Advertisement

ಗೃಹರಕ್ಷಕರ ಸೇವೆ ಅನನ್ಯ: ರಘುಕುಮಾರ್‌

03:33 PM Jun 05, 2020 | Naveen |

ಕಂಪ್ಲಿ: ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಸಹಿತ ಉತ್ತಮ ಸೇವೆ ನೀಡುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿ ಕಾಯಂ ವೇನತವಿಲ್ಲದಿದ್ದರೂ ಸಹಿತ ಉತ್ತಮ ಸೇವೆ ನೀಡುತ್ತಿದ್ದಾರೆಂದು ಹೊಸಪೇಟೆ ಉಪ ವಿಭಾಗದ ಡಿವೈಎಸ್ಪಿ ವಿ. ರಘುಕುಮಾರ್‌ ತಿಳಿಸಿದರು.

Advertisement

ಅವರು ಪಟ್ಟಣದ ಗೃಹರಕ್ಷಕದಳದ ಕಚೇರಿಯಲ್ಲಿ ಗೃಹರಕ್ಷಕರಿಗೆ ಸ್ಥಳೀಯ ಪೆಟ್ರೋಲ್‌ ಬಂಕ್‌ ಮಾಲೀಕರು ಸ್ಥಳಿಯ 90 ಗೃಹರಕ್ಷಕರಿಗೆ ನೀಡಿದ ಆಹಾರ ಧಾನ್ಯ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ಕಳೆದ 60 ದಿನಗಳಿಂದ ಆವರಿಸಿಕೊಂಡಿರುವ ಮಹಾಮಾರಿ ಕೋವಿಡ್ ವೈರಸ್‌ ವಿರುದ್ಧ ಹೋರಾಡುತ್ತಿರುವ ವಾರಿಯರ್ಗಳಲ್ಲಿ ಗೃಹರಕ್ಷಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಸರ್ಕಾರದ ಕಾಯಂ ವೇತನ ಇಲ್ಲದಿದ್ದರೂ ಸಹಿತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗೌರವಧನಕ್ಕೆ ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಗುರುತಿಸಿ ಕಂಪ್ಲಿ ಪಟ್ಟಣದ ಪೆಟ್ರೋಲ್‌ ಬಂಕ್‌ ಮಾಲೀಕರು ಸುಮಾರು 90 ಗೃಹರಕ್ಷಕರಿಗೆ ದಿನನಿತ್ಯದ ಆಹಾರ ಧಾನ್ಯಗಳ ಕಿಟ್‌ ವಿತರಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪಿ.ಬ್ರಹ್ಮಯ್ಯ, ಸದಸ್ಯರಾದ ಡಾ| ವಿ.ಎಲ್‌. ಬಾಬು, ಪೆಟ್ರೋಲ್‌ ಬಂಕ್‌ ಮಾಲೀಕರಾದ ವಾಲಿಕೊಟ್ರಪ್ಪ ಮಾತನಾಡಿದರು. ನಂತರ 90 ಜನ ಗೃಹರಕ್ಷಕರಿಗೆ ಆಹಾರ ಧಾನ್ಯ ಕಿಟ್‌ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಹೊಸಪೇಟೆ ಘಟಕಾಧಿಕಾರಿ ಎಸ್‌. ಎನ್‌. ಗೀರೀಶ್‌, ಕಂಪ್ಲಿ ಘಟಕಾ ಧಿಕಾರಿ ಮೋಹನ್‌ಮೂರ್ತಿ, ಪೆಟ್ರೋಲ್‌ ಬಂಕ್‌ ಮಾಲೀಕರಾದ ರಮೇಶ್‌ ಬಬಲೇಶ್ವರ, ಕೆ.ಬಿ. ಮಂಜುನಾಥ್‌, ಕೃಷ್ಣ ಎಸ್‌. ಪೋಳ್‌, ಕೋಟೆ ರಾಜಶೇಖರ್‌, ಎನ್‌. ಪುರುಷೋತ್ತಮ, ಕೊಡಿದಲ್‌ ರಾಜು, ವಾಲಿ ಗುರು, ಎಸ್‌. ಪುಲ್ಲಾರೆಡ್ಡಿ, ಆರ್‌. ಇಮಾಮ್‌ ಸಾಬ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next