ಬೆಂಗಳೂರು: ಪ್ರತಿಷ್ಠಿತ ಕಲ್ಯಾಣ್ ಜುವೆಲ್ಲರ್ ಮಾರತ್‌ಹಳ್ಳಿಯಲ್ಲಿ ಆರಂಭಿಸಿರುವ ಐದನೇ ಮಳಿಗೆಯನ್ನು ನಟ ಶಿವರಾಜ್‌ಕುಮಾರ್, ತೆಲುಗು ನಟ ನಾಗಾರ್ಜುನ ಅವರು ಉದ್ಘಾಟಿಸಿದರು.
ಭಾರಿ ಸಂಖ್ಯೆಯಲ್ಲಿದ್ದ ಜನಸ್ತೋಮದ ನಡುವೆ ಮಳಿಗೆ ಉದ್ಘಾಟಿಸಿದ ನಟರು ಬಳಿಕ ಮಳಿಗೆಯಲ್ಲಿನ ಚಿನ್ನಾಭರಣಗಳ ಸಂಗ್ರಹವನ್ನು ವೀಕ್ಷಿಸಿದರು. ಕಂಪೆನಿಯ ಅಧ್ಯಕ್ಷರೂ ಆದ ಆಡಳಿತ ನಿರ್ದೇಶಕ ಟಿ.ಎಸ್.ಕಲ್ಯಾಣ್‌ರಾಮ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣ್‌ರಾಮ್ ಉಪಸ್ಥಿತರಿದ್ದರು.
ಕಲ್ಯಾಣ್ ಜುವೆಲ್ಲರ್ ಉದ್ಘಾಟನಾ ಉಡುಗೊರೆಗಳನ್ನು ನೀಡುತ್ತಿದೆ. ಗ್ರಾಹಕರು 25000 ರೂ. ಮೌಲ್ಯದ ಹರಳುಗಳ ಆಭರಣ ಖರೀದಿಸಿದರೆ ಉಚಿತವಾಗಿ ಒಂದು ಗ್ರಾಂ ಚಿನ್ನ ಪಡೆಯಬಹುದು. ಹಾಗೆಯೇ 25000 ರೂ. ಮೌಲ್ಯದ ಕತ್ತರಿಸದ ವಜ್ರ, ಪೋಲ್ಕಿ ಆಭರಣ ಖರೀದಿಗೆ ಉಚಿತವಾಗಿ 2 ಚಿನ್ನದ ನಾಣ್ಯ ಸಿಗಲಿದೆ. ಹಳೆಯ ಚಿನ್ನ ವಿನಿಮಯಕ್ಕೆ ಶೇ.100ರಷ್ಟು ಮೌಲ್ಯ ಸಿಗಲಿದ್ದು, ಷರತ್ತುಗಳು ಅನ್ವಯವಾಗಲಿವೆ.
ಮದುವೆ, ಮುಹೂರ್ತ ಸಮಾರಂಭ, ವಧುವಿಗೆಂದೇ ಕಲ್ಯಾಣ್ ಜುವೆಲ್ಲರ್ನಲ್ಲಿ ವಿಶೇಷ ವಿನ್ಯಾಸದ ಆಭರಣಗಳ ಸಂಗ್ರಹವಿದೆ. ತೇಜಸ್ವಿ- ಪೊಲ್ಕಿ ಜುವೆಲ್ಲರಿ, ಮುದ್ರಾ- ಅಪೂರ್ವ ವಿನ್ಯಾಸದ ಕರಕುಶಲ ಆಭರಣಗಳು, ನಿಮ್ಹಾ- ದೇಗುಲ ಆಭರಣ, ಗ್ಲೋ- ವಜ್ರಾಭರಣ, ಜಿಯಾ- ಏಕ ರತ್ನಾಭರಣ ಹೋಲುವ ವಜ್ರಾಭರಣ, ಅನೋಖೀ- ಕತ್ತರಿಸದ ವಜ್ರ, ಅಪೂರ್ವ- ವಿಶೇಷ ಸಮಾರಂಭಗಳಿಗೆಂದೇ ರೂಪಿಸಿದ ವಜ್ರಾಭರಣ, ಅಂತರ- ವಿವಾಹ ಸಂದರ್ಭಕ್ಕೆ ಪೂರಕ ವಜ್ರಾಭರಣ, ಹೆರಾ- ನಿತ್ಯ ಧರಿಸಬಹುದಾದ ವಜ್ರ ಹಾಗೂ ರಂಗ್- ಅಮೂಲ್ಯ ಹರಳುಗಳ ಆಭರಣಗಳ ದೊಡ್ಡ ಸಂಗ್ರಹವಿದೆ. ಪ್ರ
ಚಲಿತ ಟ್ರೆಂಡ್ ಹಾಗೂ ಪಾರಂಪರಿಕ ವಿನ್ಯಾಸದ ಒಂದು ಲಕ್ಷಕ್ಕೂ ಅಧಿಕ ಆಭರಣ ಸಂಗ್ರಹವಿದ್ದು, ಬಹು ಆಯ್ಕೆ ಅವಕಾಶವಿದೆ. ನಗರದಲ್ಲಿ 2010ರಲ್ಲಿ ಮೊಟ್ಟ ಮೊದಲ ಮಳಿಗೆ ಆರಂಭಿಸಿದ ಕಲ್ಯಾಣ್ ಜುವೆಲ್ಲರ್ ಇದೀಗ ಐದನೇ ಮಳಿಗೆ ತೆರೆದಿದೆ. ರಾಜ್ಯದಲ್ಲಿ 14 ಮಳಿಗೆ ಹೊಂದಿರುವ ಕಲ್ಯಾಣ್ ಜುವೆಲ್ಲರ್ ಜಗತ್ತಿನಾದ್ಯಂತ 130 ಮಳಿಗೆ ಹೊಂದಿದೆ.