ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯಯವರು ರಾಷ್ಟ್ರಪತಿ ಬಗ್ಗೆ ಸಿಎಂ ಅಗೌರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿಯವರ ಕುರಿತಾಗಿ ಅವಹೇಳನಕಾರಿ ಮಾತು ಸಿಎಂ ಬಾಯಿಯಲ್ಲಿ ಬಾಯಿತಪ್ಪಿ ಬಂದಿದೆ ಅಂತ ಅನಿಸುತ್ತಿಲ್ಲ. ಅದು ಅವರ ಅಂತರಾಳದ ಭಾವನೆಗಳನ್ನು ಮಾತಿನ ಮೂಲಕ ಹೊರ ಹಾಕಿದ್ದಾರೆ ಎಂದು ಸುದ್ದಿಗಾರರರೊಂದಿಗೆ ಮಾತನಾಡಿ ಟೀಕಿಸಿದರು.
ಸಿದ್ದರಾಮಯ್ಯ ಒಬ್ಬ ಅನುಭವಿ ಸಿಎಂ, ಅವರಿಂದ ರಾಷ್ಟ್ರಪತಿಗಳ ಬಗ್ಗೆ ಅಗೌರವ ಮಾತು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮುಖ್ಯಮಂತ್ರಿ ಬಾಯಿಯಿಂದ ಯಾಕೆ ಈ ಮಾತು ಹೊರಡಿತು ಎನ್ನುವುದು ನಿಜವಾಗಿಯೂ ಆಶ್ವರ್ಯ ಮೂಡಿಸಿದೆ ಎಂದರು.
ರಾಷ್ಟ್ರಪತಿ ಸ್ಥಾನಕ್ಕೆ ಅಗೌರವದ ರೀತಿ ಮಾತನಾಡಿರುವುದು. ಎಲ್ಲೋ ಒಂದು ಕಡೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ನೋವು ಕಾಡುತ್ತಿದೆ. ಅತ್ಯುನ್ನತ ಸ್ಥಾನದಲ್ಲಿ ದಲಿತ ಮಹಿಳೆ ಕೂತಿದ್ದಾರೆಂದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ದಲಿತರನ್ನು ಗುತ್ತಿಗೆ ತೆಗೆದುಕೊಂಡಂತೆ ಮಾತನಾಡುವುದು ಕಾಂಗ್ರೆಸ್ ನವರ ಭಾವನೆಯಾಗಿದೆ. ದಲಿತರ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುತ್ತಾ ಗುತ್ತಿಗೆ ತಗೊಂಡಂತೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ನಡವಳಿಕೆ ಗಮನಿಸಿ 27 ಕ್ಕೂ ಹೆಚ್ಚು ಹಿಂದುಳಿದ ಸಮಾಜಕ್ಕೆ ಸೇರಿದವರನ್ನು ಕೇಂದ್ರದ ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡಿದ್ದಾರೆ. ದೇಶದ ಅತ್ಯುನ್ನತ ಸ್ಥಾನಕ್ಕೆ ದಲಿತ ಮಹಿಳೆಯನ್ನು ಕೂಡಿಸಿದ್ದಾರೆ. ಇದ್ಯಾವುದನ್ನೂ ಸಹಿಸಿಕೊಳ್ಳಲು ಕಾಂಗ್ರೆಸ್ ನವರಿಗೆ ಆಗುತ್ತಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.