Advertisement

Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್‌ ಕೊಟ್ಟ ಸಮರ್ಥನೆ ಏನು?

09:48 PM Nov 30, 2024 | Team Udayavani |
ರಬಕವಿ-ಬನಹಟ್ಟಿ:ಬಸವಣ್ಣನವರ ಬಗ್ಗೆ ನೀಡಿದ ಹೇಳಿಕೆಗೆ ಬಸವಾದಿ ಶರಣರು ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಟೀಕೆಗಳು ಹೆಚ್ಚುತ್ತಿದ್ದಂತೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್​ ಸ್ಪಷ್ಟನೆ ನೀಡಿದ್ದು, ಬಸವಣ್ಣನವರ ಬಗ್ಗೆ ಇವರಿಗೆ ಏನು ಗೊತ್ತಿದೆ‌. ಬಸವಣ್ಣನವರಿಗೆ ಕೊನೆಗೆ ಏನಾಗಿತ್ತು ಅಂತ ಸತ್ಯ ಏನಿದೆ ಅಂತಾ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಜನರಿಗೆ ಗೊತ್ತಿದೆ. ಏಕೆಂದರೆ ಸಾವಿರಾರು ವರ್ಷದಿಂದ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಮರ್ಥನೆ ನೀಡಿದರು.

ಬನಹಟ್ಟಿಯ ನಿರೀಕ್ಷಣಾ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಸವಣ್ಣನವರ ಶಿವಾನುಭವ ಮಂಟಪದಲ್ಲೇ ದನ ಕಡಿಯುತ್ತಿದ್ದಾರೆ. ಅಖಿಲ ಭಾರತ ವೀರಶೈವ ‌ಮಹಾಸಭಾದ ಈಶ್ವರ ಖಂಡ್ರೆ ಏನು ಮಾಡುತ್ತಿದ್ದಾರೆ. ಎಲ್ಲ ಡೋಂಗಿ ನಾಟಕ ಮಾಡುತ್ತಾ ಬಂದಿದ್ದಾರೆ. ಬಸವಣ್ಣನವರ ಇತಿಹಾಸ ಏನಿದೆ, ಬುದ್ಧಂದು ಏನಾಯಿತು, ಅಂಬೇಡ್ಕರ್​ಗೆ ಎಷ್ಟು ಅಪಮಾನ ಮಾಡಿದರು ಎಂಬ ಚರ್ಚೆ ಇದೆ. ಚರ್ಚೆಗೆ ಬೇಕಾದರೆ ಬಾ ಅಂತ ಹೇಳಿ. ಅದು ಬಿಟ್ಟು ವಾಟ್ಸ್ಯಾಪ್​ನಲ್ಲಿ ಮಂಗನಂತೆ ಮಾತಾಡಿದರೆ ಆಗಲ್ಲ. ಎಲ್ಲರೂ ಅಂಜುವ ಹಾಗೆ ನಾನು ಅಂಜುವ ಮಗನಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

Advertisement

ವೀರಶೈವ ಮಹಾಸಭಾ ಅಂದ್ರೆ “ಬಿಎಸ್‌ವೈ”
ಸದ್ಯ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಈಶ್ವರ ಖಂಡ್ರೆ, ಶಾಮನೂರು, ಯಡಿಯೂರಪ್ಪ ಮನೆ ಮುಂದೆ ಓಡಾಡುವ ಗಿರಾಕಿಗಳೇ ಅಧಿಕ, ಅಖಿಲ ಭಾರತ ವೀರಶೈವ ಮಹಾಸಭಾ ಅಂದ್ರೆ ಬಿಎಸ್‌ವೈ ಅಂತ ಮೂರು ಮಂದಿಯದ್ದೇ ಆಗಿಬಿಟ್ಟಿದೆ. ಬಿ ಅಂದ್ರೆ ಭೀಮಣ್ಣ ಖಂಡ್ರೆ, ಎಸ್‌ ಅಂದ್ರೆ ಶಾಮನೂರು ಶಿವಶಂಕರಪ್ಪ, ವೈ ಅಂದ್ರೆ ಯಡಿಯೂರಪ್ಪ ಆಗಿಬಿಟ್ಟಿದೆ. ಢೋಂಗಿ ನಾಟಕ ಮಾಡುತ್ತ ಕೆಲ ಬೆಂಬಲಿಗರನ್ನಿಟ್ಟುಕೊಂಡು ಮಹಾಸಭೆ ಹಾಳು ಮಾಡಿದ್ದಾರೆ ಎಂದು ಯತ್ನಾಳ್‌ ಟೀಕಿಸಿದರು.

