Advertisement

Kalaburagi; ಜ.29 ರಿಂದ 9 ದಿನಗಳ ಕಾಲ 7ನೇ ಭಾರತೀಯ ಸಂಸ್ಕೃತಿ ಉತ್ಸವ

01:33 PM Aug 09, 2024 | Team Udayavani |

ಕಲಬುರಗಿ: ಭಾರತೀಯ ಮೌಲ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಯುವ ಪೀಳಿಗೆಯಲ್ಲಿ ಗಟ್ಟಿಗೊಳಿಸಲು ಮತ್ತು ದೇಶದ ವಿವಿಧ ಕ್ಷೇತ್ರಗಳಲ್ಲಿ ನೇತೃತ್ವ ವಹಿಸಲು ಬೇಕಾಗಿರುವ ಆತ್ಮವಿಶ್ವಾಸವನ್ನು ರೂಪಿಸಲು ಆಯೋಜಿಸುತ್ತಿರುವ ಕುಂಭಮೇಳದ ನಂತರದ ಅತಿದೊಡ್ಡ ಭಾರತ ವಿಕಾಸ ಸಂಗಮದ ಏಳನೇ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸಿದ್ಧತೆಗಳು ನಡೆದಿವೆ.‌

Advertisement

ಭಾರತ ವಿಕಾಸ ಸಂಗಮ ಮೂಲಕ ಇಡೀ ದೇಶದಲ್ಲಿ ಸಂಚಲನ ಮೂಡಿಸಿರುವ ಭಾರತೀಯ ಸಂಸ್ಕೃತಿ ಉತ್ಸವ-7 ಈ ಸಲ ಬರುವ 2025ರ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ಒಂಭತ್ತು ದಿನಗಳ ಕಾಲ ಜಿಲ್ಲೆಯ ಸೇಡಂ ಪಟ್ಟಣ ಹತ್ತಿರದ ಬೀರನಳ್ಳಿ‌ ಸೀಮಾಂತರ ಪ್ರದೇಶದ ವಿಶಾಲವಾದ 240 ಎಕರೆ ಭೂಮಿಯಲ್ಲಿ ಐತಿಹಾಸಿಕವಾಗಿ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ ಎಂದು 7ನೇ ಭಾರತೀಯ ಸಂಸ್ಕೃತಿ ಉತ್ಸವದ ನಿರ್ವಹಣಾ ಸಮಿತಿಯ ಮುಖ್ಯಸ್ಥರು ಹಾಗೂ ವಿಕಾಸ ಅಕಾಡೆಮಿ ಮುಖ್ಯಸ್ಥರಾಗಿರುವ ಮಾಜಿ ಸಂಸದ ಡಾ.‌ಬಸವರಾಜ ಪಾಟೀಲ್ ಸೇಡಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೇಡಂನ ಕೊತ್ತಲ‌ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಆಶ್ರಯ ದಲ್ಲಿ ನಡೆಯುವ ಏಳನೇ ಭಾರತೀಯ ಸಂಸ್ಕೃತಿ ಉತ್ಸವ ಸೇಡಂದಲ್ಲಿ ನಡೆಸುವ ಕುರಿತಾಗಿ 10 ವರ್ಷಗಳ ಹಿಂದೆಯೇ ನಿರ್ಧರಿಸಲಾಗಿದೆ.‌15 ವರ್ಷಗಳ ಹಿಂದೆ ಯಾರೂ ನಿರೀಕ್ಷಿಸದ ಮಟ್ಟಿಗೆ ಯಶಸ್ವಿಯಾಗಿ ನಡೆದ ಕಲಬುರಗಿ ಕಂಪುಗಿಂತ ಈ ಉತ್ಸವ ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ಬಹುಪಯೋಗವಾಗಲಿದೆ. ‌ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ಘೋಷವಾಕ್ಯದಡಿ ನಡೆಯಲಿದೆ. ಒಟ್ಟಾರೆ ಇಡೀ ಭಾರತ ದೇಶದಲ್ಲಿ ಈ ಉತ್ಸವ ಸಂಚಲನ ಹಾಗೂ ಹೊಸ ಪರಿವರ್ತನೆಗೆ ನಾಂದಿ ಹಾಡಲಿದೆ ಎಂದು ವಿವರಣೆ ನೀಡಿದರು.

