Advertisement
ಉಡುಪಿ: ನಗರದಿಂದ ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಕಡಿಯಾಳಿ- ಪರ್ಕಳದ ವರೆಗಿನ ರಾ.ಹೆ. ಕಳೆದೆರಡು ವರ್ಷದಿಂದ ಕತ್ತಲೆಯಲ್ಲಿ ಮುಳುಗಿದ್ದು, ರಾತ್ರಿ ವೇಳೆ ಈ ಮಾರ್ಗ ದಲ್ಲಿ ಓಡಾಡುವವರ ಸುರಕ್ಷತೆಗೆ ಅಭದ್ರತೆ ಕಾಡುತ್ತಿದೆ.
Related Articles
ಎನ್‌ಎಚ್ ಅಧಿಕಾರಿಗಳು ಕಾಮಗಾರಿ ಪೂರ್ಣಗೊಂಡ ಮಾರ್ಗದಲ್ಲಿ ಹೊಸ ಬೀದಿ ದೀಪಗಳನ್ನು ಅಳವಡಿಸುವುದಾಗಿ ಹಾಗೂ ಅದರ ಸಂಪೂರ್ಣ ನಿರ್ವ ಹಣೆಯ ವೆಚ್ಚವನ್ನು ನಗರಸಭೆ ಭರಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿಗಳ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಮೌಖೀಕವಾಗಿ ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಪತ್ರ ವ್ಯವ ಹಾರ ಗಳ ನಡೆದಿಲ್ಲ.
Advertisement
ಪ್ರಸ್ತುತ ಕಲ್ಸಂಕದಿಂದ ಕಡಿಯಾಳಿ ದೇವಸ್ಥಾನದ ವರೆಗೆ ಬೀದಿ ದೀಪಗಳು ಕಾರ್ಯಾ ಚರಿಸುತ್ತಿದೆ. ಇದರ ನಿರ್ವಹಣೆಯನ್ನು ಗುತ್ತಿಗೆದಾರರೊಬ್ಬರಿಗೆ ನೀಡಲಾಗಿದೆ.
ಮೊಬೈಲ್ ಬೆಳಕಿನಲ್ಲೇ ತೆರಳಬೇಕಾದ ಪರಿಸ್ಥಿತಿರಾತ್ರಿ ವೇಳೆ ಬಸ್ ಇಲ್ಲದ ಹಿನ್ನೆಲೆಯಲ್ಲಿ ಮಣಿಪಾಲದ ಟೈಗರ್ ಸರ್ಕಲ್‌ನಿಂದ ಈಶ್ವರ ನಗರದ ವರೆಗೆ ನಡೆದುಕೊಂಡು ಹೋಗಬೇಕಾಗಿದೆ. ಮಣಿಪಾಲದ ಎಂಐಟಿವರೆಗೆ ಅಂಗಡಿಗಳಿಂದ ಹೊರ ಸೂಸುವ ಬೆಳಕಿನ ಸಹಾಯದಿಂದ ಯಾವುದೇ ಭಯವಿಲ್ಲದೆ ಹೋಗ ಬಹುದು. ಅನಂತರ ಹಾದಿಯನ್ನು ಮೊಬೈಲ್ ಬೆಳಕಿನಿಂದಲೇ ಕ್ರಮಿಸಬೇಕಾದ ಪರಿಸ್ಥಿತಿ. ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿ ದೀಪಗಳನ್ನು ಅಳವಡಿಸಿದರೆ ಉತ್ತಮ.
– ಶಶಾಂತ್ ಭಟ್, ಸ್ಥಳೀಯರು ಬೀದಿ ದೀಪಗಳನ್ನು ಅಳವಡಿಸಲು ಕ್ರಮ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೀದಿ ದೀಪಗಳನ್ನು ಅಳವಡಿಸಿಕೊಡುವುದಾಗಿ ಮೌಖೀಕವಾಗಿ ಹೇಳಿದ್ದು, ದೀಪಗಳ ನಿರ್ವಹಣೆಯನ್ನು ನಗರಸಭೆಯಿಂದ ಮಾಡುವ ಕುರಿತು ಪತ್ರವನ್ನು ಕೇಳಿದ್ದಾರೆ. ಶೀಘ್ರದಲ್ಲಿ ಈ ಮಾರ್ಗದಲ್ಲಿ ದೀಪಗಳನ್ನು ಅಳವಡಿಸುವತ್ತ ಗಮನ ಹರಿಸಲಾಗುತ್ತದೆ.
-ಸುಮಿತ್ರಾ ಆರ್. ನಾಯಕ್ ಅಧ್ಯಕ್ಷೆ, ನಗರಸಭೆ ಉಡುಪಿ