Advertisement

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

09:16 PM Sep 17, 2024 | Team Udayavani |

ಕಲಬುರಗಿ: ತುಂಗಭದ್ರಾ ನದಿ ಮತ್ತೆ ಭರ್ತಿಯಾಗಿರುವ ಹಿನ್ನೆಲೆಯಲ್ಲೆ ಸೆ.22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಬಾಗಿನ ಅರ್ಪಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ತುಂಗಭದ್ರಾ ಮಧ್ಯ ಕರ್ನಾಟಕದ ಪ್ರಮುಖ ಜೀವನದಿ. ಡ್ಯಾಂನ 19 ಗೇಟ್‌ ಮುರಿದು ಬಿದ್ದು ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗಿತ್ತು. ಜಲಾಶಯ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ತಂತ್ರಜ್ಞರು ಸ್ಟಾಪ್‌ಲಾಗ್‌ ಅಳವಡಿಕೆಯಿಂದ ಜಲಾಶಯ ಮತ್ತೆ ಭರ್ತಿಯಾಗಿದೆ.

ಈ ಹಿನ್ನೆಲೆಯಲ್ಲಿ 22ರಂದು ಬಾಗಿನ ಅರ್ಪಿಸಲಾಗುವುದು. ಇದೇ ವೇಳೆ ಕ್ರೆಸ್ಟ್‌ಗೇಟ್‌ ದುರಸ್ತಿಗೆ ಶ್ರಮಿಸಿದ ಅಧಿಕಾರಿಗಳು, ಎಂಜಿನಿಯರ್‌ಗಳು, ಕಾರ್ಮಿಕರು ಸೇರಿದಂತೆ 108 ಜನರನ್ನು ಸತ್ಕರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next