Advertisement
ಕಾಳಗಿ ತಾಲೂಕು ಸಂರ್ವಾಂಗೀಣ ಪಕ್ಷಾತೀತ ಹೋರಾಟ ಸಮಿತಿ ಬುಧವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಾಳಗಿ-ಗುಂಡಗುರ್ತಿ-ಕೋಡ್ಲಿ ಹೋಬಳಿ ಸೇರಿಸಿ ನೂತನ ತಾಲೂಕು ರಚಿಸಿದ್ದನ್ನು ಸ್ವಾಗತಿಸುತ್ತೇವೆ. ಆದರೆ ಈ ಭಾಗದ ಜನರು ಸೇಡಂ ಉಪವಿಭಾಗಕ್ಕೆ ಸೇರಿಸಿದ್ದಕ್ಕೆ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಈ ಎಲ್ಲ ಗ್ರಾಮಗಳು ಕಲಬುರಗಿ ಜಿಲ್ಲೆಗೆ ಕೇವಲ 10 ಕಿ.ಮೀ ಅಂತರದಲ್ಲಿವೆ. ಜನರ ಹಿತದೃಷ್ಟಿಯಿಂದ ಕಲಬುರಗಿ ಉಪವಿಭಾಗಕ್ಕೆ ಸೇರಿಸಿದರೆ ಅನುಕೂಲವಾಗುತ್ತದೆ ಎಂದು ಅಗ್ರಹಿಸಿದರು.
ಕಲಬುರಗಿ ಉಪವಿಭಾಗಕ್ಕೆ ಸೇರಿಸಬೇಕು. ಶೀಘ್ರವೇ ಕಿರಿಯ ನ್ಯಾಯಲಯ ಪ್ರಾರಂಭಿಸಬೇಕು ಎಂದರು. ಈ ಮೇಲಿನ ಎಲ್ಲ ವಿಷಯಗಳನ್ನು 23 ಗ್ರಾಪಂಗಳಲ್ಲಿ ಚರ್ಚಿಸಿ ಒಮ್ಮತದಿಂದ ಕಾಳಗಿಯನ್ನು ಕಲಬುರಗಿ ಉಪವಿಭಾಗಕ್ಕೆ ಸೇರಿಸಬೇಕೆಂಬ ನಿರ್ಣಯದ ಮನವಿ ಪತ್ರವನ್ನು ಮುಖ್ಯಮಂತ್ರಿ, ಕಂದಾಯ ಸಚಿವ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಹಾಗೂ ಯಾದಗಿರಿ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ್ದರೂ ಸಕರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಕೊನೆಯದಾಗಿ ತಹಶೀಲ್ದಾರ ಮೂಲಕ ಮನವಿ ಮಾಡಲಾಗುತ್ತಿದೆ. ಇದಕ್ಕೂ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಜನಾಭಿಪ್ರಾಯ ಸಂಗ್ರಹಿಸಿ, ಉಗ್ರಸ್ವರೂಪದ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Related Articles
Advertisement
ಮಾಜಿ ಸಚಿವ ಸುನೀಲ ವಲ್ಯ್ಲಾಪುರೆ, ಜಿಪಂ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ದಶರಥ ನಾಮದಾರ ಮಾತನಾಡಿದರು. ಬಸವರಾಜ ಪಾಟೀಲ ಹೇರೂರ, ಭೀಮಶೆಟ್ಟಿ ಮುರುಡಾ, ಶಿವಶರಣಪ್ಪ ಕಮಲಾಪುರ, ಚಂದ್ರಕಾಂತ ವನಮಾಲಿ, ರಾಮಲಿಂಗರೆಡ್ಡಿ ದೇಶಮುಖ, ರಾಜಕುಮಾರ ರಾಜಾಪುರ, ಬಸವರಾಜ ಶಿವಗೋಳ, ರೇವಣಸಿದ್ದಪ್ಪ ಮಾಸ್ಟರ್, ಮಲ್ಲಿನಾಥ ಕೊಲಕುಂದಿ, ಸಂತೋಷ ಪಾಟೀಲ, ಪ್ರಶಾಂತ ಕದಂ, ಶೇಖರ ಪಾಟೀಲ, ಸಂತೋಷ ಗಡತಿ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಸಲಗೂರ, ರವಿ ಹೊಸಬಾವಿ, ಕಾಶಿನಾಥ ಪಾಟೀಲ, ರಾಮಶೆಟ್ಟಿ ಪಾಟೀಲ, ಸುಧಾಕರ ಪಾಟೀಲ, ಜಗ ದೀಶ ಪಾಟೀಲ, ಮಲ್ಲಿಕಾರ್ಜುನ ಹುಳಗೇರಿ, ಮುಕುಂದ ಕೊಡದೂರ ಹಾಗೂ ಕಾಳಗಿ ತಾಲೂಕಿನ ಸಾವಿರಾರು ಜನರು ಇದ್ದರು.