Advertisement

ಕುಡುಕರ ತಾಣವಾದ ಕಂಪ್ಲಿ ಹಳೇ ಬಸ್‌ ನಿಲ್ದಾಣ

04:35 PM Jun 12, 2020 | Naveen |

ಕಂಪ್ಲಿ: ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಪಟ್ಟಣದ ಹಳೇ ಬಸ್‌ ನಿಲ್ದಾಣ ಆವರಣ ಹಾಗೂ ವಾಣಿಜ್ಯ ಮಳಿಗೆಗಳ ಮುಂಭಾಗ ಕುಡುಕರ ತಾಣವಾಗಿದೆ. ಕುಡುಕರ ಹಾವಳಿಯಿಂದ ಹೂ-ಹಣ್ಣು, ಕಿರಾಣಿ ಸಾಮಾನು ಖರೀದಿಗೆ ಬರುವವರು, ಪ್ರಯಾಣಿಕರು ಹಾಗೂ ಸಾರ್ವಜನಿಕರು ರೋಸಿ ಹೋಗಿದ್ದಾರೆ.

Advertisement

ಪಟ್ಟಣದ ಹಳೇ ಬಸ್‌ ನಿಲ್ದಾಣ ಆವರಣವನ್ನು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಹೂ ಮತ್ತು ಹಣ್ಣು ಮಾರಾಟಕ್ಕಾಗಿ ಮೈದಾನವನ್ನು ಅಭಿವೃದ್ಧಿಗೊಳಿಸಿ, ಪಕ್ಕದಲ್ಲಿ ಸಾಲು ವಾಣಿಜ್ಯ ಮಳಿಗೆಗಳನ್ನು ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಇವುಗಳನ್ನು ನಿರ್ಮಿಸಿ ವರ್ಷಗಳೇ ಕಳೆದರೂ ವಾಣಿಜ್ಯ ಮಳಿಗೆಗಳ ಹರಾಜ್‌ ಹಾಕದೇ ಇರುವುದರಿಂದ ಮತ್ತು ಬೀದಿ ವ್ಯಾಪಾರಿಗಳನ್ನು ಮೈದಾನಕ್ಕೆ ಸ್ಥಳಾಂತರಿಸದೇ ಇರುವುದರಿಂದ ಮಧ್ಯಾಹ್ನವಾದರೆ ಸಾಕು ಕುಡುಕರ ತಾಣವಾಗಿ ಮಾರ್ಪಡುತ್ತದೆ.

ಪಕ್ಕದಲ್ಲಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳು ಎಷ್ಟೇ ಹೇಳಿದರೂ ಪಕ್ಕದಲ್ಲಿಯೇ ಇರುವ ಎರಡು ಮದ್ಯದದ ಅಂಗಡಿಗಳಿಂದ ಮದ್ಯ ತರುವ ಮದ್ಯಸೇವಕರು ಬಯಲಿನಲ್ಲಿಯೇ ಕುಡಿದು ಇಡೀ ವಾತಾವರಣ ಕಲುಷಿತ ಗೊಳಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ಈ ಪ್ರದೇಶದಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ಮಾಡಿ ಎಚ್ಚರಿಸಿದರೂ ಸಹಿತ ಕುಡುಕರು ಮಾತ್ರ ನಿತ್ಯ ಮದ್ಯ ಸೇವನೆ ನಿಲ್ಲಿಸಿಲ್ಲ. ಸ್ವಚ್ಛತೆ ಹಾಗೂ ಸಾರ್ವಜನಿಕರ ಹಿತಕಾಯಬೇಕಿದ್ದ ಪುರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next