Advertisement

Sedam: ಈಜಲು ಹೋಗಿ ಯುವಕ ನಾಪತ್ತೆ

02:23 PM Sep 08, 2024 | Team Udayavani |

ಸೇಡಂ: ಪಟ್ಟಣದ ಕಮಲಾವತಿ ನದಿಯಲ್ಲಿ ಈಜಲು ಹೋಗಿ ಯುವಕ ನಾಪತ್ತೆಯಾಗಿರುವ ಘಟನೆ ಸೆ.8ರ ರವಿವಾರ 12 ಗಂಟೆ ಸುಮಾರಿಗೆ ನಡೆದಿದೆ.

Advertisement

ರಾಹುಲ್ ನಾಗಪ್ಪ ಯಳ್ಳಿ (17) ಈಜಲು ಹೋಗಿ ಯುವಕ ನಾಪತ್ತೆಯಾದ ಯುವಕ.

ಇತ್ತೀಚಿಗೆ ತಾಲೂಕಿನ ಸಂಗಾವಿಯಲ್ಲಿ  ವ್ಯಕ್ತಿಯೋರ್ವ ಕೊಚ್ಚಿಹೋದ ಘಟನೆ ಮಾಸುವ ಮುನ್ನವೇ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.

ಸಿಪಿಐ ಮಹಾದೇವ ದಿಡ್ಡಿಮನಿ, ಪಿಎಸ್ಐ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಮುಳುಗು ತಜ್ಞರನ್ನು ಕರೆಸಿ ಶೋಧ ಕಾರ್ಯ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next