Advertisement

Kaladgi:ಜೆಸಿಬಿಚಾಲಕನ ನಿರ್ಲಕ್ಷ್ಯ ಕಾಮಗಾರಿ;ಪೈಪ್ ಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರುಪೋಲು

03:55 PM Oct 08, 2024 | Team Udayavani |

ಕಲಾದಗಿ: ವಾರ್ಷಿಕ ರಸ್ತೆ ನಿರ್ವಹಣೆ ದುರಸ್ತಿ ಕಾಮಗಾರಿ ಮಾಡುವ ವೇಳೆ ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ನೀರು ಪೋಲಾಗುವಂತೆ ಮಾಡಿದ್ದಲ್ಲದೆ ಸಮ್ಮಂದಿಸಿದವರಿಗೆ ವಿಷಯ ತಿಳಿಸದೆ ನಿರ್ಲಕ್ಷ್ಯ ವಹಿಸಿದ ಕಾಮಗಾರಿ ಗುತ್ತಿಗೆದಾರ ಹಾಗೂ ರಸ್ತೆ ಬದಿ ಮುಳ್ಳು ಕಂಟಿ ತೆರವು ಮಾಡುತ್ತಿದ್ದ ಜೆಸಿಬಿ ಚಾಲಕನ ವಿರುದ್ದ ಶರದಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisement

ರಸ್ತೆ ದುರಸ್ತಿ ನಿರ್ವಹಣೆ ಕಾಮಗಾರಿಯಲ್ಲಿ ರಸ್ತೆ ಬದಿಯ ಮುಳ್ಳು ಕಂಟಿ ಕಿತ್ತು ವಾಹನ ಸಂಚಾರ ಸವಾರರಿಗೆ ಅನುಕೂಲ ಮಾಡಲು ಲೋಕೋಪಯೋಗಿ ಇಲಾಖೆಯಿಂದ ಪ್ರತೀ ವರ್ಷವೂ ಜಿಲ್ಲಾ ವ್ಯಾಪ್ತಿಯ ಒಳ ರಸ್ತೆಗಳ ನಿರ್ವಹಣೆ ದುರಸ್ತಿ ಕಾರ್ಯ ನಡೆಯುತ್ತದೆ, ಈ ವರ್ಷವೂ ಕಲಾದಗಿ ಉದಗಟ್ಟಿ ರಸ್ತೆ ನಿರ್ವಹಣೆ ಕಾಮಗಾರಿ ಮಾಡುವ ವೇಳೆ ಜೆಸಿಬಿ ಚಾಲಕ ಮಿಡ್ಚಿ ಹಳ್ಳ ಬಳಿ ಬಹುಗ್ರಾಮ ಕುಡಿಯುವ ನೀರಿನ ಪೈಪಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರು ಪೋಲಾಗುವಂತೆ ಮಾಡಿದ್ದಲ್ಲದೆ, ಸಂಬಂಧಿಸಿದ ಇಲಾಖೆಗೆ, ಸ್ಥಳೀಯ ಗ್ರಾಮಸ್ಥರಿಗೂ ತಿಳಸದೆ ಹಾಗೇ ತೆರಳಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದು, ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಶಾರದಾಳ ಗ್ರಾಮಸ್ಥರು ವೀಕ್ಷಣೆ ಮಾಡಿ ನೀರು ಸರಬರಾಜು ವಾಲ್ ತಿರುವಿ ನೀರು ಹರಿಯದಂತೆ ನಿಲ್ಲಿಸಿದ್ದಾರೆ, ನಿರ್ಲಕ್ಷ ತೋರಿದ ಚಾಲಕ ವಿರುದ್ದ ಹಾಗೂ ರಸ್ತೆ ದುರಸ್ತಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ವಿರುದ್ದ ಸೂಕ್ತಕ್ರಮ ಕೈಗೊಳ್ಳಬೇಕು ಜೊತೆಗೆ ಒಡೆದು ಹೋದ ಪೈಪ್ ಲೈನ್ ಜೋಡಣೆ ಮಾಡಿಸಿಕೊಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾರದಾಳ ಗ್ರಾಮದ ಲಕ್ಷ್ಮಣ ಶಿರಬೂರ ಆಗ್ರಹಿಸಿದ್ದಾರೆ.

ಬಹುಗ್ರಾಮ ಕುಡಿಯುವ ನೀರಿನ ಪೈಪಲೈನ್ ಒಡೆದು ಹಾಗೆಯೇ ಹೋಗಿದ್ದು ಸಾಕಷ್ಟು ಪ್ರಮಾಣದ ನೀರು ಪೋಲಾಗಿದೆ, ವಾಲ್ ಬಂದ್ ಮಾಡಿ ನೀರು ಪೊಲಾಗದಂತೆ ಮಾಡಿದ್ದೇವೆ, ಕೂಡಲೇ ಪೈ‌ಪ್ ಲೈನ್ ರಿಪೇರಿ ಮಾಡಿಸಿ ಕೊಡಬೇಕು.
ಲಕ್ಷ್ಮಣ ಶಿರಬೂರ, ಶಾರದಾಳ ಗ್ರಾಮಸ್ಥ

ಪೈಪ್ ಲೈನ್ ಒಡೆದದ್ದು ನಮ್ಮ ಗಮನಕ್ಕೆ ಬಂದಿಲ್ಲ ಹಾಗೇನಾದರೂ ಒಡೆದಿದ್ದರೆ ಯಾರು ಒಡೆದಿದ್ದಾರೆ ಅವರಿಂದಲೇ ಅದನ್ನು ಸರಿಮಾಡಿಕೊಡಲು ಆದೇಶಿಸಲಾಗುವುದು ಒಂದು ವೇಳೆ ಮಾಡದೇ ನಿರ್ಲಕ್ಷ್ಯ ವಹಿಸಿದರೆ ಇಲಾಖೆಯಿಂದ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು.
ಆಕಾಶ್ ವಂದೆ, ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಾಗಲಕೋಟೆ

ಬೇಕಂತಲೇ ಪೈ‌ಪ್ ಲೈನ್ ಒಡೆದಿಲ್ಲ, ಸ್ಥಳಿಯ ವಾಟರ್ ಮ್ಯಾನಗೆ ತಿಳಿಸಲಾಗಿದೆ, ರಸ್ತೆ ಬದಿ ಮುಳ್ಳು ಕಂಟಿ ಕೀಳುವ ವೇಳೆ ಕಂಟಿಯ ಕೆಳ ಭಾಗದಲ್ಲಿದ್ದ ನೀರಿನ ಪೈಲ್ ಲೈನ್ ಒಡೆದಿದೆ, ಒಂದೆರಡು ದಿನದಲ್ಲಿ ಪೈಪಲೈನ್ ರಿಪೇರಿ ಮಾಡಿಸಿ ಕೊಡಲಾಗುವುದು.
ಅರ್ಜುನ್ ಹಿರೇಮಠ, ಗುತ್ತಿಗೆದಾರರ ಪರವಾಗಿ ಕೆಲಸಗಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next