Advertisement

White House Fellows ಆಗಿ ಕಮಲಾ ಮೇಘರಂಜನಿ ಆಯ್ಕೆ

08:45 PM Sep 28, 2023 | Team Udayavani |

ವಾಷಿಂಗ್ಟನ್‌: 2023-24ರ ಸಾಲಿನ ಪ್ರತಿಷ್ಠಿತ ವೈಟ್‌ಹೌಸ್‌ ಫೆಲೋ ಆಗಿ ಭಾರತೀಯ ಮೂಲದ ಅಮೆರಿಕನ್‌ ಗ್ರಂಥಿಶಾಸ್ತ್ರಜ್ಞೆ ಕಮಲಾ ಮೇಘರಂಜನಿ ಆಯ್ಕೆಯಾಗಿದ್ದಾರೆ.

Advertisement

ಅಮೆರಿಕ ಸರ್ಕಾರವು ಈ ಸಾಲಿಗೆ ವೈಟ್‌ಹೌಸ್‌ ಫೆಲೋ ಆಗಿ ಒಟ್ಟು 15 ಮಂದಿಯನ್ನು ಆಯ್ಕೆ ಮಾಡಿದೆ. ಈ ಪೈಕಿ ಮೇಘರಂಜನಿ ಕೂಡ ಒಬ್ಬರಾಗಿದ್ದು, ವೈಟ್‌ಹೌಸ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ನಿರೂಪಣೆ ಕಚೇರಿಯಲ್ಲಿ ಇವರು ಕಾರ್ಯ ನಿರ್ವಹಿಸಲಿದ್ದಾರೆ. ಜತೆಗೆ ಲ್ಯುಕೇಮಿಯಾ ರೋಗಿಗಳಿಗೆ ಶುಶ್ರೂಷೆ ನೀಡಲಿದ್ದಾರೆ.

ನ್ಯೂಯಾರ್ಕ್‌ ನಿವಾಸಿಯಾಗಿರುವ ಮೇಘರಂಜನಿ, ವೈಟ್‌ಹೌಸ್‌ ಫೆಲೋ ಆಗಿ ಆಯ್ಕೆಯಾದ ಮೊಟ್ಟ ಮೊದಲ ಆಂಕಾಲಜಿಸ್ಟ್‌ ಆಗಿದ್ದಾರೆ. ಟ್ವೀಟರ್‌(ಎಕ್ಸ್‌)ನಲ್ಲಿ ಅವರು ಈ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next