ಕಟ್ಟಡ ಧ್ವಂಸದ ಬಗ್ಗೆ ಬಿಎಂಸಿ ನೋಟಿಸ್ ಜಾರಿಗೊಳಿಸಿತ್ತು. ಬುಧವಾರ ಬೆಳಗ್ಗೆ ಕಂಗನಾ ಪರ ವಕೀಲ ಬಾಂಬೆ ಹೈಕೋರ್ಟ್ ಗೆ ಬಿಎಂಸಿ ಕಾರ್ಯಾಚರಣೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು, ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಬಿಎಂಸಿ ಕಾರ್ಯಾಚರಣೆಗೆ ತಡೆ ನೀಡಿದ್ದು, ನಾಳೆ ಮಧ್ಯಾಹ್ನ 3ಗಂಟೆಗೆ ವಿಚಾರಣೆ ಮುಂದೂಡಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಕಂಗನಾ ರನೌತ್ ವಿರುದ್ಧ ವಿವಾದ : ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಗೆ ಬೆದರಿಕೆ ಕರೆ

ವಾಣಿಜ್ಯ ನಗರಿ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಆಡಳಿತಾರೂಢ ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಮುಂಬೈಗೆ ಆಗಮಿಸಿದ್ದು, ಕಂಗನಾ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿತ್ತು. ಬುಧವಾರ ಬೆಳಗ್ಗೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಅಧಿಕಾರಿಗಳು ಅಕ್ರಮವಾಗಿ ಕಚೇರಿ ಕಟ್ಟಿರುವುದಾಗಿ ಆರೋಪಿಸಿದ್ದು, ಕಟ್ಟಡವನ್ನು ನೆಲಸಮಗೊಳಿಸಲು ಆರಂಭಿಸಿದ್ದರು.

ಮುಂಬೈನ ಪ್ರತಿಷ್ಠಿತ ಪಾಲಿ ಹಿಲ್ ಪ್ರದೇಶದಲ್ಲಿರುವ ನಟಿ ಕಂಗನಾ ರನೌತ್ ಮಣಿಕರ್ಣಿಕಾ ಫಿಲ್ಮ್ ಕಚೇರಿಯನ್ನು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ಒಡೆಯುತ್ತಿರುವುದಾಗಿ ಕಂಗನಾ ಟ್ವೀಟ್ ನಲ್ಲಿ ತಿಳಿಸಿದ್ದರು.

Advertisement

ಇದನ್ನೂ ಓದಿ: ಈ ದೇಶದ ಹೆಣ್ಣು ಮಕ್ಕಳು ನಿಮ್ಮನ್ನೆಂದೂ ಕ್ಷಮಿಸಲ್ಲ: ಸಂಜಯ್ ಗೆ ತಿರುಗೇಟು ನೀಡಿದ ಕಂಗನಾ !

ಪೊಲೀಸರ ಭದ್ರತೆಯೊಂದಿಗೆ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕಂಗನಾ ಕಚೇರಿಯನ್ನು ಧ್ವಂಸಗೊಳಿಸುತ್ತಿರುವ ವಿಡಿಯೋ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದು, ಮುಂಬೈ ಯಾರ ಆಸ್ತಿ ಎಂದು ಕಂಗನಾ ಮತ್ತೊಮ್ಮೆ ಕಿಡಿಕಾರಿದ್ದರು.

“ತನ್ನ ಕಚೇರಿಯನ್ನು ರಾಮಮಂದಿರಕ್ಕೆ ಹೋಲಿಸಿರುವ ಕಂಗನಾ ರನೌತ್, ಬಾಬರ್ ಇದನ್ನು ಒಡೆದು ಹಾಕುತ್ತಿರುವುದಾಗಿ ಪ್ರತಿಕ್ರಿಯೆ ನೀಡುವ ಮೂಲಕ ಶಿವಸೇನಾ ನೇತೃತ್ವದ ಸರ್ಕಾರಕ್ಕೆ” ತಿರುಗೇಟು ನೀಡಿದ್ದರು.

ಇದನ್ನೂ ಓದಿ: ಥ್ಯಾಂಕ್ಸ್ ಅಮಿತ್ ಶಾಜೀ: ಬಾಲಿವುಡ್ ನಟಿ ಕಂಗನಾಗೆ “ವೈ” ಕೆಟಗರಿ ಭದ್ರತೆ

Advertisement

Udayavani is now on Telegram. Click here to join our channel and stay updated with the latest news.

Next