Advertisement

ಟೆಸ್ಟ್ ಪಂದ್ಯಾಟ : ಪ್ರವಾಸಿ ಪಾಕಿಸ್ಥಾನ ಎದುರು ವಿಲಿಯಮ್ಸನ್‌ ಸೆಂಚುರಿ ನಂ. 23

11:24 PM Dec 27, 2020 | sudhir |

ಮೌಂಟ್‌ ಮೌಂಗನುಯಿ: ನಾಯಕ ಕೇನ್‌ ವಿಲಿಯಮ್ಸನ್‌ ಅವರ 23ನೇ ಶತಕದೊಂದಿಗೆ ಮೆರೆದಾಡಿದ ನ್ಯೂಜಿಲ್ಯಾಂಡ್‌, ಪ್ರವಾಸಿ ಪಾಕಿಸ್ಥಾನ ಎದುರಿನ ಟೆಸ್ಟ್‌ ಪಂದ್ಯದಲ್ಲಿ 431 ರನ್‌ ಪೇರಿಸಿದೆ. ಬಳಿಕ ಪ್ರವಾಸಿಗರ ಒಂದು ವಿಕೆಟನ್ನು 30 ರನ್ನಿಗೆ ಕಿತ್ತು ಮೇಲುಗೈ ಸೂಚನೆ ನೀಡಿದೆ.

Advertisement

ಮೊದಲ ದಿನ 94ರಲ್ಲಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ವಿಲಿಯಮ್ಸನ್‌ 297 ಎಸೆತ ಎದುರಿಸಿ 129 ರನ್‌ ಮಾಡಿದರು. ಇದು ಅವರ 23ನೇ ಹಾಗೂ ಅತ್ಯಂತ ನಿಧಾನಗತಿಯ ಟೆಸ್ಟ್‌ ಶತಕ. 100 ರನ್ನಿಗಾಗಿ 261 ಎಸೆತ ಎದುರಿಸಿದರು. ಒಟ್ಟು 12 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಮೊದಲ ಓವರಿನಲ್ಲೇ ಬ್ಯಾಟ್‌ ಹಿಡಿದು ಬಂದಿದ್ದ ವಿಲಿಯಮ್ಸನ್‌, 105ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡರು.

ಇದು ನ್ಯೂಜಿಲ್ಯಾಂಡ್‌ನ‌ಲ್ಲಿ ಆಡಲಾದ ಕಳೆದ 10 ಟೆಸ್ಟ್‌ಗಳಲ್ಲಿ ವಿಲಿಯಮ್ಸನ್‌ ಬಾರಿಸಿದ 3ನೇ ಶತಕ. ಇದರಲ್ಲೆರಡು ದ್ವಿಶತಕವಾಗಿದೆ. ಜತೆಗೆ 3 ಅರ್ಧ ಶತಕವೂ ಸೇರಿದೆ.

ಇದನ್ನೂ ಓದಿ:ತೇಜಸ್ವಿ ಸೂರ್ಯ ಫ‌ುಟ್‌ಬಾಲ್‌ ಕಪ್‌ : ಪ್ರಭಾ 7ಎಸ್‌ ತಂಡ ಜಯಶಾಲಿ

42ರಲ್ಲಿ ನಾಟೌಟ್‌ ಆಗಿದ್ದ ಹೆನ್ರಿ ನಿಕೋಲ್ಸ್‌ 56 ರನ್‌ ಹೊಡೆದರೆ, ಕೀಪರ್‌ ಬ್ರಾಡ್ಲಿ ವಾಟ್ಲಿಂಗ್‌ 73 ರನ್‌ ಕೊಡುಗೆ ಸಲ್ಲಿಸಿದರು. ಪಾಕ್‌ ಪರ ಅಫ್ರಿದಿ 4, ಯಾಸಿರ್‌ ಶಾ 3 ವಿಕೆಟ್‌ ಉರುಳಿಸಿದರು.

Advertisement

ಪಾಕಿಸ್ಥಾನ ಆರಂಭಕಾರ ಶಾನ್‌ ಮಸೂದ್‌ (10) ವಿಕೆಟ್‌ ಕಳೆದುಕೊಂಡಿದೆ. 19 ರನ್‌ ಮಾಡಿದ ಅಬಿದ್‌ ಅಲಿ ಹಾಗೂ ಖಾತೆ ತೆರೆಯದ ನೈಟ್‌ ವಾಚ್‌ಮನ್‌ ಮೊಹಮ್ಮದ್‌ ಅಬ್ಟಾಸ್‌ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next