ಚೆನ್ನೈ: ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಕಮಲ್ ಹಾಸನ್ ಅವರ ʼಇಂಡಿಯನ್ʼ ಸಿನಿಮಾದ ಎರಡನೇ ಭಾಗ ಬರುತ್ತಿರುವುದು ಗೊತ್ತೇ ಇದೆ. ಸಿನಿಮಾ ಸಟ್ಟೇರಿದ ದಿನದಿಂದ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.
“ಇಂಡಿಯನ್” ಶಂಕರ್ ಮತ್ತು ಕಮಲ್ ಹಾಸನ್ ಅವರ ವೃತ್ತಿಜೀವನದ ವಿಶೇಷ ಸಿನಿಮಾ. ಇದರ ಮುಂದುವರೆದ ಕಥೆಯು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಕಥೆಯಲ್ಲಿ ಹಲವು ಉಪ ಪ್ಲಾಟ್‌ಗಳಿವೆ. ಇದು ಎರಡು ಭಾಗಗಳಲ್ಲಿ ಒತ್ತಾಯಪೂರ್ವವಾಗಿ ಮುಕ್ತಾಯ ಕಾಣುವ ಸಿನಿಮಾವಲ್ಲ. ಈ ಸಿನಿಮಾದ ಕಥೆಯ ಅಂತ್ಯಕ್ಕೆ ಮೂರು ಭಾಗಗಳು ಬೇಕಾಗುತ್ತದೆ. 2ನೇ ಭಾಗದ ಕಥೆಯಲ್ಲಿನ ಕೆಲ ಅಂಶಗಳು 3ನೇ ಭಾಗದ ಚಿತ್ರೀಕರಣವನ್ನು ಏಕಕಾಲದಲ್ಲಿ ಮಾಡುವಂತೆ ಮಾಡಿದೆ ಎಂದು ಚಿತ್ರತಂಡದ ಆಪ್ತ ಮೂಲವೊಂದು ಹೇಳಿರುವುದಾಗಿ “ಪಿಂಕ್ ವಿಲ್ಲಾ” ವರದಿ ಮಾಡಿದೆ.
ಎಡಿಟ್ ಟೇಬಲ್‌ನಲ್ಲಿ ʼʼಇಂಡಿಯನ್” ಸಿನಿಮಾದ 2ನೇ ಭಾಗವನ್ನು ಎರಡು ಭಾಗಗಳಾಗಿ ಚಿತ್ರೀಕರಿಸುವ ಅಂದರೆ ಪಾರ್ಟ್ -3 ಯನ್ನು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತೆಂದು ವರದಿ ತಿಳಿಸಿದೆ.
ಶಂಕರ್ ಅವರ ಬಳಿ 6 ಗಂಟೆಗಳ “ಇಂಡಿಯನ್-2” ತುಣುಕುಗಳಿತ್ತು. ಅದನ್ನು ಇಡೀ ಚಿತ್ರತಂಡ ನೋಡಿದ ಮೇಲೆ ಇದರಲ್ಲಿ ಮತ್ತೊಂದು ಸೀಕ್ವೆಲ್ ಮಾಡುವ ಅಂಶಗಳಿತ್ತು. ಇದಾದ ಬಳಿಕ ಶಂಕರ್ ಅವರು ಕಥೆಯಲ್ಲಿ ಬದಲಾವಣೆ ಮಾಡಿಕೊಂಡು, 2ನೇ ಭಾಗದಲ್ಲಿ ಮೂರನೇ ಭಾಗವನ್ನು ಸೇರಿಸಿ, ಶೂಟ್ ಮಾಡಿದರು. ಮೊದಲಿಗೆ “ಇಂಡಿಯನ್-2” ಸಿನಿಮಾದ ಕಥೆ ಸರಿಯಾದ ರೀತಿಯಲ್ಲಿ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಲು ಆಗುತ್ತಿರಲ್ಲಿಲ್ಲ. ಸಿನಿಮಾದ ದೃಶ್ಯ ಕ್ಲೈಮ್ಯಾಕ್ಸ್ ಗೆ ಹೊಂದಿಕೆಯಾಗುತ್ತಿರಲಿಲ್ಲ. 2ನೇ ಭಾಗದ ಕ್ಲೈಮ್ಯಾಕ್ಸ್ ಮೂರನೇ ಭಾಗದ ಕಥೆಯ ಆರಂಭಕ್ಕೆ ಕಾರಣವಾಗುತ್ತದೆ. ಈಗಾಗಲೇ 2ನೇ ಭಾಗ ಮುಕ್ತಾಯ ಕಂಡಿದ್ದು, ಮೂರನೇ ಭಾಗದ ಚಿತ್ರೀಕರಣ ಶೇ.75 ರಷ್ಟು ಮುಗಿದಿದೆ. ʼಇಂಡಿಯನ್ -2, & 3 ಒಂದು ವರ್ಷದ ಅಂತರದಲ್ಲಿ ತೆರೆಗೆ ಬರಲಿದೆ ಎಂದು ವರದಿ ತಿಳಿಸಿದೆ.
ʼಇಂಡಿಯನ್-2ʼ ಸಿನಿಮಾದಲ್ಲಿ ಕಮಲ್ ಹಾಸನ್ ,ಕಾಜಲ್ ಅಗರ್ವಾಲ್ , ರಾಕುಲ್ ಪ್ರೀತ್ ಸಿಂಗ್ ಹಾಗೂ ಮುಂತಾದ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮುಂಇನ ವರ್ಷದ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.