ಪ್ರಕೃತಿ ಕೇಂದ್ರಿತ ವಿಕಾಸದ ಚಿಂತನೆಗಳ ಕೆ.ಎನ್ ಗೋವಿಂದಾಚಾರ್ಯ ಕನಸಿನ  7ನೇ ಭಾರತೀಯ ಸಂಸ್ಕೃತಿ ಉತ್ಸವ ಸಂಪೂರ್ಣವಾಗಿ ಪ್ರಕೃತಿ ಅರಾಧಕರಾಗಿದ್ದ ಪರಮ ಪೂಜ್ಯ ಸಿದ್ದೇಶ್ವರ ಶ್ರೀ ಗಳಿಗೆ ಸಮರ್ಪಣೆಯಾಗಲಿದೆ. ಸಾವಯವ ಕೃಷಿಯ ಕನ್ನಡ ನಾಡಿನ ಹರಿಕಾರ ಸ್ವರ್ಗಿಯ ಎಲ್ ನಾರಾಯಣ, ಡಾ.‌ಎಸ್.‌ಎ.‌ಪಾಟೀಲ್ ಹಾಗೂ ಸ್ವದೇಶಿ ಚಳುವಳಿಯ ಮೇರು ವ್ಯಕ್ತಿತ್ವ ಹೊಂದಿದ್ದ ರಾಜೀವ್ ದೀಕ್ಷಿತ ಮುಂತಾದ ಶ್ರೇಷ್ಠರಿಗೂ ಈ ಕಾರ್ಯಕ್ರಮ ಸಮರ್ಪಣೆಯಾಗಲಿದೆ ಎಂದು ಡಾ.‌ಸೇಡಂ ತಿಳಿಸಿದರು.

Advertisement

21 ವರ್ಷದ ಭಾರತೀಯ ವಿಕಾಸ ಅಕಾಡೆಮಿಯು ಸಮಾಜದ ಬಲದಿಂದ ಸಮಗ್ರ ಕಲ್ಯಾಣ‌ ಕರ್ನಾಟಕ ಕಲ್ಯಾಣ ಕರ್ನಾಟಕವನ್ನೇ ಕರ್ಮಭೂಮಿಯನ್ನಾಗಿಸಿಕೊಂಡು ಇಲ್ಲಿಯವರೆಗೆ ಸರ್ಕಾರದ ಭೀಕ್ಷೆಯೂ ಹಾಗೂ ಸಂಘರ್ಷವಿಲ್ಲದೇ 220 ಕೋ.ರೂ ಮಿಕ್ಕಿ ಬಹುಮುಖಿ ಜನಹಿತ ಕಾರ್ಯಗಳನ್ನು ಮಾಡಿ ಅಫೂರ್ವ ದಾಖಲೆ ನಿರ್ಮಿಸಲಾಗಿದೆ ಎಂದರು.

ವೈವಿದ್ಯಮಯ ಕಾರ್ಯಕ್ರಮ: ಒಂಭತ್ತು ದಿನಗಳ ಕಾಲ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವ ದಲ್ಲಿ ಆರಂಭದಲ್ಲಿ ಮಾತೃ ಸಮಾವೇಶ, ಶೈಕ್ಷಣಿಕ- ಯುವ ಹಾಗೂ ಗ್ರಾಮ ಕೃಷಿ ಸಮಾವೇಶ  ಪ್ರಮುಖ ವಾಗಿ ನಡೆದರೆ ಆಹಾರ ಮತ್ತು ಆರೋಗ್ಯ ಸಮಾವೇಶ , ಸ್ವಯಂ ಉದ್ಯೋಗ ಸಮಾವೇಶ, ಸೇವಾ ಶಕ್ತಿ ‌ಸಮಾವೇಶ ನಡೆದು ಕೊ‌ನೆಗೆ ದೇಶ, ಧರ್ಮ ಹಾಗೂ ಸಂಸ್ಕೃತಿ ಸಮಾವೇಶದೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ.

