Advertisement
ಮಹದಾಯಿಯನ್ನು ಮಲಪ್ರಭಾ ನದಿಗೆ ಜೋಡಿಸಿ ಹು-ಧಾ ಮಹಾನಗರ ಸೇರಿದಂತೆ 4 ಜಿಲ್ಲೆಗಳ 9 ತಾಲೂಕು, 13 ಪಟ್ಟಣಗಳಿಗೆ ಕುಡಿಯುವ ನೀರು, ನೀರಾವರಿ ಸೌಲಭ್ಯಕ್ಕೆ ಚಿಂತನೆ ಇತ್ತು. ಗೋವಾದ ಹಠಮಾರಿತನದಿಂದಾಗಿ ಇಂದಿಗೂ ಹನಿ ನೀರು ಪಡೆಯಲು ಸಾಧ್ಯವಾಗಿಲ್ಲ. ಮಹದಾಯಿ ನ್ಯಾಯಾಧಿ ಕರಣದ ತೀರ್ಪು, ಕೇಂದ್ರ ಸರ್ಕಾರದಿಂದ ಅಧಿಸೂಚನೆ ನಂತರದಲ್ಲೂ ಗೋವಾದ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕಳಸಾ ನಾಲಾದಿಂದ ಕಾಲುವೆ ಮೂಲಕ ನೀರು ಬರುವ ಬದಲು ಏತನೀರಾವರಿ ಮೂಲಕ ತರಲು ಮುಂದಾಗಿದೆ.
ಸದ್ಯಕ್ಕೆ ಕಳಸಾದಿಂದ ಮಾತ್ರ ಏತ ನೀರಾವರಿ ಯೋಜನೆ ಮೂಲಕ ನೀರು ಪಡೆಯುವ ಯೋಜನೆ ಇದೆ. ಬಂಡೂರಿ ನಾಲಾ ಕುರಿತಾಗಿ ಯಾವುದೇ ಕಾಮಗಾರಿ ಕೈಗೊಳ್ಳು ತ್ತಿಲ್ಲ. ಡಿಸೆಂಬರ್ ಇಲ್ಲವೇ ಜನವರಿ ಯಲ್ಲಿ ಇದಕ್ಕೆ ಚಾಲನೆ ದೊರೆಯ ಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ನೀರು ಪಡೆಯುವ ದೃಷ್ಟಿಯಿಂದ ದುರ್ಗಮ ಸ್ಥಿತಿಯಲ್ಲಿರುವ ಬಂಡೂರಿ ನಾಲಾ ದಿಂದ ನೀರು ಪಡೆಯುವ ಯೋಜನೆ ಎರಡನೇ ಹಂತದಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ. ಆದರೆ, ಕಳಸಾ ಕ್ಕಿಂತ ಬಂಡೂರಿಯಿಂದಲೇ ಹೆಚ್ಚಿನ ಪ್ರಮಾಣದ ನೀರು ಲಭ್ಯವಾಗಲಿದೆ. -ಅಮರೇಗೌಡ ಗೋನವಾರ