ಪುಂಜಾಲಕಟ್ಟೆ: ಜಿಲ್ಲಾ ಕಂಬಳ ಸಮಿತಿಯಡಿ ಬರುವ 2022-23ರ ಕಂಬಳ ಋತುವಿನ ಪ್ರಥಮ ಕಂಬಳ ದಕ್ಷಿಣ ಕನ್ನಡ ಜಿಲ್ಲೆಯ ಕಕ್ಯಪದವಿನಲ್ಲಿ ಸಂಪನ್ನವಾಗಿದೆ. ಕಕ್ಯಪದವಿನ 10ನೇ ವರ್ಷದ “ಸತ್ಯ – ಧರ್ಮ” ಜೋಡುಕರೆ ಕಂಬಳ ಕೂಟ ಶನಿವಾರ ಮತ್ತು ರವಿವಾರ ನಡೆಯಿತು.
ಕೂಟದಲ್ಲಿ ಒಟ್ಟು 214 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ 2 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 9 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 19 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 31 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 26 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 75 ಜೊತೆ ಮತ್ತು ನೇಗಿಲು ಸಬ್ ಜೂನಿಯರ್ ವಿಭಾಗದಲ್ಲಿ 52 ಜೊತೆ ಕೋಣಗಳು ಭಾಗವಹಿಸಿದ್ದವು.
ಕಕ್ಯಪದವು ಕಂಬಳ 2022ರ ಫಲಿತಾಂಶ
ಕನೆಹಲಗೆ
(ಸಮಾನ ಬಹುಮಾನ)
ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ
ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
ಅಡ್ಡ ಹಲಗೆ
ಪ್ರಥಮ: ನಾರಾವಿ ಯುವರಾಜ್ ಜೈನ್
ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ಪೆರಿಯಾವು ಗುತ್ತು ಸತೀಶ್ ಗಟ್ಟಿಯಾಳ್
ಹಲಗೆ ಮೆಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ
ಹಗ್ಗ ಹಿರಿಯ
ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ “ಎ”
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ದ್ವಿತೀಯ: ರಾಯಿ ಶೀತಲ ಅಗರಿ ರೂಪ ರಾಜೇಶ್ ಶೆಟ್ಟಿ “ಎ”
ಓಡಿಸಿದವರು: ಬೈಂದೂರ್ ಹರೀಶ್
ಹಗ್ಗ ಕಿರಿಯ
ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
ದ್ವಿತೀಯ: ಬೆಳುವಾಯಿ ಪುತ್ತಿಗೆ ಪೆರೋಡಿ ಗುತ್ತು ತಾನಾಜಿ ಬಿ ಶೆಟ್ಟಿ
ಓಡಿಸಿದವರು: ಮರೋಡಿ ಶ್ರೀಧರ್
ನೇಗಿಲು ಹಿರಿಯ
ಪ್ರಥಮ: ಬೆಳ್ಳಿಪ್ಪಾಡಿ ಕೈಪ ಕೇಶವ ಮಂಕು ಭಂಡಾರಿ “ಬಿ”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಕನಡ್ತ್ಯಾರ್ ಕೃಷ್ಣ ಶೆಟ್ಟಿ
ಓಡಿಸಿದವರು: ಕಾವೂರ್ ತೋಟ ಸುದರ್ಶನ್
ನೇಗಿಲು ಕಿರಿಯ
ಪ್ರಥಮ: ಜೈ ತುಳುನಾಡ್ ಕಕ್ಯಪದವು ಪುನ್ಕೆದಡಿ ರಾಮಯ್ಯ ಭಂಡಾರಿ
ಓಡಿಸಿದವರು: ಕಕ್ಯಪದವು ಪೆಂರ್ಗಾಲು ಕೃತಿಕ್
ದ್ವಿತೀಯ: ಪಣೋಲಿಬೈಲು ಭಂಡಾರಮನೆ ಶಿವಾನಂದ ಕುಲಾಲ್
ಓಡಿಸಿದವರು: ಪೆರಿಂಜೆ ಪ್ರಮೋದ್
ನೇಗಿಲು ಸಬ್ ಜೂನಿಯರ್
ಪ್ರಥಮ: ಮರೋಡಿ ಕೆಳಗಿನಮನೆ ಕೃತೇಶ್ ಅಣ್ಣಿ ಪೂಜಾರಿ
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ದ್ವಿತೀಯ: ಭಟ್ಕಳ ಎಚ್.ಎನ್. ನಿವಾಸ ಪಿನ್ನುಪಾಲ್
ಓಡಿಸಿದವರು: ಭಟ್ಕಳ ವಿನೋದ್