800 ಮಳಿಗೆ: ಒಂಭತ್ತು ದಿನಗಳ ಕಾಲ ನಡೆಯುವ ಸಂಸ್ಕೃತಿ ಉತ್ಸವಕ್ಕೆ 80 ಸಾವಿರ ಜನರು ಕುಳಿತುಕೊಳ್ಳುವ ಮುಖ್ಯ ವೇದಿಕೆಯಲ್ಲದೇ ಶಾಸ್ತ್ರೀಯ ಸಂಗೀತ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಡೆಯುವಂತಾಗಲು ಇನ್ಮೇರಡು  ವೇದಿಕೆಗಳನ್ನು ನಿರ್ಮಿಸಲಾಗಿತ್ತಿದೆ. ಸರ್ಕಾರದಿಂದ ಇಂತದ್ದೇ ಸಮಾವೇಶ ಮಾಡಬೇಕೆಂದರೆ ಎರಡು ಸಾವಿರ ಕೋ.ರೂ ತಗಲಬಹುದು. ಆದರೆ ಎಲ್ಲವನ್ನು ಖುದ್ದಾಗಿ‌‌ ಮುತುವರ್ಜಿ ವಹಿಸಿದ ಪರಿಣಾಮ‌ ಹಾಗೂ ಕೆಲವು ಸೌಲಭ್ಯಗಳನ್ನು ದಾನಿಗಳೇ ಮುಂದೆ ನಿಂತು ಮಾಡುತ್ತಿರುವ ಹಿನ್ನೆಲೆಯಲ್ಲಿ 22 ಕೋ.ರೂ ತಗಲುಬಹುದಾಗಿದೆ. ಒಟ್ಟಾರೆ ಕೊನೆಯದಾಗಿ ವಿಕಾಸ ಅಕಾಡೆಮಿಯಿಂದ 10 ಕೋ.ರೂ ಖರ್ಚಾಗಬಹುದಾಗಿದೆ.‌ ಹೀಗಾಗಿ ದೃಷ್ಟಿ ಬದಲಾದರೆ ಸೃಷ್ಟಿ ಬದಲಾದೀತು ಎಂಬುದು ತಮ್ಮ ಧ್ಯೇಯವಾಗಿದೆ ಎಂದು ಡಾ.‌ಬಸವರಾಜ ಪಾಟೀಲ್ ಸೇಡಂ ವಿವರಿಸಿದರು.

ಸುದ್ದಿಗೋಷ್ಟಿ ಯಲ್ಲಿ ಉಪಸ್ಥಿತರಿದ್ದ ಸೇಡಂ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿರುವ ಪೂಜ್ಯ ಸದಾಶಿವ ಸ್ವಾಮಿಗಳು ಮಾತನಾಡಿ, ಕೊತ್ತಲ‌ ಬಸವೇಶ್ವರ ಶಿಕ್ಷಣ ಸಮಿತಿಯನ್ನು ಹೆಚ್ವಿನ ನಿಟ್ಟಿನಲ್ಲಿ ಬೆಳೆಸದೇ ಈ ಭಾಗ ಬೆಳೆಯಲಿ- ಅಭಿವೃದ್ಧಿ ಹೊಂದಲಿ ಎಂಬ ಸದಾಶಯ ಹಿನ್ನೆಲೆಯಲ್ಲಿ ಕಳೆದ ಐದು ದಶಕಗಳಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಇದರಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಪ್ರಮುಖ ವಾಗಿದೆ.‌ ಉತ್ಸವದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ 51 ಜನ ಹಾಗೂ ಕಕ ಭಾಗದ 51, ದೇಶದ 51 ಹಾಗೂ 51 ಅನಿವಾಸಿ ಭಾರತೀಯ ಯರಿಗೆ ವಿಶೇಷವಾಗಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು. 7 ನೇ ಭಾರತೀಯ ಸಂಸ್ಕೃತಿ ಉತ್ಸವ ಸಮಿತಿಯ ಸಹ ಸಂಯೋಜಕ ಮಾರ್ತಂಡ ಶಾಸ್ತ್ರೀ, ಪ್ರಮುಖರಾದ ಪ್ರೊ.‌ಕೆ.ಎಸ್. ಮಾಲಿ ಪಾಟೀಲ್, ಉಮೇಶ ಶೆಟ್ಟಿ, ವಿ.‌ಶಾಂತರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next