ಕಲಿ ಕುಡುಕರು- ಹೀಗೊಂದು ಸಿನಿಮಾ ಸದ್ದಿಲ್ಲದೇ ತಯಾರಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಎ.ಎಂ ಕ್ರಿಯೇಷನ್ ಬ್ಯಾನರ್ ಅಡಿ ಮಹೇಶ್ ಎನ್ ನಿರ್ಮಾಣ ಮಾಡಿ ಕರಣ್ ಸವ್ಯಸಾಚಿ ಆಕ್ಷನ್ ಕಟ್ ಹೇಳಿದ್ದಾರೆ.
ಒಬ್ಬ ಆಟೋ ಡ್ರೈವರ್, ಇನ್ನೊಬ್ಬ ಉಂಡಾಡಿ ಗುಂಡ, ಮತ್ತೂಬ್ಬ ರಿಯಲ್ ಎಸ್ಟೇಟ್ ಬ್ರೋಕರ್..ಇದರ ಜೊತೆಗೆ ಇನ್ನೊಬ್ಬ ಅನಾಥ ನಿರುದ್ಯೋಗಿ ಹೀಗೆ ನಾಲ್ಕು ನಾಯಕರು ಮತ್ತು ಮತ್ತೂಬ್ಬನ ಸುತ್ತ ಸಾಗುವ ಕಥೆ ಚಿತ್ರ ಒಳಗೊಂಡಿದೆ. ತಮ್ಮ ಕುಟುಂಬದಲ್ಲಿ ಆಗುವ ಅನಾಹುತಗಳಿಗೆ ಒಳಗಾಗಿ ಕುಡಿತಕ್ಕೆ ದಾಸರಾಗುತ್ತಾರೆ. ಕುಡಿತವೇ ಇವರ ಜೀವನಾಗುವಷ್ಟರ ಮಟ್ಟಿಗೆ ಚಟವಾಗಿಸಿಕೊಂಡವರು.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ಮಹೇಶ್ ಎನ್, “ನಾಲ್ಕು ಜನರ ಪಾತ್ರದ ಸುತ್ತ, ಸಾಗಲಿದೆ, ರಿಯಾಲಿಟಿ ಶೋ ಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಚಿತ್ರದ ಮೂಲಕ ಕುಡಿಯುವುದರಿಂದ ಏನೆಲ್ಲಾ ಆಗಲಿದೆ ಎನ್ನುವುದನ್ನು ತೋರಿಸಿದ್ದೇವೆ. ಬೆಂಗಳೂರು ಸುತ್ತ ಮುತ್ತ ಮುತ್ತ ಚಿತ್ರೀಕರಣ ಮಾಡಲಾಗಿದ್ದು ಈ ತಿಂಗಳ ಅಂತ್ಯದಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ’ ಎಂದರು.
ನಾಗೇಂದ್ರ ಅರಸ್ ಮಾತನಾಡಿ, “ಟೈಟಲ್ ಮಜವಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ. ಹೊಸ ತಂಡಕ್ಕೆ ಸಹಕಾರ ಯಾವತ್ತೂ ಸಹಕಾರ ಇದ್ದೇ ಇರುತ್ತೆ. ಉತ್ಸಾಹಿ ತಂಡ ಹುರುಪಿನಿಂದ ಕೆಲಸ ಮಾಡಿದ್ದೇನೆ. ಹೊಸ ತಂಡ ಭಯ ಪಡುವರು. ತಂಡಕ್ಕೆ ಸಹಕಾರ ನೀಡಿದ್ದೇನೆ’ ಎಂದರು
ಸೋನು ಗೌಡ, ರಿತ್ಯಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಿರಿಯ ಕಲಾವಿದೆ ಮಂಜುಳಾ ರೆಡ್ಡಿ , ಬಡ್ಡಿ ಬಂಗಾರಮ್ಮ ಪಾತ್ರ, ಮನೆ ಮನೆಯ ಪಾತ್ರ ಎಂದರೆ ಲೋಹಿತ್, ರವೀಶ್, ಮುರುಳಿ ಕೂಡಾ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು
ತಾರಾಗಣದಲ್ಲಿ ಮಹೇಶ್ ಎನ್. ಅಶೋಕ್, ರವೀಶ್, ಶರತ್, ಕೆ.ಜಿ ಲೋಹಿತ್, ರಿತ್ಯಾ, ಸೋನು ದೀಪು, ಶೃತಿ, ಅರ್ಚನಾ, ನಾಗೇಂದ್ರ ಅರಸ್, ಮಾನ್ ಮೋಹನ್ ಮಂಜುಳಾ ರೆಡ್ಡಿ ಮುರುಳಿ ಮತ್ತಿತರರು ಚಿತ್ರದಲ್ಲಿದ್ದಾರೆ.