Advertisement

Kambala Kalarava: 400 ವರ್ಷ ಇತಿಹಾಸವಿರುವ ಮಂಡಾಡಿ ಹೋರ್ವರಮನೆ ಕಂಬಳ

03:07 AM Dec 13, 2024 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮದ ಕಂಬಳವು ಈ ಬಾರಿ ಡಿ. 13ರಂದು ನಡೆಯಲಿದೆ.

Advertisement

ಸುಮಾರು 400 ವರ್ಷಗಳ ಇತಿಹಾಸ ವಿರುವ ಈ ಕಂಬಳವು ಹಲವು ವರ್ಷಗಳಿಂದ ಸ್ಥಗಿತಗೊಂ ಡಿತ್ತು. ಮಂಡಾಡಿ ಹೋರ್ವರ ಮನೆಯವರು ಮತ್ತು ಮಂಡಾಡಿ ಮಕ್ಕಿ ಮನೆಯವರು ಹಾಗೂ ಗ್ರಾಮಸ್ಥರ ಸಹಕಾರದಿಂದ 2008 ರಲ್ಲಿ ರತ್ನಾಕರ ಶೆಟ್ಟಿ ಮುಂದಾಳತ್ವದಲ್ಲಿ ಕಂಬಳವನ್ನು ಪುನಃ ಆರಂಭಿಸಲಾಯಿತು.
ಕಂಬಳದ ದಿನ ಶ್ರೀ ವನದುರ್ಗಾ ಪರಮೇಶ್ವರಿ ಹಾಗೂ ಶ್ರೀ ಕಾಡ್ತಿಯಮ್ಮ ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ಶ್ರೀ ಸ್ವಾಮಿ ಸನ್ನಿಧಿ ಎದುರು ಮನೆಯ ಕೋಣಗಳನ್ನು ಶೃಂಗರಿಸಿ ಸಂಪ್ರದಾಯದಂತೆ ಪೂಜೆ ನಡೆಸಲಾಗುತ್ತದೆ.

9 ಮಂದಿ ಮುತ್ತೈದೆಯರು ಕಲಶ ಹಿಡಿದು ಕಂಬಳದ ನೊಗ, ಕನೆಹಲಗೆ, ತೆಕ್ಕೆ ಹಾಗೂ ಕೋಣಗಳ ಸಹಿತ ಮಲ ಗದ್ದೆಗೆ ಪ್ರದಕ್ಷಿಣಿ ಬಂದು, ಧೂಮವತಿ ದೈವಸ್ಥಾನದಲ್ಲಿ ಸಂದರ್ಶನ ಸೇವೆ ನಡೆಯುತ್ತದೆ. ವಾದ್ಯ, ಡೋಲು, ಕೊಂಬು, ಕಹಳೆಯೊಂದಿಗೆ ಮೆರವಣಿ ಗೆಯಲ್ಲಿ ಬರುತ್ತಾರೆ. ಕಂಬಳ ಗದ್ದೆಯ ಇನ್ನೊಂದು ಸ್ವಾಮಿ ಸನ್ನಿಧಿಯಲ್ಲಿ ಪೂಜೆ ನಡೆಯುತ್ತದೆ.

ಅನಂತರ ಹೋರ್ವರ ಮನೆಯವರು ಕಂಬಳ ಗದ್ದೆ ಮತ್ತು ಮನೆ ಕೋಣಗಳಿಗೆ ಮಂಗಳಾರತಿ ಬೆಳಗಿಸಿ, ಕೋಣಗಳನ್ನು ಕಂಬಳಗದ್ದೆಗೆ ಇಳಿಸಿ, ಪ್ರದಕ್ಷಿಣೆ ಬರುವುದರ ಮುಖೇನ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯುತ್ತದೆ. ಕೋಣಗಳ ಸ್ಪರ್ಧೆ ಮುಗಿದ ಬಳಿಕ ಮನೆ ಕೋಣಗಳನ್ನು ಸೂಡಿ ಮತ್ತು ದೊಂದಿ ಬೆಳಕಿನಲ್ಲಿ ಓಡಿಸುವುದರೊಂದಿಗೆ ಕಂಬಳ ಸಮಾಪನಗೊಳ್ಳುತ್ತದೆ.

ಸಾಂಪ್ರದಾಯಿಕವಾಗಿ ಆಚರಿಸುವ ಜತೆಗೆ ಹೆಚ್ಚು ಜನರು ಭಾಗವಹಿಸಲು ಅನುಕೂಲವಾಗುವಂತೆ ಪ್ರತಿ ವರ್ಷ 45ರಿಂದ 50 ಜತೆ ಕೋಣಗಳಿಗೆ ಸ್ಪರ್ಧೆಯಲ್ಲಿ ಅವಕಾಶ ನೀಡಲಾ ಗುತ್ತದೆ. ಕೋಣಗಳ ಮಾಲಕರಿಗೆ ಪ್ರೋತ್ಸಾಹಧನದೊಂದಿಗೆ ಗೌರವ ಸಲ್ಲಿಸುತ್ತೇವೆ ಎಂದು ಹೋರ್ವರ ಮನೆತನದ ಬಾಬಣ್ಣ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next