Advertisement

Kamal Haasan: ಎರಡು ಭಾಗಗಳಲ್ಲಿ ʼಇಂಡಿಯನ್‌ -2ʼ: ಮುಂದಿನ ವರ್ಷವೇ ಪಾರ್ಟ್‌ -3 ರಿಲೀಸ್?

10:52 AM Nov 04, 2023 | Team Udayavani |

ಚೆನ್ನೈ: ಕಮಲ್‌ ಹಾಸನ್‌ – ಶಂಕರ್‌ ಅವರ ʼಇಂಡಿಯನ್ -‌ʼ ಇಂಟ್ರೋ ರಿಲೀಸ್‌ ಆಗಿದ್ದು, ಸಖತ್‌ ಸದ್ದು ಮಾಡುತ್ತಿದೆ.

Advertisement

ರಜಿನಿಕಾಂತ್, ಮೋಹನ್ ಲಾಲ್, ಎಸ್ ಎಸ್ ರಾಜಮೌಳಿ, ಕಿಚ್ಚ ಸುದೀಪ್, ಮತ್ತು ಆಮಿರ್‌ ಖಾನ್ ಅವರು ʼಇಂಡಿಯನ್‌ -2ʼ ಇಂಟ್ರೋ ರಿಲೀಸ್‌ ಮಾಡಿದ್ದಾರೆ. ʼಹೆಲೋ ಇಂಡಿಯಾ,ಇಂಡಿಯನ್‌ ಇಸ್‌ ಬ್ಯಾಕ್‌ʼ ಎಂದು ಹೇಳುವ ಕಮಲ್‌ ಹಾಸನ್‌ ಓಲ್ಡ್‌ ಮ್ಯಾನ್‌ ಅವತಾರ ಪ್ರೇಕ್ಷಕರ ಮನಗೆದ್ದಿದೆ.  ಸಿನಿಮಾದ ಬಗ್ಗೆ ಹೈಪ್‌ ಮತ್ತಷ್ಟು ಹೆಚ್ಚಾಗಿದ್ದು, ಭಾರತೀಯ ಸಿನಿರಂಗದಲ್ಲಿ ʼಇಂಡಿಯನ್‌ -2ʼ ಕೂಡ ಹೊಸ ದಾಖಲೆ ಬರೆಯುತ್ತದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಶಂಕರ್‌ ಅವರ ʼಇಂಡಿಯನ್‌ -2ʼ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. 2ನೇ ಭಾಗದ ಕಥೆಯಲ್ಲಿನ ಕೆಲ ಅಂಶಗಳು 3ನೇ ಭಾಗದ ಚಿತ್ರೀಕರಣವನ್ನು ಏಕಕಾಲದಲ್ಲಿ ಮಾಡುವಂತೆ ಮಾಡಿದೆ ಎಂದು ಚಿತ್ರತಂಡದ ಆಪ್ತ ಮೂಲವೊಂದು ಹೇಳಿರುವುದಾಗಿ “ಪಿಂಕ್‌ ವಿಲ್ಲಾ” ವರದಿ ಮಾಡಿತ್ತು.

ಶಂಕರ್‌ ಅವರ ಬಳಿ 6 ಗಂಟೆಗಳ “ಇಂಡಿಯನ್-2”‌ ತುಣುಕುಗಳಿತ್ತು. ಅದನ್ನು ಇಡೀ ಚಿತ್ರತಂಡ ನೋಡಿದ ಮೇಲೆ ಇದರಲ್ಲಿ ಮತ್ತೊಂದು ಸೀಕ್ವೆಲ್‌ ಮಾಡುವ ಅಂಶಗಳಿತ್ತು. ಇದಾದ ಬಳಿಕ ಶಂಕರ್‌ ಅವರು ಕಥೆಯಲ್ಲಿ ಬದಲಾವಣೆ ಮಾಡಿಕೊಂಡು, 2ನೇ ಭಾಗದಲ್ಲಿ ಮೂರನೇ ಭಾಗವನ್ನು ಸೇರಿಸಿ, ಶೂಟ್‌ ಮಾಡಿದರು ಎಂದು ವರದಿ ಆಗಿತ್ತು.

ಇದನ್ನೂ ಓದಿ: Team India; ವಿಶ್ವಕಪ್ ನಿಂದಲೇ ಹೊರಬಿದ್ದ ಹಾರ್ದಿಕ್ ಪಾಂಡ್ಯ; ಬದಲಿಯಾಗಿ ಕನ್ನಡಿಗನ ಆಯ್ಕೆ

Advertisement

ಮಾಹಿತಿಗಳ ಪ್ರಕಾರ ಚಿತ್ರದ ರನ್‌ಟೈಮ್ ಐದೂವರೆ ಗಂಟೆ ದಾಟಿದ ಕಾರಣ ʼಇಂಡಿಯನ್ 2ʼ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾದ ಮೊದಲ ಭಾಗ 2024 ರ ಏ.12 ರಂದು ರಿಲೀಸ್‌ ಆಗಲಿದೆ. ಮೂರನೇ ಭಾಗ 2024 ರ ದೀಪಾವಳಿಗೆ ರಿಲೀಸ್‌ ಆಗಲಿದೆ ಎನ್ನಲಾಗಿದೆ. ಆದರೆ ಈ ಕುರಿತು ಚಿತ್ರತಂಡ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಲೈಕಾ ಪ್ರೊಡಕ್ಷನ್‌ ನಿರ್ಮಾಣದ ʼಇಂಡಿಯನ್‌ -2ʼ ಸಿನಿಮಾದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ನೆಡುಮುಡಿ ವೇಣು, ವಿವೇಕ್, ಮನೋಬಾಲಾ, ಗುರು ಸೋಮಸುಂದರಂ, ಬಾಬಿ ಸಿಂಹ ಮುಂತಾವರು ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next