Advertisement

ಕನಕಗಿರಿ: ಹುಳ ಬಿದ್ದ ಆಹಾರ ಸೇವಿಸಿ ಹಲವು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

04:01 PM Nov 22, 2022 | Team Udayavani |

ಕನಕಗಿರಿ: ಪಟ್ಟಣದ 1 ನೇ ವಾರ್ಡ್ ನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಬೆಳಗ್ಗೆ ಉಪಹಾರ ಸೇವನೆಯಲ್ಲಿ ಹುಳು ಬಿದ್ದು ಆಹಾರ ಸೇವನೆ ಮಾಡಿದ ಹಲವು ವಿಧ್ಯಾರ್ಥಿಗಳು ಅಸ್ತವ್ಯಸ್ತಗೊಂಡು ಸ್ಥಳೀಯ ಸಮುದಾಯ ಅರೋಗ್ಯ ಕೆಂದ್ರಕ್ಕೆ ದಾಖಲಾಗಿದ್ದರೆ.

Advertisement

ಇಲ್ಲಿನ ಅಕ್ಕಪಕ್ಕದ ಗ್ರಾಮಗಳ ವಿಧ್ಯಾರ್ಥಿನಿಯರು ವಸತಿ ನಿಲಯಗಳಲ್ಲಿದ್ದು ಪಟ್ಟಣದ ವಿವಿಧ ಪ್ರೌಢ ಶಾಲೆಗಳಿಗೆ ಹೋಗಿ ವಿಧ್ಯಾಭ್ಯಾಸ ಮಾಡುತ್ತಾರೆ.

ಆದರೆ ಕಳೆದ ಎರಡು- ಮೂರು ದಿನಗಳಿಂದ ಉಪಹಾರದಲ್ಲಿ ಹುಳುಗಳು ಬಿದ್ದಿದ್ದು ಈ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ಕೂಡ ಕರೆಯಲಾಗಿತ್ತು.

ಆದರೆ ಬೆಳಗ್ಗೆ ಮಾಡಿದ ಉಪಹಾರದಲ್ಲಿ ಹೆಚ್ಚು ಹುಳುಗಳು ಬಿದ್ದ ಕಾರಣ ಆಹಾರ ಸೇವಿಸಿದ ಹಲವು ವಿಧ್ಯಾರ್ಥಿಗಳು ಅಸ್ತವ್ಯಸ್ತಗೊಂಡ ಹಿನ್ನಲೆಯಲ್ಲಿ ಎಸ್ಎಫ್ಐ ಕಾರ್ಯಕರ್ತರು, ವಿವಿಧ ಸಂಘಟನೆಗಳ ಸದಸ್ಯರು ಅಟೋ ಸೇರಿದಂತೆ ವಿವಿಧ ವಾಹನಗಳಲ್ಲಿ ಕೊಂಡೊಯ್ಯದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ದಿನ ದಿನ ಅಡುಗೆಯಲ್ಲಿ ಏರು ಪೇರು ಉಂಟಾಗುವ ಕುರಿತು ಅಡುಗೆದಾರರಿಗೆ ಮಾಹಿತಿ ನೀಡಿದರೆ ನಮನ್ನು ಗದರಿಸುತ್ತಾರೆ ಎಂದು ವಿಧ್ಯಾರ್ಥಿಗಳು ಹೇಳಿ ಕೊಂಡರು ಈ ಕುರಿತು ಅಡುಗೆದಾರರನ್ನು ಬದಲಾಯಿಸಿ ಬೇರೆ ಅವರಿಗೆ ನೇಮಿಸಿಬೇಕೆಂದು ಪಪ ಸದಸ್ಯ ಶೇಷಪ್ಪ ಪೂಜಾರ, ಪ್ರಮುಖರಾದ ಉಮೇಶ ಮ್ಯಾಗಡೆ,ಕನಕಪ್ಪ ಮ್ಯಾಗಡೆ, ಶಶಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ವೇಳೆಯಲ್ಲಿ ಸ್ಥಳಕ್ಕೆ ಡಿಡಿ ಚಿದಾನಂದ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತುಗ್ಲೇಪ್ಪ ದೇಸಾಯಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ತಾಲೂಕು ಎನ ಜಿಒ ನಿರ್ದೇಶಕರಾದ ಮುಕ್ತುಮ್ ಸಾಬ, ಶೇಖರಪ್ಪ ಕುಂಟೋಜಿ, ದಲಿತ ಮುಖಂಡ ಪಾಮಣ್ಣ ಇಳಿಗನೂರು, ಸ್ಥಳೀಯ ಪೋಲಿಸ್ ಪೇದೆಗಳಾದ ಲಕ್ಕಪ್ಪ, ಶಿವರಾಜ, ಬಸವರಾಜ ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next