Advertisement

ಕಲ್ಲೂರು ಪುರಾತನ ಕಲ್ಯಾಣಿಗೆ ಬಂತು ಜೀವಕಳೆ

03:05 PM Apr 23, 2022 | Team Udayavani |

ಯಲಬುರ್ಗಾ: ಕಲ್ಯಾಣಿಗಳು ಜೀವಜಲದ ಮೂಲ ಸೆಲೆಗಳು ಎಂಬುದನ್ನು ಮನಗಂಡಿದ್ದ ಪೂರ್ವಿಕರು ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಅಂಥ ಜೀವ ಸೆಲೆಗಳನ್ನು ಉಳಿಸಿ ಅಭಿವೃದ್ಧಿಗೊಳಿಸುವಲ್ಲಿ ತಾಪಂ, ಗ್ರಾಪಂ ಮುಂದಾಗಿದ್ದು ತಾಲೂಕಿನ ಐತಿಹಾಸಿಕ ಕಲ್ಲೂರು ಗ್ರಾಮದ ಕಲ್ಯಾಣಿ ಮಾದರಿಯಾಗಿ ನಿರ್ಮಾಣಗೊಂಡಿದೆ. ಹಲವು ವರ್ಷಗಳಿಂದ ಪಾಳುಬಿದ್ದು, ಸಾಕಷ್ಟು ಹೂಳು ತುಂಬಿದ್ದ ಪುರಾತನ ಕಲ್ಯಾಣಿಯನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಗೊಳಿಸಿ ಹೈಟೆಕ್‌ ಸ್ಪರ್ಶ ನೀಡಿದ್ದು ಎಲ್ಲರ ಗಮನ ಸೆಳೆಯಿತು.

Advertisement

ಐತಿಹಾಸಿಕ ಕಲ್ಯಾಣಿ: ತಾಲೂಕಿನ ಕಲ್ಲೂರು ಗ್ರಾಮದ ಐತಿಹಾಸಿಕ ಕಲ್ಲಿನಾಥೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಸರಕಾರಿ ಪ್ರೌಢಶಾಲೆ ಆವರಣದಲ್ಲಿರುವ ರಾಜಮಹರಾಜರ ಕಾಲದ ಕಲ್ಯಾಣಿಗೆ ಸೂಕ್ತ ರಕ್ಷಣೆ ಇಲ್ಲದೇ ನಿರ್ಲಕ್ಷéಕ್ಕೆ ಒಳಗಾಗಿತ್ತು. ಕಸ ಕಡ್ಡಿಯಿಂದ ತುಂಬಿಕೊಂಡು ನೇಪಥ್ಯಕ್ಕೆ ಸರಿದಿತ್ತು.

ನರೇಗಾ ಯೋಜನೆಯಡಿ ಅಭಿವೃದ್ಧಿ: ಕಲ್ಯಾಣಿ ಸಂರಕ್ಷಣೆ ಹಾಗೂ ಅಭಿವೃದ್ಧಿಪಡಿಸುವ ಪಣ ತೊಟ್ಟಿದ್ದ ಗ್ರಾಪಂ 2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕ್ರಿಯಾಯೋಜನೆ ಮಾಡಿ ಅನುಷ್ಠಾನಗೊಳಿಸಿ, ಅಂದಾಜು 8 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ಆಕರ್ಷಿಣೀಯವಾಗಿ ಮಾಡಲಾಗಿದೆ. 728 ಮಾನವ ದಿನಗಳನ್ನು ಸೃಜಿಸಿ, ಅಕುಶಲ ಕಾರ್ಮಿಕರಿಗೆ 2.10 ಲಕ್ಷ ರೂ. ಕೂಲಿ ಮೊತ್ತ ಪಾವತಿಸಲಾಗಿದೆ. ನೂರಾರು ಜನರಿಗೆ ಕೆಲಸ ಕೊಡುವುದರ ಜೊತೆಗೆ ಕಲ್ಯಾಣಿಗೆ ಮರುಜೀವ ಸಿಕ್ಕಿದೆ. ಸುತ್ತಲೂ ತಂತಿಬೇಲಿ ಅಳವಡಿಸಿ, ಸಸಿಗಳನ್ನು ನೆಡಲಾಗಿದೆ. ಬಣ್ಣದಿಂದ ಕಂಗೊಳಿಸುತ್ತಿದ್ದು ಪ್ರೇಕ್ಷಣೀಯ ಸ್ಥಳವಾಗಿದೆ.