ಅಂಬೇಡ್ಕರ್‌ಗೆ  ಕಾಂಗ್ರೆಸ್‌ನಿಂದ ಅವಮಾನ:  
ಬಸವಣ್ಣನವರ ಕುರಿತು ನೀಡಿದ ಹೇಳಿಕೆಯ ಪ್ರಶ್ನೆಗೆ ಉತ್ತರಿಸುತ್ತ, ಈ ಕುರಿತು ಸಮಗ್ರ ಚರ್ಚೆಯಾಗಬೇಕು, ಮುಚ್ಚಿಟ್ಟ ವಿಷಯದ ಕುರಿತು ಚರ್ಚೆ ನಡೆಯಬೇಕು. ಬಾಬಾ ಸಾಹೇಬ್‌ ಅಂಬೇಡ್ಕರ್ ವಿಷಯ ಕುರಿತು ದೇಶದಲ್ಲಿ ಚರ್ಚೆ ಆಗಿದಿಯೇ. ಅಂಬೇಡ್ಕರ್ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ನೂರು ಅಡಿ ಸ್ಥಳ ನೀಡಲಾರದವರು ನಮಗೆ ಹೇಳುವ ನೈತಿಕೆಯೇ ಇಲ್ಲ. ಅಂದು ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲಿಲ್ಲ. ಮುರಾರ್ಜಿ ದೇಸಾಯಿ ಸರ್ಕಾರ ಅವರಿಗೆ ಭಾರತ ರತ್ನ ನೀಡಿ ಗೌರವಿಸಿತು. ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ತಾವೇ ಭಾರತ ರತ್ನ ಪ್ರಶಸ್ತಿಗಳ ಪಡೆದುಕೊಂಡರು ಎಂದು ಯತ್ನಾಳ್‌ ವ್ಯಂಗ್ಯವಾಡಿದರು.

ಸನಾತನಿಗಳನ್ನು ನಾವು ಓಲೈಸುತ್ತಿಲ್ಲ. ಸನಾತನ ಧರ್ಮ ದೇಶದ ಸಂಸ್ಕೃತಿ. ಸನಾತನ ಬಿಟ್ಟು ನಾವು ಯಾರು ಇಲ್ಲ. ನಮ್ಮ ಭೂಮಿಯಲ್ಲಿಯೇ ಸನಾತನವಿದೆ. ನಾವು ಬಸವಣ್ಣನವರ ಪರವಾಗಿದ್ದೇವೆ. ನಾವು ಬಸವಣ್ಣನವರ ವಿಚಾರಗಳಲ್ಲಿ ಇದ್ದೇವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ಆದರ್ಶ ಪುರುಷ ಎಂದು ಬಸನಗೌಡ ಪಾಟೀಲ ಯತ್ನಾಳ್‌ ತಿಳಿಸಿದರು.

ಇಸ್ಲಾಂನಲ್ಲಿ ಸಹೋದರತೆ ಇಲ್ಲ:
ಇಸ್ಲಾಂನಲ್ಲಿ ಸಹೋದರತೆಯೇ ಇಲ್ಲವೆಂಬುದನ್ನು ಡಾ. ಅಂಬೇಡ್ಕರ್ ಅವರೇ ತಿಳಿಸಿದ್ದಾರೆ. ಸಮೃದ್ಧ ದೇಶಕ್ಕೆ ಕಾಂಗ್ರೆಸ್ಸಿಗರು ಅವಕಾಶ ನೀಡಲಿಲ್ಲವೆಂದು ಯತ್ನಾಳ ಆರೋಪಿಸಿದರು.

Advertisement

ನಮ್ಮಲ್ಲಿ ಬಣವಿಲ್ಲ, ಡಿ.2ರಂದು ವಕ್ಫ್ ಕುರಿತು ವರದಿ ಸಲ್ಲಿಕೆ:
ನಾವು ಯಾವುದೇ ಪಕ್ಷದ ವಿರುದ್ಧ ಹೋರಾಟ ಮಾಡುತ್ತಿಲ್ಲ, ನಮ್ಮದು ವಕ್ಫ್ ವಿರುದ್ಧ ಮಾತ್ರ ಹೋರಾಟ. ಮುಡಾ, ವಾಲ್ಮೀಕಿ ಹಗರಣದಲ್ಲಿಯ ರೂ. 187 ಕೋಟಿ ಮತ್ತು ಎಸ್ ಸಿ, ಎಸ್ ಟಿ  ಹಗರಣದಲ್ಲಿ ರೂ.24 ಸಾವಿರ ಕೋಟಿ ಹಣದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಡಿ.2ರಂದು ನಾನು, ಪ್ರತಾಪ ಸಿಂಹ, ಜಿ.ಎಂ.ಸಿದ್ಧೇಶ್ವರ್‌, ಕುಮಾರ ಬಂಗಾರಪ್ಪನವರು, ಶಾಸಕ ಚಂದ್ರಪ್ಪ ಮತ್ತು ಹರೀಶ ಸೇರಿಕೊಂಡು ದೆಹಲಿಗೆ ತೆರಳಿ ವಕ್ಫ್ ಕುರಿತು ಒಂದು ಮಧ್ಯಂತರ ವರದಿಯ ನೀಡುತ್ತಿದ್ದೇವೆ.

ಈಗಾಗಲೇ ನಾವು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಇನ್ನಿತರ ಭಾಗಗಳಿಗೂ ತೆರಳಲಿದ್ದೇವೆ. ನಮ್ಮಲ್ಲಿ ಯಾವುದೇ ಬಣವಿಲ್ಲ. ನಾವು ಕೂಡ ಬಿಜೆಪಿ ಮೂಲಕವೇ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಬಹಳಷ್ಟು ಸಂಸದರು, ಶಾಸಕರು ಮತ್ತು ಅನೇಕ ಮುಖಂಡರು ಬೆಂಬಲ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next