ಸಾಮಾನ್ಯವಾಗಿ ದೇವಾಲಯಗಳ ಪ್ರಾಂಗಣದಲ್ಲಿ ನೀರಿನ ಕೊಳಾಯಿಗಳಿರುವುದನ್ನು ಕಾಣಬಹುದು. ಇವುಗಳನ್ನೆ ಕಲ್ಯಾಣಿ ಎಂದು ಕರೆಯಲಾಗುತ್ತದೆ. ಪುರಾತನ ಕಾಲದಿಂದಲೂ ದೇವಾಲಯಗಳಿಗೂ ಕಲ್ಯಾಣಿಗಳಿಗೂ ನಂಟು ಇದ್ದೇ ಇದೆ. ಹಿಂದೆ ಕಲ್ಯಾಣಿಗಳಲ್ಲಿದ್ದ ನೀರಿನಿಂದಲೆ ದೇವಾಲಯದ ವಿಗ್ರಹಗಳ ಅಭಿಷೇಕ, ಸ್ವತ್ಛತಾ ಕಾರ್ಯಾದಿಗಳು ನಡೆಯುತ್ತಿದ್ದವು. ಈಗಲೂಸಹ ಸಾಕಷ್ಟು ದೇವಾಲಯಗಳಲ್ಲಿ ಇದು ಇನ್ನೂ ಚಾಲ್ತಿಯಲ್ಲಿದೆ. ದೇವಾಲಯ ಸಂಕೀರ್ಣಗಳ ಅವಿಭಾಜ್ಯ ಅಂಗಗಳಾಗಿವೆ. ಪುರಾತನ ಕಲ್ಯಾಣಿ ಕಾರ್ಯಗಳ ಅಭಿವೃದ್ಧಿಗೆ ಮುಂದಾದ ಗ್ರಾಪಂ ಕಾರ್ಯ ಶ್ಲಾಘನೀಯ. –ಬಸವಲಿಂಗೇಶ್ವರ ಸ್ವಾಮೀಜಿ,ಶ್ರೀಧರ ಮುರಡಿ ಹಿರೇಮಠ ಯಲಬುರ್ಗಾ

ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಅಪಯಕಾರಿ ಸ್ಥಿತಿಯಲ್ಲಿದ್ದ ಕಲ್ಯಾಣಿಯಿಂದ ಶಾಲಾ ಮಕ್ಕಳಿಗೆ ತೊಂದರೆ ಆಗುವುದನ್ನು ಮನಗಂಡು ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಂಡು ಕಲ್ಯಾಣಿಯನ್ನು ಅಭಿವೃದ್ಧಿಪಡಿಸಿ. ಅದು ಈಗ ಪ್ರೇಕ್ಷಣೀಯ ಸ್ಥಳವಾಗಿದೆ. ಕಲ್ಲೂರು ಗ್ರಾಪಂ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಸದಾ ಮುಂದಿದೆ. ಶೀಘ್ರದಲ್ಲಿ ತಾಲೂಕಿನ ಎಲ್ಲ ಬಾವಿಗಳನ್ನು, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.  ಎಚ್‌.ಮಹೇಶ, ತಾಪಂ ಇಒ ಯಲಬುರ್ಗಾ

Advertisement

ಹಲವಾರು ವರ್ಷಗಳಿಂದ ಹಾಳಾಗಿದ್ದ ಕಲ್ಯಾಣಿಯನ್ನು ಅಧಿಕಾರಿಗಳು ಗ್ರಾಮಸ್ಥರ ಮನವಿ ಆಲಿಸಿ, ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದ್ದು ಸಂತಸ ತಂದಿದೆ. ಪುರಾತನ ಕಲ್ಯಾಣಿಯನ್ನು ಸುತ್ತಮುತ್ತಲಿನ ಗ್ರಾಮಗಳ ಜನರು ಬಂದು ನೋಡುವಂತಾಗಿದೆ. ಪ್ರತಿ ವರ್ಷ ನಡೆಯುವ ಜಾತ್ರೆಗೆ ಸಾವಿರಾರು ಭಕ್ತರು ಬರುತ್ತಾರೆ, ಇದರಲ್ಲಿ ಸಂಗ್ರಹಗೊಂಡ ನೀರನ್ನು ತೆಗೆದುಕೊಂಡು ಹೋಗುತ್ತಾರೆ. –ಕಲ್ಲಯ್ಯ, ಸುರೇಶ, ನಾಗಯ್ಯ ಗ್ರಾಪಂ ಸದಸ್ಯರು, ಕಲ್ಲೂರ

-ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next